ದೀಪಾವಳಿ ಆಫರ್, ಕಡಿಮೆ ಮೊತ್ತಕ್ಕೆ ರೀಚಾರ್ಜ್ ಪ್ಲ್ಯಾನ್ ಜಾರಿ
1 min readಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್‌ಗಳನ್ನು ಹೊಂದಿದೆ. ಇಸಿಮ್ ಆಯ್ಕೆಗಳನ್ನು ಕೂಡಾ ಕೆಲವು ಸ್ಮಾರ್ಟ್ ಫೋನ್‌ಗಳು ಹೊಂದಿದೆ. ಜನರು ತಮ್ಮ ಅನುಕೂಲಕ್ಕಾಗಿ ಬೇರೆ ಬೇರೆ ಸಿಮ್ ಕಾರ್ಡ್‌ಗಳನ್ನು ಬಳಸುತ್ತಾರೆ. ಹೆಚ್ಚಾಗಿ ಜನರು ಎರಡು ಸಿಮ್ ಕಾರ್ಡ್‌ಗಳನ್ನು ಹೊಂದಿರುತ್ತಾರೆ.
ಜನರು ಸಾಮಾನ್ಯವಾಗಿ ತಮ್ಮ ವ್ಯವಹಾರಕ್ಕಾಗಿ ಮೊದಲ ಸಿಮ್ ಅನ್ನು, ವೈಯಕ್ತಿಕ ಉದ್ದೇಶಗಳಿಗಾಗಿ ಎರಡನೇ ಸಿಮ್ ಅನ್ನು ಬಳಕೆ ಮಾಡುತ್ತಾರೆ. ಅದರಲ್ಲಿಯೂ ಎರಡು ಸಿಮ್‌ಗಳನ್ನು ಹೊಂದಿರುವುದು ಎಂದರೆ ಎರಡು ರೀಚಾರ್ಜ್ ಎಂದರ್ಥ. ಖರ್ಚು ಕೂಡಾ ಡಬಲ್ ಅಲ್ಲವೇ?. ಹಾಗಿದ್ದಾಗ ನಿಮಗೆ ಉತ್ತಮ ಪ್ಲ್ಯಾನ್ ಅನ್ನು ದೀಪಾವಳಿ ಸಂದರ್ಭದಲ್ಲಿ ನೀಡಿದೆ.
ಹಬ್ಬದ ಸೀಸನ್‌ನಲ್ಲಿ ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾ ಅಥವಾ ಬಿಎಸ್‌ಎನ್‌ಎಲ್‌ನಂತಹ ಪ್ರಮುಖ ಸೇವಾ ಪೂರೈಕೆದಾರರಿಂದ ಕೆಲವು ಕಡಿಮೆ ವೆಚ್ಚದ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇದು ನಿಮಗೆ ಎರಡು ಸಿಮ್‌ಗಳನ್ನು ಕೂಡಾ ಬಳಕೆ ಮಾಡಲು ಸಹಾಯ ಮಾಡುತ್ತದೆ. ಇಲ್ಲಿದೆ ವಿವರ ಮುಂದೆ ಓದಿ….
ಕಡಿಮೆ ವೆಚ್ಚದ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್: 1,799 ರೂಪಾಯಿ ದರ, 365 ದಿನಗಳ ವ್ಯಾಲಿಡಿಟಿ, ವರ್ಷಕ್ಕೆ 24 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್
ಬಿಎಸ್‌ಎನ್‌ಎಲ್: 1,251 ರೂಪಾಯಿ ದರ, 365 ದಿನಗಳ ವ್ಯಾಲಿಡಿಟಿ, ವರ್ಷಕ್ಕೆ 9 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್
ಜಿಯೋ: 1,559 ರೂಪಾಯಿ ದರ, 336 ದಿನಗಳ ವ್ಯಾಲಿಡಿಟಿ, ವರ್ಷಕ್ಕೆ 24 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್
ವೋಡಾಫೋನ್ ಐಡಿಯಾ: 1,799 ರೂಪಾಯಿ ದರ, 365 ದಿನಗಳ ವ್ಯಾಲಿಡಿಟಿ, ವರ್ಷಕ್ಕೆ 24 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್
ಏರ್‌ಟೆಲ್‌ನ ರೀಚಾರ್ಜ್ ಪ್ಲ್ಯಾನ್
1,799 ರೂಪಾಯಿ ಬೆಲೆಯ ಏರ್‌ಟೆಲ್‌ನ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 365 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ, 3,600 ಎಸ್‌ಎಂಎಸ್, 24 ಜಿಬಿಯ 4ಜಿ ಡೇಟಾ ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಕೇವಲ 150 ರೂಪಾಯಿಗಳ ಮಾಸಿಕ ವೆಚ್ಚದೊಂದಿಗೆ, ಯೋಜನೆಯು ವಿಂಕ್ ಮ್ಯೂಸಿಕ್ ಉಚಿತ ಚಂದಾದಾರಿಕೆ ನೀಡುತ್ತದೆ. ಉಚಿತ ಹಲೋ ಟ್ಯೂನ್ ಪಡೆಯಬಹುದಾಗಿದೆ.
