ಸುಸಜ್ಜಿತ ಶಾಲಾ ಕಟ್ಟಡ ಇದ್ದರೂ ಬೀಗ! ಚಿಕ್ಕಬಳ್ಳಾಪುರ ತಾಲೂಕಿನ ನಲ್ಲರಾಲ್ಲಹಳ್ಳಿಯ ಶಾಲೆಗೆ ಬೀಗ
1 min readಸುಸಜ್ಜಿತ ಶಾಲಾ ಕಟ್ಟಡ ಇದ್ದರೂ ಬೀಗ! ಮಕ್ಕಳಿಲ್ಲದೆ ಮುಚ್ಚಿದ ಎರಡು ಶಾಲಾ ಕೊಠಡಿಗಳು ಚಿಕ್ಕಬಳ್ಳಾಪುರ ತಾಲೂಕಿನ ನಲ್ಲರಾಲ್ಲಹಳ್ಳಿಯ ಶಾಲೆಗೆ ಬೀಗ
ಶಾಲಾ ಕಟ್ಟಡವಿಲ್ಲಧ ಪಾರ್ಕಿಂಗ್ ಜಾಗದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಸ್ಟೋರಿ ನೆನ್ನೆ ತಾನೆ ನೋಡಿದ್ದು ನೆನಪಿದೆ ಅಲ್ವಾ? ಇದು ಅದಕ್ಕೆ ವಿರುದ್ಧವಾದ ಸ್ಟೋರಿ. ಏನು ಅಂತೀರಾ? ನೀವೇ ನೋಡಿ.
ಇಲ್ಲಿ ಕಾಣ್ತಾ ಇದೆಯಲ್ಲ? ಎರಡು ಸುಸಜ್ಜಿತ ಕಟ್ಟಡಗಳು. ನೀವು ಊಹಿಸಿದಂತೆ ಶಾಲಾ ಕೊಠಡಿಗಳು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಯಾಕೆ ಹೀಗೆ ಬೇಲಿ ಹಬ್ಬಿಕೊಂಡಿದೆ ಅನ್ನೋ ಅನುಮಾನ ಕಾಡುತ್ತಿದೆಯಲ್ಲ. ನಿಜ, ನಿಮ್ಮ ಅನುಮಾನ ಸರಿ ಇದೆ. ಈ ಶಾಲಾ ಕಟ್ಟಡಗಳಿಗೆ ಬೀಗ ಜಡಿದು ಹಲವು ವರ್ಷಗಳೇ ಆಗಿದೆ.
ಈ ಶಾಲಾ ಕಟ್ಟಡಗಳಿರೋದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ. ಈ ಹಿಂದೆ ಆರೋಗ್ಯ ಸಚಿವರಾಗಿದ್ರಲ್ಲ? ಡಾ.ಕೆ. ಸುಧಾಕರ್ ಅವರು. ಅವರ ಹುಟ್ಟೂರು ಪೆರೇಸಂದ್ರ ಕ್ಲಸ್ಟರ್ ವ್ಯಾಪ್ತಿಯ ಶಾಲಾ ಕಟ್ಟಡವಿದು.
ಪೆರೆಸಂದ್ರ ಕ್ಲಸ್ಟರ್ ವ್ಯಾಪ್ತಿಯ ನಲ್ಲರಾಲ್ಲಹಳ್ಳಿ ಗ್ರಾಮದಲ್ಲಿ ಸುಮಾರು 70 ಮನೆಗಳಿವೆ. ಈ ಹಿಂದೆ ಈ ಗ್ರಾಮದ ಎಲ್ಲ ಮಕ್ಕಳೂ ಇದೇ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಕಾರಣಕ್ಕೋ ಅಥವಾ ಗುತ್ತಿಗೆದಾರನ ಹಿತ ಕಾಯುವ ಉದ್ಧೇಶದಿಂದಲೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಗ್ರಾಮದಲ್ಲಿ ಎರಡು ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಆದರೆ ಶಾಲಾ ಕಟ್ಟಡಗಳು ನಿರ್ಮಾಣವಾದ ನಂತರ ಈ ಗ್ರಾಮದಲ್ಲಿ ಮಕ್ಕಳ ಕೊರತೆ ಎದುರಾಗಿದೆ. ಅಂದರೆ ಗ್ರಾಮದಲ್ಲಿ ಮಕ್ಕಳು ಕೊರತೆಯಾಗಿಲ್ಲ. ಬದಲಿಗೆ ಗ್ರಾಮದ ಮಕ್ಕಳೆಲ್ಲ ಖಾಸಗಿ ಶಾಲೆಗಳತ್ತ ಮುಖ ಮಾಡೊದ್ದಾರೆ. ಇದರಿಂದ ಸಹಜವಾಗಿಯೇ ಸರ್ಕಾರಿ ಶಾಲೆ ದಾಖಲಾತಿ ಕುಸಿದಿದೆ.
