World War: ಕೋಳಿ ಜಗಳ ಈಗ ಮಹಾಯುದ್ಧ ಆಗಿ ಬದಲಾಗುತ್ತಾ?
1 min read
ಮನುಷ್ಯ ಅದೆಷ್ಟೇ ವಿನಾಶಗಳನ್ನು ತನ್ನ ಕಣ್ಣಾರೆ ನೋಡಿದರೂ ಪಾಠ ಕಲಿಯಲ್ಲ, ಇದೇ ಮಾತು ಪದೇ ಪದೆ ಸಾಬೀತಾಗಿದೆ. ಯುದ್ಧದ ವಿನಾಶ ಎಂತಹದ್ದು? ಎಂಬುದನ್ನ ಕಣ್ಣಾರೆ ಕಂಡರೂ ಮತ್ತೆ ಯುದ್ಧಕ್ಕೆ ಮುಂದಾಗುತ್ತಿದ್ದಾನೆ ಜಗತ್ತಿನ ಅತ್ಯಂತ ‘ಅಪಾಯಕಾರಿ ಜೀವಿ’ ಮಾನವ.
ಹೀಗೆ ಕೋಳಿ ಜಗಳದ ರೀತಿಯೇ ಶುರುವಾಗಿದ್ದ ಇಲ್ಲೊಂದು ತಿಕ್ಕಾಟವು ಮುಂದೆ ಮಹಾಯುದ್ಧ ಆಗಿ ಬದಲಾಗುತ್ತಾ? ಎಂಬ ಅನುಮಾನ ಮೂಡಿದೆ.
ಹೌದು, ರಷ್ಯಾ ಮತ್ತು ಉಕ್ರೇನ್ ಯುದ್ಧ ಭಯ ಹುಟ್ಟಿಸುತ್ತಿದೆ. ಒಂದು ಕಡೆ ಇಸ್ರೇಲ್ & ಹಮಾಸ್ ಯುದ್ಧ ನಿಂತರೂ ಯುರೋಪ್ ನೆಲದಲ್ಲಿ ಶುರುವಾದ ಇವರಿಬ್ಬರ ಕಾಳಗ ಇನ್ನ ನಿಂತಿಲ್ಲ. ಒಂದು ಮುಕ್ಕಾಲು ವರ್ಷದಿಂದ ರಷ್ಯಾ & ಉಕ್ರೇನ್ ಹಾವು – ಮುಂಗುಸಿ ರೀತಿ ಕಿತ್ತಾಡುತ್ತಿವೆ. ಪರಿಸ್ಥಿತಿ ಹೀಗಿದ್ದಾಗಲೇ ರಷ್ಯಾ ನಮ್ಮ ಮೇಲೆ 21 ಡ್ರೋನ್‌ಗಳು ಸೇರಿದಂತೆ 3 ಕ್ರೂಸ್ ಕ್ಷಿಪಣಿಗಳಿಂದ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪ ಮಾಡಿದೆ. ಅಲ್ಲದೆ ದಾಳಿ ವಿರುದ್ಧ ಪ್ರತಿಕಾರದ ಮಾತನಾಡಿದೆ.
ಮೊನ್ನೆ ಮೊನ್ನೆಯಷ್ಟೇ ಫುಲ್ ಫೈಟ್!
ಇನ್ನು ಕೆಲವು ದಿನಗಳ ಹಿಂದಷ್ಟೇ ಇಂತಹದ್ದೇ ಒಂದು ಘಟನೆ ನಡೆದಿದೆ ಎಂದು ಉಕ್ರೇನ್ ಆರೋಪ ಮಾಡಿತ್ತು. ರಷ್ಯಾ, ಉಕ್ರೇನ್‌ನ ರಾಜಧಾನಿ ಕೀವ್ ಭಾಗವನ್ನ ಟಾರ್ಗೆಟ್ ಮಾಡಿದೆ. ಈ ಕಾರಣಕ್ಕೆ 75 ಡ್ರೋನ್‌ಗಳನ್ನ ಒಂದೇ ಬಾರಿ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಹಾರಿಬಿಟ್ಟಿತ್ತು ಎಂದಿತ್ತು ಉಕ್ರೇನ್. ಈಗ ನೋಡಿದರೆ 21 ಡ್ರೋನ್‌ಗಳು & 3 ಕ್ರೂಸ್ ಕ್ಷಿಪಣಿಗಳಿಂದ ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ ಎಂದಿದೆ. ಹೀಗಾಗಿ ಮತ್ತೊಂದು ಮಹಾಯುದ್ಧ, ಅಂದರೆ 3ನೇ ಮಹಾಯುದ್ಧದ ಭಯ ಹುಟ್ಟಿದೆ.
