ಮನೆಮನೆಗೂ ನಳ ಜಲ ನೀಡುವುದೇ ಗುರಿ, ಜಲ ಜೀವನ್ ಮಿಷನ್ ಗೆ ಚಾಲನೆ ನೀಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
1 min readಮನೆಮನೆಗೂ ನಳ ಜಲ ನೀಡುವುದೇ ಗುರಿ ಜಲ ಜೀವನ್ ಮಿಷನ್ ಗೆ ಚಾಲನೆ ನೀಡಿದ ಶಾಸಕ ಬಾಗೇಪಲ್ಲಿ ತಾಲೂಕಿನಲ್ಲಿ ಜಲ ಜೀವನ್ ಮಿಷನ್ ಗೆ ಚಾಲನೆ
ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದ ಮನೆ ಮನೆಗೂ ನಲ್ಲಿ ಸಂಪರ್ಕದ ಮೂಲಕ ಶುದ್ದ ಕುಡಿಯುವ ನೀರು ಪೂರೈಸಲಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕೋರಿದರು.
ಬಾಗೇಪಲ್ಲಿ ತಾಲ್ಲೂಕಿನ ಕೊತ್ತಪಲ್ಲಿಯಲ್ಲಿ 50 ಲಕ್ಷ, ಮರವಪಲ್ಲಿ ತಾಂಡಾ 50 ಲಕ್ಷ, ಆಚೇಪಲ್ಲಿ 80 ಲಕ್ಷ, ತೀಮಾಕಲಪಲ್ಲಿಯಲ್ಲಿ 50 ಲಕ್ಷ, ಕನಮುಕುಂಟ 30 ಲಕ್ಷ, ಹನುಮಂತರಾಯಣಪುರ 40 ಲಕ್ಷ ಒಟ್ಟು 3 ಕೋಟಿ ವೆಚ್ಚದಲ್ಲಿ ಮನೆ ಮನೆಗೂ ನಲ್ಲಿ ಸಂಪರ್ಕದ ಮೂಲಕ ಶುದ್ದ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಕಾಮಗಾರಿಯ ಗುದ್ದಲಿಪೂಜೆಯನ್ನು ಬುಧವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೆರವೇರಿಸಿ ಮಾತನಾಡಿದರು.
ಶುದ್ದ ಕುಡಿಯುವ ನೀರು ಸಿಗದೇ ಗ್ರಾಮೀಣ ಜನರು ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಅನುಧಾನಗಳಡಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಸಾರ್ವಜನಿಕರಲ್ಲಿ ಜಲ ಜೀವನ್ ಮಿಷನ್ ಯೋಜನೆ ಬಗ್ಗೆ ಭಿನ್ನಾಭಿಪ್ರಾಯ ಇದೆ. ಆದರೆ ಕೆಲವರು ಈ ನಲ್ಲಿಗೆ ಮೀಟರ್ ಅಳವಡಿಸಿ ಹಣ ವಸೂಲು ಮಾಡುತ್ತಾರೆ ಎಂಬ ಅನುಮಾನ ಇದೆ, ಇದರ ಬಗ್ಗೆ ಯಾವುದೇ ಅನುಮಾನ ಬೇಡ ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಯಾವುದೇ ಹಣ ನೀಡಬೇಕಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ಜೆಸಿಪಿ ಮಂಜುನಾಥ ರೆಡ್ಡಿ, ಪರಗೋಡು ಗ್ರಾಮ ಪಂಚಾಯತಿ ಅದ್ಯಕ್ಷ ಶ್ರೀನಿವಾಸ್ ರೆಡ್ಡಿ, ಶ್ರೀರಾಮ ನಾಯಕ್, ಪರಗೋಡು ಪಿಡಿಓ ನಾಗರತ್ನ ಇದ್ದರು.