ಯಾವುದೇ ಗ್ರಾಮದಲ್ಲಿ ಏಕ ಶಿಕ್ಷಕ ಶಾಲೆಯನ್ನು ಶಿಕ್ಷಣ ಇಲಾಖೆ ಮುನ್ನಡೆಸಬೇಕಾದರೆ ಕನಿಷ್ಠ 10 ಮಕ್ಕಳಾದರೂ ವ್ಯಾಸಂಗ ಮಾಡುತ್ತಿರಬೇಕು ಎಂಬ ನಿಯಮವಿದೆ. ಆದರೆ ನಲ್ಲರಾಲ್ಲಹಳ್ಳಿಯ ಶಾಲೆಗೆ 10 ಮಕ್ಕಳು ದಾಖಲಾಗಿಲ್ಲ. ಪರಿಣಾಮ ಶಾಲೆಗೆ ಬೀಗ ಜಡಿಯಲಾಗಿದೆ.
ಇನ್ನು ಶಿಕ್ಷಣ ಇಲಾಖೆಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಗ್ರಾಮಸ್ಥರ ಮನವೊಲಿಸಿ, ಉತ್ತಮ ಶಿಕ್ಷಣ ನೀಡುವ ಭರವಸೆ ನೀಎಇ, ಮಕ್ಕಳನ್ನು ಶಾಲೆಗೆ ಕರೆತರಬಹುದಿತ್ತು. ಆದರೆ ಬರೋ ಸಂಬಳ ಬರುತ್ತಿರಬೇಕಾದರೆ ಶಿಕ್ಷಕರೂ ಸೇರಿ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾಕೆ ಇಂತಹ ಶ್ರಮ ಪಡುತ್ತಾರೆ ಹೇಳಿ? ಇಲ್ಲಿಯೂ ಅದೇ ಆಗಿದ್ದು. ಮಕ್ಕಳಿಲ್ಲ ಎಂಬ ನೆಪವೊಡ್ಡಿ ಶಾಲೆಗೆ ಬೀಗ ಜಡಿಯಲಾಗಿದೆ.
ನೋಡಿದ್ರಲ್ಲ, ಚಿಕ್ಕಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾತನ್ನ. ಕಳೆದ ಹಲವು ವರ್ಷಗಳಿಂದ ಬೀಗ ಜಡಿದ ಈ ಶಾಲೆಯನ್ನ ಮತ್ತೆ ಆರಂಭ ಮಾಡಲು ಶ್ರಮಿಸುತ್ತಾರಂತೆ. ಇದು ನಿಜವಾಗಿಯೂ ಸಾಧ್ಯವಾಗುತ್ತಾ? ಗೊತ್ತಿಲ್ಲ.
ಇನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಸರ್ಕಾರಿ ಶಾಲೆಯಲ್ಲಿ ಓದಿದವರು. ಇದನ್ನು ಅವರೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸರ್ಕಾರಿ ಶಾಲಾ ಮಕ್ಕಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಭರವಸೆಯನ್ನೂ ಶಾಕರು ನೀಡಿದ್ದಾರೆ. ಸಾಲದೆಂಬಂತೆ ಈ ಶಾಸಕರ ಹುಟ್ಟೂರೂ ಪೆರೇಸಂದ್ರ ಗ್ರಾಮವೇ ಆಗಿದೆ. ಇವರ ಸ್ವಗ್ರಾಮದ ವ್ಯಾಪ್ತಿಯ ಸರ್ಕಾರಿ ಶಾಲೆಯೊಂದು ಬಾಗಿಲು ಮುಚ್ಚಿರುವುದು ಅವರ ಘನತೆಗೆ ಸರಿಹೊಂದುವುದಿಲ್ಲ.
ಹಾಗಾಗಿ ಶಾಸಕ ಪ್ರದೀಪ್ ಈಶ್ವರ್ ಅವರು ಕೂಡಲೇ ಇತ್ತ ಗಮನ ಹರಿಸಿ ಬೀಗ ಜಡಿದ ನಲ್ಲರಾಲ್ಲಹಳ್ಳಿ ಸರ್ಕಾರಿ ಶಾಲೆಯನ್ನು ಪುನರಾರಂಭ ಮಾಡಲು ಮುಂದಾಗಲಿ ಎಂದು ಆಶಿಸೋಣ.