ಪುರಾತನ ಧರ‍್ಮಿಕ ಸಂಸ್ಕೃತಿ ಪಾಲಿಸಿದರೆ ಮನಶ್ಸಾಂತಿ

ಆಸ್ತಿ ವಿವಾದ ಹಿನ್ನಲೆ ಒಂದೆ ಕುಟುಂಬದವರ ಜಟಾಪಟಿ

ಶ್ರೀದುರ್ಗಾಪರಮೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ

ಏಕಾಏಕಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

April 19, 2025

Ctv News Kannada

Chikkaballapura

‘RBI’ ಖಡಕ್ ಕ್ರಮ ; ಈ ಬ್ಯಾಂಕ್ ಲೈಸನ್ಸ್ ರದ್ದು, 4 ಬ್ಯಾಂಕ್’ಗಳಿಗೆ ದಂಡ ; ಇದ್ರಲ್ಲಿ ನಿಮ್ಮ ಖಾತೆಯೂ ಇದ್ಯಾ.?

1 min read

 ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಬ್ಯಾಂಕ್‌ಗಳ ಮೇಲೆ ತೀವ್ರ ನಿಗಾ ಇರಿಸಿದ್ದು, ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈಗಾಗ್ಲೇ ಹಲವು ಬ್ಯಾಂಕ್’ಗಳ ಲೈಸೆನ್ಸ್ ರದ್ದಾಗಿದ್ದರೆ, ಹತ್ತಾರು ಬ್ಯಾಂಕ್’ಗಳಿಗೆ ಭಾರಿ ದಂಡ ವಿಧಿಸಿರುವುದು ಗೊತ್ತಾಗಿದೆ.

ಇದ್ರಲ್ಲಿ ದೊಡ್ಡ ಸರ್ಕಾರಿ ಬ್ಯಾಂಕ್‌ಗಳೂ ಇವೆ ಎಂಬುದು ಗಮನಾರ್ಹ. ಇತ್ತೀಚೆಗಷ್ಟೇ ಆರ್ ಬಿಐ ಮತ್ತೊಂದು ಬ್ಯಾಂಕ್ ಮೇಲೆ ಕಠಿಣ ಕ್ರಮ ಕೈಕೊಂಡಿದ್ದು, ಪರವಾನಗಿ ರದ್ದುಪಡಿಸಿ ಆದೇಶ ಹೊರಡಿಸಿದೆ.

ಕೊಲ್ಲಾಪುರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಂಕರ ರಾವ್ ಪೂಜಾರಿ ನೂತನ ನಗರಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಪರವಾನಿಗೆಯನ್ನ ರದ್ದುಗೊಳಿಸಲಾಗಿದೆ. ಯಾವುದೇ ಬ್ಯಾಂಕಿಂಗ್ ಚಟುವಟಿಕೆಗಳನ್ನ ನಡೆಸಬಾರದು ಎಂದು ಆರ್‌ಬಿಐ ಬಹಿರಂಗಪಡಿಸಿದ್ದು, ಈ ಆದೇಶಗಳು ಡಿಸೆಂಬರ್ 4ರಿಂದ ಜಾರಿಗೆ ಬಂದಿವೆ.

ಶಂಕರ ರಾವ್ ಪೂಜಾರಿ ನೂತನ ನಗರಿ ಸಹಕಾರಿ ಬ್ಯಾಂಕ್ ಸಾಕಷ್ಟು ಬಂಡವಾಳವನ್ನ ಹೊಂದಿಲ್ಲ ಮತ್ತು ಆದಾಯದ ಮಾರ್ಗಗಳು ಸಂಪೂರ್ಣವಾಗಿ ನಿಂತುಹೋಗಿವೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 56, ಸೆಕ್ಷನ್ 11(1), ಸೆಕ್ಷನ್ 22(3)ರ ನಿಬಂಧನೆಗಳನ್ನ ಪಾಲಿಸದಿದ್ದಕ್ಕಾಗಿ ಪರವಾನಗಿಯನ್ನ ರದ್ದುಗೊಳಿಸಲಾಗುತ್ತಿದೆ ಎಂದು ಅದು ಹೇಳಿದೆ.

ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಕೆಲವು ವಿಭಾಗಗಳನ್ನು ಅನುಸರಿಸಲು ಸಹಕಾರಿ ಬ್ಯಾಂಕ್ ವಿಫಲವಾಗಿದೆ. ಬ್ಯಾಂಕಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡಿದರೆ ಅದು ಗ್ರಾಹಕರ ಮೇಲೆ ಪರಿಣಾಮ ಬೀರಲಿದ್ದು, ಈಗಾಗಲೇ ಠೇವಣಿ ಇಟ್ಟಿರುವವರಿಗೆ ಸಂಪೂರ್ಣ ಮರುಪಾವತಿ ಮಾಡುವ ಸ್ಥಿತಿಯಲ್ಲಿ ಬ್ಯಾಂಕ್ ಇಲ್ಲ ಎಂದು ಬ್ಯಾಂಕ್ ತಿಳಿಸಿದೆ. ಆದಾಗ್ಯೂ, ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಮೂಲಕ ಠೇವಣಿದಾರರಿಗೆ ಠೇವಣಿ ವಿಮೆ ರೂ. 5 ಲಕ್ಷದವರೆಗೆ ವಿಮೆ ಸೌಲಭ್ಯವಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.

ಇನ್ನೂ 4 ಬ್ಯಾಂಕ್‌ಗಳಿಗೆ ದಂಡ.!
ಆರ್‍ಬಿಐ ನಾಲ್ಕು ಸಹಕಾರಿ ಬ್ಯಾಂಕ್‌ಗಳಿಗೆ ವಿತ್ತೀಯ ದಂಡ ವಿಧಿಸಿದೆ. ಪಟ್ಟಿಯಲ್ಲಿ ಜಿಜಾಮಾತಾ ಮಹಿಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್, ಶ್ರೀ ಲಕ್ಷ್ಮೀಕೃಪಾ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್, ದಿ ಕೋನಾರ್ಕ್ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್, ದಿ ಚೆಂಬೂರ್ ನಾಗರೀಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ಸೇರಿವೆ. ಪುಣೆ ಮೂಲದ ಜಿಜಾಮಾತಾ ಮಹಿಳಾ ಸಹಕಾರಿ ಬ್ಯಾಂಕ್ 4 ಲಕ್ಷ ದಂಡ ವಿಧಿಸಿದೆ. ನೋ ಯುವರ್ ಕಸ್ಟಮರ್ ಗೈಡ್‌ಲೈನ್ಸ್ 2016ನ್ನ ಅನುಸರಿಸಲು ವಿಫಲವಾದ ಕಾರಣ ದಂಡವನ್ನ ವಿಧಿಸಲಾಗಿದೆ ಎಂದು ಅದು ಹೇಳಿದೆ.

ಅದೇ ರೀತಿ, ಶ್ರೀ ಲಕ್ಷ್ಮೀ ಕೃಪಾ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಕೂಡ ಕೆವೈಸಿ ಮಾರ್ಗಸೂಚಿಗಳನ್ನ ನಿರ್ಲಕ್ಷಿಸಿದ್ದಕ್ಕಾಗಿ ರೂ.1 ಲಕ್ಷ ದಂಡವನ್ನ ವಿಧಿಸಿದೆ. ಮತ್ತೊಂದೆಡೆ ಕೋನಾರ್ಕ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಠೇವಣಿ ಖಾತೆಗಳ ನಿರ್ವಹಣೆಯಲ್ಲಿ ದೋಷ ಕಂಡು 1 ಲಕ್ಷ ರೂಪಾಯಿ ಮತ್ತು ಚೆಂಬೂರ್ ನಾಗರಿಕ ಸಹಕಾರಿ ಬ್ಯಾಂಕಿಗೂ ಕೂಡ 1 ಲಕ್ಷ ದಂಡ ವಿಧಿಸಿದೆ.

About The Author

Leave a Reply

Your email address will not be published. Required fields are marked *