ಈಗ ದಾಳಿ ಮಾಡಿದ್ದು ಹೇಗೆ?
ಇನ್ನು ಇದೀಗ ಉಕ್ರೇನ್ ನೀಡಿರುವ ಮಾಹಿತಿ ಪ್ರಕಾರ ರಷ್ಯಾ ಸೇನೆ 21 ಡ್ರೋನ್‌ಗಳು ಹಾಗೂ ಮೂರು ಕ್ರೂಸ್ ಕ್ಷಿಪಣಿಗಳಿಂದ ದಾಳಿ ಮಾಡಲು ಪ್ರಯತ್ನ ಮಾಡಿತ್ತಂತೆ. ಆದ್ರೆ ಈ ಎಲ್ಲವೂ ಡ್ರೋನ್ ನಾಶವಾಗಿವೆ. ನಾವು ಅವುಗಳನ್ನ ನಾಶ ಮಾಡಿದ್ದೀವಿ ಅಂತಾ ಉಕ್ರೇನ್ ಮಾಹಿತಿ ನೀಡಿದೆ. ಆದರೆ ಎರಡು ಕ್ಷಿಪಣಿಗಳನ್ನು ಗುರಿ ತಲುಪುವ ಮೊದಲೇ ನಾಶ ಮಾಡಿದ್ದೀವಿ. ಹೀಗೆ ಮತ್ತೊಂದು ಕ್ಷಿಪಣಿ ನಾಶವಾಗಿಲ್ಲ ಎಂದು ಉಕ್ರೇನ್ ತಿಳಿಸಿದೆ. ಜತೆಗೆ ರಷ್ಯಾ ವಿರುದ್ಧ ಈಗ ಪ್ರತಿಕಾರದ ಮಾತು ಆಡಿದೆ ಉಕ್ರೇನ್.
ದಾಳಿ ನಡೆದಿದ್ದು ಯಾವ ಭಾಗದಲ್ಲಿ?
ಅಂದಹಾಗೆ ಇದೀಗ ರಷ್ಯಾ ಹಾರಿಸಿದ ಕ್ಷಿಪಣಿಗಳನ್ನ ಉಕ್ರೇನ್ ದಕ್ಷಿಣ ಭಾಗ, ಮೈಕೋಲೇವ್ ವಾಯು ಪ್ರದೇಶದ ಬಳಿಯೆ ಹೊಡೆದು ಉರುಳಿಸಲಾಯಿತು ಎಂದಿದೆ ಉಕ್ರೇನ್ ವಾಯುಪಡೆ. ಹಾಗೇ ಮತ್ತೊಂದು ಕಡೆ ಉಕ್ರೇನ್‌ನ ಪಶ್ಚಿಮ ಭಾಗನ ಗುರಿಯಾಗಿಸಿ, ರಷ್ಯಾ ಪಡೆಗಳು ಇರಾನ್ ನಿರ್ಮಿತ ಶಹೀದ್ ಡ್ರೋನ್‌ಗಳಿಂದ ದಾಳಿ ನಡೆಸಿದ್ದವು ಎಂದು ಉಕ್ರೇನ್ ಆರೋಪಿಸಿದೆ. ಹೀಗೆ ಇಬ್ಬರ ನಡುವೆ ಮೊದಲೇ ಹೊತ್ತಿದ್ದ ಯುದ್ಧ ಬೆಂಕಿ ಮತ್ತಷ್ಟು ಧಗಧಗಿಸಲು ಈ ಅಟ್ಯಾಕ್ ದಾರಿ ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿಬಂದಿದೆ.