ಇಂದು ಶಬರಿಮಲೆಯ ‘ಅಯ್ಯಪ್ಪಸ್ವಾಮಿ ದೇಗುಲ’ ಓಪನ್
1 min readಇಲ್ಲಿನ ಅಯ್ಯಪ್ಪ ಸ್ವಾಮಿ ದೇಗುಲವು ಮಂಡಲ-ಮಕರಜ್ಯೋತಿ ಯಾತ್ರೆಗೆ ನವೆಂಬರ್.16ರ ಇಂದು ಸಂಜೆ 5 ಗಂಟೆಗೆ ತೆರೆದುಕೊಳ್ಳಲಿದೆ.
ಅಯ್ಯಪ್ಪ ಸನ್ನಿಧಾನ ಮತ್ತು ಮಾಳಿಗಪ್ಪುರಂ ದೇಗುಲಕ್ಕೆ ನವೆಂಬರ್.16ರ ಇಂದಿನಿಂದ ಇರುಮುಡಿಯೊಂದಿಗೆ ನೂತನ ಅರ್ಚಕರು ಆಗಮಿಸಲಿದ್ದಾರೆ.
ಪ್ರಸ್ತುತ ಅರ್ಚಕ ಜಯರಾಮನ್ ನಂಬೂದಿರಿ 18 ಮೆಟ್ಟಿಲ ಮೂಲಕ ಇಳಿದು, ನೂತನ ಅರ್ಚಕರನ್ನು ಸ್ವಾಗತಿಸಿ, ಸನ್ನಿಧಾನಕ್ಕೆ ಕರೆದೊಯ್ಯುವರು.
ತಂತ್ರಿ ಕಂಠಾರ್ ಮೋಹನರ್, ನೂತನ ಅರ್ಚಕ ಎಂ.ಎನ್ ಮಹೇಶ್ ಅವರಿಗೆ ಮೂಲಮಂತ್ರ ಉಪದೇಶಿಸಲಿದ್ದಾರೆ. ಈ ಬಳಿಕ ಅಯ್ಯಪ್ಪ ಸ್ವಾಮಿ ದೇಗುಲ ಭಕ್ತರಿಗಾಗಿ ತೆರೆದುಕೊಳ್ಳಲಿದೆ.