ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ದೆಹಲಿಯಲ್ಲಿ ಮತ್ತಷ್ಟು ಹದಗೆಟ್ಟ ವಾಯು ಗುಣಮಟ್ಟ; ಟ್ರಕ್​ಗಳಿಗೆ ನಿರ್ಬಂಧ, ವರ್ಕ್​ ಫ್ರಂ ಹೋಮ್​ ಮೊರೆ

1 min read

ದೆಹಲಿ ವಾಯು ಗುಣಮಟ್ಟ ದಿನ ದಿನಕ್ಕೆ ಹದಗೆಡುತ್ತಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ನವದೆಹಲಿ: ದೆಹಲಿ ಮತ್ತು ಎನ್​ಸಿಆರ್​ನಲ್ಲಿ ಮಾಲಿನ್ಯ ಮಟ್ಟ ಭಾನುವಾರ ರಾತ್ರಿ ಮತ್ತಷ್ಟು ಬಿಗಾಡಾಯಿಸಿದೆ.

ವಾಯು ಗುಣಮಟ್ಟ ಸೂಚ್ಯಂಕ 471ರಷ್ಟು ದಾಖಲಾಗಿದೆ. ಹೀಗಾಗಿ, ವಾತಾವರಣ ದಟ್ಟ ಹೊಗೆಯಿಂದ ಕೂಡಿದೆ ಎಂದು ವಾಯು ಗುಣಮಟ್ಟ ವ್ಯವಸ್ಥೆ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (ಎಸ್​ಎಎಫ್​ಎಆರ್​​) ದತ್ತಾಂಶದ ವರದಿಯಲ್ಲಿ ತಿಳಿಸಿದೆ. ರಾಷ್ಟ್ರ ರಾಜಧಾನಿಯ ಆನಂದ್​ ವಿಹಾರ್​ ಸ್ಟೇಷನ್ ಅತ್ಯಂತ ಕಳಪೆ ವಾಯುಗುಣ ಹೊಂದಿದ್ದು, ಪಿಎ2.5 ವರದಿಯಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ.

ಟ್ರಕ್​ಗಳಿಗೆ ನಿರ್ಬಂಧ: ದೆಹಲಿ, ಎನ್​ಸಿಆರ್​ನಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಗ್ರೇಡೆಡ್​ ರೆಸ್ಪಾನ್ಸ್​ ಆಯಕ್ಷನ್​ ಪ್ಲಾನ್​ (ಜಿಆರ್​ಎಪಿ) 4ನೇ ಹಂತ ಜಾರಿಗೆ ತರಲು ವಾಯುಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಕೆಲವು ಕ್ರಮಕ್ಕೆ ಮುಂದಾಗಿದೆ. ಅದರನುಸಾರ, ಟ್ರಕ್​ಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ಜನರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.

ನಾಲ್ಕನೇ ಹಂತ ಅತಿ ಹೆಚ್ಚು ವಾಯು ಮಾಲಿನ್ಯಕ್ಕೆ ಒಳಗಾಗಿದ್ದು ಈ ಸಂಬಂಧ ಎಚ್ಚರಿಕೆ ನೀಡಲಾಗಿದೆ. ಜಿಆರ್​ಎಪಿಯ ನಾಲ್ಕನೇ ಹಂತದ ಪ್ರಕಾರ, 8 ಅಂಶಗಳ ಕ್ರಿಯಾ ಯೋಜನೆಯು ಎನ್​ಸಿಆರ್​ನಲ್ಲಿ ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದರಡಿ ದೆಹಲಿಗೆ ಟ್ರಕ್​ಗಳ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಆದಾಗ್ಯೂ ಕೆಲವು ಅಗತ್ಯ ವಸ್ತು, ಸೇವೆಗಳನ್ನು ನೀಡುವ ವಾಹನ, ಎಲ್​ಎನ್​ಜಿ, ಸಿಎನ್​ಜಿ ಮತ್ತು ಎಲೆಕ್ಟ್ರಿಕ್​ ಟ್ರಕ್​ಗಳಿಗೆ ದೆಹಲಿ ಪ್ರವೇಶಕ್ಕೆ ಅನುಮತಿ ಇದೆ. ದೆಹಲಿ ರಿಜಿಸ್ಟರ್​​ನ ಡೀಸೆಲ್-ಚಾಲಿತ ಮಧ್ಯಮ ಸರಕುಗಳ ವಾಹನಗಳು (ಎಂಜಿವಿ) ಭಾರಿ ಸರಕುಗಳ ವಾಹನಗಳು (ಎಚ್​ಜಿವಿ) ಅಗತ್ಯ ಸರಕು-ಸೇವೆ ನೀಡುವ ವಾಹನಗಳಿಗೂ ಪ್ರವೇಶ ನಿರ್ಬಂಧವಿದೆ.

About The Author

Leave a Reply

Your email address will not be published. Required fields are marked *