ಒಂದು ಹೆಣ್ಣು ಮಗುವಿನ ತಂದೆ ವರ್ತೂರ್ ಸಂತೋಷ್!
1 min readಹುಲಿ ಉಗುರು ಪ್ರಕರಣದ ನಂತರ ಮುನ್ನೆಲೆಗೆ ಬಂದ ವರ್ತೂರು ಸಂತೋಷ್ ಮದುವೆ ವಿಚಾರ ಹಲವೆಡೆ ಚರ್ಚೆ ಆಗ್ತಾನೇ ಇತ್ತು. ಅದಕ್ಕೆ ಸಾಕ್ಷಿ ಎಂಬಂತೆ ಫೋಟೋಗಳು ಕೂಡ ಲಭ್ಯವಾಗಿದೆ.
ಈಗಾಗಲೇ ಮದುವೆ ಆಗಿ ಹೆಣ್ಣು ಮಗುವಿಗೆ ತಂದೆ ಆಗಿರುವ ವರ್ತೂರು ಸಂತೋಷ್ಗೆ ಕೊರೊನಾ ಸಮಯದಲ್ಲಿ ಮದುವೆ ಆಗಿತ್ತು ಎಂದು ಈ ಮೂಲಕ ತಿಳಿದು ಬಂದಿದೆ.
ಆ ನಂತ್ರ ವೈಮನಸ್ಸಾದ ಕಾರಣ ಇಬ್ಬರು ಬೇರೆ ಬೇರೆ ಇರುವುದಾಗಿ ಮಾಹಿತಿ ಲಭ್ಯವಾಗಿದೆ. ವರ್ತೂರು ಸಂತೋಷ್ ಪತ್ನಿಯ ಹೆಸರು ಜಯಶ್ರೀ ಎಂಬುದಾಗಿ.
ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋ ಮತ್ತು ವಿಡಿಯೋಗಳು ಹರಿದಾಡ್ತಿದೆ. ಮದುವೆ ಬಗ್ಗೆ ವರ್ತೂರು ಸಂತೋಷ್ ಅವರು ಎಲ್ಲೂ ಪ್ರಸ್ತಾಪ ಮಾಡಿಲ್ಲ.
ಬಿಗ್ ಬಾಸ್ ಮನೆಯಲ್ಲೂ ಯಾರಿಗೂ ಈ ವಿಚಾರ ಗೊತ್ತಿಲ್ಲ. ಈ ವಿಷಯದ ಬಗ್ಗೆ ಮಾಹಿತಿ ಇಲ್ಲ. ಅವರು ಈ ವಿಚಾರವನ್ನು ಮನೆಯೊಳಗಡೆ ಹಂಚಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಎಂಗೇಜ್ ಆಗಿದ್ದಾರೆ ಎಂದು ತಿಳಿಸಿದಿದ್ದಾರೆ ಆಚೆ ಬಂದ ರಕ್ಷಕ್ ಕೂಡ ಈ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ.
ಆದರೆ ಒಂದು ಮಗುವಿಗೆ ತಂದೆ ಆಗಿದ್ದಾರೆ ವರ್ತೂರು ಸಂತೋಷ್ ಎಂಬುದು ಎಲ್ಲರಿಗೂ ಆಶ್ಚರ್ಯವಾಗಿದೆ