ಕೊಲೆಗೆ ಸುಫಾರಿ ನೀಡುವವರನ್ನು ಬಂಧಿಸುವ೦ತೆ ಒತ್ತಾಯ
1 min read
ಕಳೆದ ಆಕ್ಟೋಬರ್ ೧೩ ರಂದು ದಲಿತ ಮುಖಂಡ ಹಾಗೂ ಚಿಂತಾಮಣಿ ನಗರಸಭಾ ಸದಸ್ಯ ಆಗ್ರಹಾರ ಮುರಳಿರವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ತಲೆ ಕೈಗಳಿಗೆ ಹಲ್ಲೇ ಮಾಡಿ ಕೋಲೆ ಮಾಡಲು ಪ್ರಯತ್ನಿಸಿ ಪರಾರಿಯಾಗಿದ್ದರು.
ಅದೃಷ್ಟವಶಾತ್ ಆಗ್ರಹಾರ ಮುರಳಿರವರು ಪ್ರಾಣಾಪಯದಿಂದ ಪಾರಾಗಿ, ೨೫ ದಿನಗಳಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಗ್ರಹಾರ ಮುರಳಿರವರ ಮೇಲಿನ ಹಲ್ಲೆ, ಕೊಲೆ ಯತ್ನಕ್ಕೆ ಸಂಬAಧಿಸಿದAತೆ ಇದುವರೆಗೂ ಚಿಂತಾಮಣಿ ಪೋಲಿಸರು ಜಾನ್. ದಿನೇಶ್, ಆರುಣ್ ಹಾಗೂ ಪ್ರಭಾಕರನಾಯ್ಕ ಎಂಬುವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಈ ಘಟನೆ ನಡೆದು ಒಂದು ತಿಂಗಳು ಕಳೆಯುತ್ತಾ ಬಂದಿದ್ದರು ಆಗ್ರಹಾರ ಮುರಳಿರವರ ಮೇಲಿನ ಕೊಲೆಗೆ ಪ್ರಚೋದನೆ ಹಾಗೂ ಸುಫಾರಿ ನೀಡಿರುವ ಕುಮಾರರೆಡ್ಡಿ ಎಂಬುವವರನ್ನು ಬಂದಿಸುವಲ್ಲಿ ಪೊಲೀಸರು ವಿಫಲರಾಗಿರುವುದನ್ನು ಖಂಡಿಸಿ, ಸೋಮವಾರ ಆಗ್ರಹಾರ ಮುರಳಿರವರು ದಿಡೀರನೆ ಡಿವೈಎಸ್ಪಿ ಕಛೇರಿಗೆ ತೆರಳಿ, ತಮಗೆ ನ್ಯಾಯ ಕೊಡಿಸಿಕೊಡುವಂತೆ ಮನವಿ ಮಾಡಿ, ಕುಮಾರರೆಡ್ಡಿರವರನ್ನು ಬಂದಿಸಲು ವಿಫಲರಾಗಿರುವ ಪೊಲೀಸರ ನಡೆಯನ್ನು ಖಂಡಿಸಿ ಡಿವೈಎಸ್ಪಿ ಕಛೇರಿ ಬಳಿ ಪ್ರತಿಭಟನೆ ಮಾಡಿದರು.