ಬಿಎಸ್‌ಎನ್‌ಎಲ್‌ನ ಅತ್ಯಂತ ಕೈಗೆಟುಕುವ ರೀಚಾರ್ಜ್ ಪ್ಲ್ಯಾನ್
ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಬಳಕೆದಾರರಿಗೆ ಅತ್ಯಂತ ಕಡಿಮೆ ದರದ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ಒದಗಿಸುತ್ತದೆ. ಈ ರೀಚಾರ್ಜ್ 1,251 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಈ ಯೋಜನೆಯು ಮಾಸಿಕ 0.75 ಜಿಬಿ ಡೇಟಾವನ್ನು ನೀಡುತ್ತದೆ, ಜೊತೆಗೆ 365 ದಿನಗಳ ವ್ಯಾಲಿಡಿಟಿ ಹೊಂದಿದೆ. ಒಂದು ಸಿಮ್ ಅನ್ನು ಕಡಿಮೆ ಬಳಸುವುದಾದರೆ, ಈ ಪ್ಲ್ಯಾನ್ ಉತ್ತಮವಾಗಿದೆ.
ಕಡಿಮೆ ವೆಚ್ಚದ ಜಿಯೋ ರೀಚಾರ್ಜ್
ಕಡಿಮೆವೆಚ್ಚದ ಪ್ಲ್ಯಾನ್‌ಗಳಿಗೆ ಜಿಯೋ ಹೆಸರುವಾಸಿಯಾಗಿದೆ. ಜಿಯೋದ ರೀಚಾರ್ಜ್ ಪ್ಲ್ಯಾನ್ 1,559 ರೂಪಾಯಿಯಿಂದ ಪ್ರಾರಂಭವಾಗುತ್ತದೆ. 33 6 ದಿನಗಳ (11 ತಿಂಗಳುಗಳು) ವ್ಯಾಲಿಡಿಟಿಗಳ ಪ್ಲ್ಯಾನ್ ಇದಾಗಿದೆ. ಯೋಜನೆಯು 24 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್ ಮತ್ತು 3,600 ಎಸ್‌ಎಂಎಸ್ (ದಿನಕ್ಕೆ 100 ಸೀಮಿತ) ಆಗಿರುತ್ತದೆ. ಹೆಚ್ಚುವರಿಯಾಗಿ, 5ಜಿ ಬಳಕೆದಾರರು ಯಾವುದೇ ಅನ್‌ಲಿಮಿಟೆಡ್ ಡೇಟಾವನ್ನು ಪಡೆಯಬಹುದಾಗಿದೆ. ಯೋಜನೆಯು ಜಿಯೋಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸೇವೆಗಳನ್ನು ಪಡೆಯಬಹುದಾಗಿದೆ.
ವೊಡಾಫೋನ್ ಐಡಿಯಾದ ಕಡಿಮೆ ವೆಚ್ಚದ ರೀಚಾರ್ಜ್
ವೊಡಾಫೋನ್ ಐಡಿಯಾದ ವಾರ್ಷಿಕ ರೀಚಾರ್ಜ್ ಪ್ಲಾನ್ 1,799 ರೂಪಾಯಿಯದ್ದಾಗಿದೆ. 365 ದಿನಗಳ ವ್ಯಾಲಿಡಿಟಿಯನ್ನು ಈ ಪ್ಲ್ಯಾನ್ ಹೊಂದಿದೆ. ಉಚಿತ ಅನ್‌ಲಿಮಿಡೆಟ್ ಕಾಲ್ ಹೊಂದಿದ್ದು, 24 ಜಿಬಿ ಡೇಟಾ ನೀಡುತ್ತದೆ. 3,600 ಎಸ್‌ಎಂಎಸ್ ಈ ಪ್ಲ್ಯಾನ್‌ನಲ್ಲಿರುತ್ತದೆ. ಹೆಚ್ಚುವರಿಯಾಗಿ, ಬಳಕೆದಾರರು Vi ಮೂವಿಸ್ ಮತ್ತು ಟಿವಿ ಬಳಕೆ ಮಾಡಬಹುದಾಗಿದೆ.