ಬಿಜೆಪಿ ಬಿಟ್ಟು ಹೋಗಲ್ಲ; ಫಲಿತಾಂಶದ ಬೆನ್ನಲ್ಲೇ ಎಸ್ಟಿಎಸ್ ಯು ಟರ್ನ್?
1 min readನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ (Assembly Election Results) ಬೆನ್ನಲ್ಲೇ ಪಕ್ಷದ ಮೇಲೆಯೇ ಮುನಿಸಿಕೊಂಡಿದ್ದ ಮಾಜಿ ಸಚಿವ ಎಸ್ಟಿ ಸೋಮಶೇಖರ್ (Former Minister ST Somashekhar) ಯುಟರ್ನ್ ತೆಗೆದುಕೊಂಡಂತೆ ಕಾಣಿಸುತ್ತಿದೆ. ಬಿಜೆಪಿ ಸಭೆಗಳಿಗೆ ಗೈರಾಗುತ್ತಿದ್ದ ಎಸ್ಟಿ ಸೋಮಶೇಖರ್, ಸದ್ಯಕ್ಕೆ ಪಕ್ಷ ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ.
ಮೂರು ರಾಜ್ಯಗಳ ಬಿಜೆಪಿ (BJP) ಗೆಲುವು ಏನು ಹೇಳೋಕೆ ಆಗಲ್ಲ. ಅದು ರಾಷ್ಟ್ರೀಯ ಪಕ್ಷಗಳಿಗೆ ಕಾಮನ್. ಸದನದಲ್ಲಿ ನನ್ನ ನಿಲುವು ಏನಿರುತ್ತೆ ಅಂದರೆ ಏನು ಹೇಳಲಿ? ಸದ್ಯಕ್ಕೆ ಬಿಜೆಪಿಯಲ್ಲಿ ಇದ್ದೇನೆ, ಮುಂದೆ ನೋಡೋಣ ಎಂದು ಎಸ್ಟಿ ಸೋಮಶೇಖರ್ ಹೇಳಿದರು.
ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಗಳ ಬಗ್ಗೆ ಚರ್ಚೆ ಆಗಬೇಕು. ಅದು ಬೆಂಗಳೂರಿಗಿಂತ ಬೆಳಗಾವಿಯವರಿಗೆ ಆಸಕ್ತಿ ಇರಬೇಕು ಎಂದು ಸೋಮಶೇಖರ್ ಹೇಳಿದರು.
ಚುನಾವಣೆ ಫಲಿತಾಂಶದ ಬಗ್ಗೆ ಆರ್.ಅಶೋಕ್ ಮಾತು
ಸುವರ್ಣ ಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪಂಚರಾಜ್ಯ ಚುನಾವಣೆ ಫಲಿತಾಂಶ ಸೆಮಿಫೈನಲ್ ಅಂತ ಹೇಳಿದ್ದರು. ಲೋಕಸಭಾ ಚುನಾವಣೆ ಫೈನಲ್ ಅಂತ ಹೇಳಿದ್ದರು. ಸನಾತನ ಧರ್ಮ ಬಗ್ಗೆ ಮಾತಾಡಿದ್ದಕ್ಕೆ ಕಾಂಗ್ರೆಸ್ ಸೋತಿದೆ ಎಂದು ದೆಹಲಿ ಕಾಂಗ್ರೆಸ್ ನಾಯಕರೇ ಟ್ವೀಟ್ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಗೆಲುವಿನ ವಿಶ್ಲೇಷಣೆ
ಇಲ್ಲಿ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಮಾಡ್ತಿದ್ದಾರೆ. ಮೂರು ರಾಜ್ಯ ಸೋತಿರುವ ಬಗ್ಗೆ ಕಾಂಗ್ರೆಸ್ ನವರು ಮಾತಾಡ್ತಿಲ್ಲ. ತೆಲಂಗಾಣ ಗೆದ್ದಿದ್ದೇವೆ ಎಂದು ಮಾತ್ರ ಹೇಳುತ್ತಿದ್ದಾರೆ. ತೆಲಂಗಾಣದಲ್ಲಿ ಜನರು ಬಿಆರ್ಎಸ್ ಪಾರ್ಟಿ ವಿರುದ್ಧ ನಿಂತಿದ್ದರು. ರೆಸಾರ್ಟ್ ನಲ್ಲಿ ರಾಜಕಾರಣ ಮಾಡ್ತಿದ್ದರು. ಹೀಗಾಗಿ ಕಾಂಗ್ರೆಸ್ ಅಲ್ಲಿ ಗೆದ್ದಿದೆ ಎಂದು ಆರ್ ಅಶೋಕ್ ತೆಲಂಗಾಣ ಗೆಲುವನ್ನು ವಿಶ್ಲೇಷಣೆ ಮಾಡಿದರು.
ದೇಶಕ್ಕೆ ಮೋದಿ ಅನಿವಾರ್ಯ
ಈ ದೇಶಕ್ಕೆ ಮೋದಿಯೇ ಅನಿವಾರ್ಯ ಅನ್ನೋದು ಜನರಿಗೆ ಗೊತ್ತಾಗಿದೆ. ಮೋದಿ ಇದ್ರೆ ಮಾತ್ರ ದೇಶ ವಿಕಾಸ ಆಗೋದು. ಮೋದಿ ಇದ್ರೆ ದೇಶ ಭದ್ರ ಇರಲಿದೆ ಎಂದು ದೇಶದ ಜನರಿಗೆ ಗೊತ್ತಾಗಿದೆ ಎಂದು ಪ್ರಧಾನಿಗಳನ್ನು ಹಾಡಿ ಹೊಗಳಿದರು.