ಪರಿಸರ ಸ್ನೇಹಿ ದಿಪಾವಳಿ ಆಚರಣೆಗೆ ಜಿಲ್ಲಾಧಿಕಾರಿ ಕರೆ
1 min readಸಮಾನ ಮನಸ್ಕರ ಪರಿಸರ ಸಂರಕ್ಷಣ ವೇದಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜನಜಾಗೃತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಪರಿಸರಸ್ನೇಹಿ ಮಣ್ಣಿನ ಹಣತೆ ಮೂಲಕ ನಾವು ದೀಪಾವಳಿ ಆಚರಿಸೋಣ ಎಂದರು. ಯಾವುದೇ ತೊಂದರೆ ಆಗದಂತೆ ಬೆಳಕಿನ ಹಬ್ಬವನ್ನು ಆಚರಿಸುವ ಜೊತೆಗೆ ಜಿಲ್ಲೆಯ ಎಲ್ಲಾ ಜನತೆಗೂ ಸುಖ ಸಂತೋಷ ಸಮೃದಿಯನ್ನು ನೀಡಲಿ ಎಂದು ಅವರು ಹಾರೈಸಿದರು. ಡಿಸಿ ಪಿ.ಎನ್. ರವೀಂದ್ರ ಅವರೆ ಖುದ್ದಾಗಿ ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿದರು. ಸಂರಕ್ಷಣಾ ವೇದಿಕೆ ಹಾಗೂ ಶಾಲೆ ಮಕ್ಕಳೊಂದಿಗೆ ಎಂಜಿ ರಸ್ತೆ ಮೂಲಕ ತೆರಳಿ ಜಾಗೃತಿ ಮೂಡಿಸಿದರು.
ಪರಿಸರ ಅಧಿಕಾರಿ ಸಿದ್ದೇಶ್‌ಬಾಬು ಮಾತನಾಡಿ, ಶಾಲಾ ಕಾಲೇಜು, ಆಸ್ಪತ್ರೆ ಮುಂತಾದ ಕಡೆ ಪಟಾಕಿ ಹೊಡೆಯುವುದನ್ನು ಸರ್ವೋಚ್ಚ ನ್ಯಾಯಾಲಯ ನಿಷೇಧಿಸಿದೆ. ನಾವು ಪಟಾಕಿ ಒಡೆಯದೆ ಮಣ್ಣಿನ ದೀಪ ಹಚ್ಚುವ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ನೀಡೋಣ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾನಮನಸ್ಕರ ಪರಿಸರ ಸಂರಕ್ಷಣ ವೇದಿಕೆ ಪದಾಧಿಕಾರಿಗಳಾದ ಪ್ರಕಾಶ್-, ಹೋಟೆಲ್- ರಾಮಣ್ಣ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿüಕಾರಿಗಳು ಹಾಜರಿದ್ದರು