ರೈತರಿಗೆ ಆಧುನಿಕ ಕೃಷಿ ಪದ್ಧತಿಯಿಂದ ಹೆಚ್ಚು ಲಾಭ
1 min readರೈತರಿಗೆ ಆಧುನಿಕ ಕೃಷಿ ಪದ್ಧತಿಯಿಂದ ಹೆಚ್ಚು ಲಾಭ. ಆಧುನಿಕ ಪದ್ಧತಿಯಿಂದ ರೇಷ್ಮೇ ಗುಣಮಟ್ಟವೂ ಹೆಚ್ಚಳ, ರೇಷ್ಮೆ ಉತ್ಪಾದನಾ ಕೇಂದ್ರದ ವಿಜ್ಞಾನಿ ಮುನಿಸ್ವಾಮಿ ರೆಡ್ಡಿ
ರೈತರು ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡಲ್ಲಿ ಗುಣಮಟ್ಟದ ರೇಷ್ಮೆ ಉತ್ಪಾದನೆ ಸಾಧ್ಯವಾಗಲಿದೆ ಎಂದು ರೇಷ್ಮೆಹುಳು ಉತ್ಪಾದನಾ ಕೇಂದ್ರದ ವಿಜ್ಞಾನಿ ಡಾ.ಎಂ. ಮುನಿಸ್ವಾಮಿ ರೆಡ್ಡಿ ತಿಳಿಸಿದರು. ವಿಜಯಪುರದ ದೇವನಹಳ್ಳಿ ಮುಖ್ಯ ರಸ್ತೆಯ ರೇಷ್ಮೆ ಹುಳು ಉತ್ಪಾದನಾ ಕೇಂದ್ರದ విజ్ఞాని ಬೀಜೋತ್ಪಾದನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರೈತರ ಸಂವಾದದಲ್ಲಿ ಮಾತನಾಡಿದ ಅವರು, ರೇಷ್ಮೆ ಮಂಡಳಿಯಲ್ಲಿ ಗುಣಮಟ್ಟದ ರೇಷ್ಮೆ ಮೊಟ್ಟೆ ಉತ್ಪಾದಿಸಿ ಕರ್ನಾಟಕವಲ್ಲದೆ ಹೊರ ರಾಜ್ಯಗಳಿಗೂ ಸರಬರಾಜು ಮಾಡಲಾಗುತ್ತಿದೆ ಎಂದರು. ಅಲ್ಲದೇ ಗುಣಮಟ್ಟದ ರೇಷ್ಮೆ ಉತ್ಪಾದನೆ ಪ್ರೋತ್ಸಾಹಿಸಲು ಇಲಾಖೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ರೈತರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ಹಾಗೂ ಆಧುನಿಕ ಪದ್ಧತಿಯಲ್ಲಿ ರೇಷ್ಮೆ ಉತ್ಪಾದನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ರಾಜ್ಯದ ಇತರೆ ಜಿಲ್ಲೆಗಳಿಗಿಂತ ಬೆಂಗಳೂರು ಗ್ರಾಮಾಂತರ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೇಷ್ಮೆ ಬೇಸಾಯಕ್ಕೆ ಉತ್ತಮ ವಾತಾವರಣವಿದ್ದು, ಈ ಭಾಗದ ಬೆಳೆಗಾರರು
ಲಾಭದಾಯಕ ಬೇಸಾಯದಲ್ಲಿ ತೊಡಗಬೇಕು ಎಂದರು.
ರೈತಪರ ಹೋರಾಟಗಾರ ಮಳ್ಳೂರು ಶಿವಣ್ಣ ಮಾತನಾಡಿದರು. ರೈತರ ಸಂವಾದದಲ್ಲಿ ಸಾಧಕ ರೈತರನ್ನು
ಸನ್ಮಾನಿಸಲಾಯಿತು. ರೇಷ್ಮೆ ಮಂಡಳಿ ಅಧಿಕಾರಿಗಳಾದ ಅಶ್ವತ್ಥರೆಡ್ಡಿ, ನರೇಂದ್ರ ಕುಮಾರ್, ಪಿ.ಎಂ.ಎಂ.ರೆಡ್ಡಿ ರೈತರು ಇದ್ದರು.