ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ‘ದುಬಾರಿ ದೀಪಾವಳಿ’ ಶಾಕ್: ಅಕ್ಕಿ, ಬೇಳೆ ದರ ಗಗನಕ್ಕೆ
1 min readದೀಪಾವಳಿ ಹಬ್ಬಕ್ಕೆ ಮೊದಲೇ ಅಕ್ಕಿ, ಬೇಳೆ ದರ ಏರಿಕೆಯಾಗಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಕೆಲವು ತಿಂಗಳ ಹಿಂದೆ ಕೆಜಿಗೆ 50 ರೂ.ವರೆಗೆ ಇದ್ದ ರಾಜಮುಡಿ ಕೆಂಪಕ್ಕಿ ದರ 85 ರೂ.ಗೆ ಏರಿಕೆಯಾಗಿದೆ.
ಕೋಲಂ ರಾ ರೈಸ್ 62 ರೂ.ನಿಂದ 70 ರೂ. ಗೆ ಏರಿಕೆಯಾಗಿದ್ದು, ಕೋಲಂ ಸ್ಟೀಮ್ ರೈಸ್ 55 ರೂ.ನಿಂದ 58 ರೂ.ಗೆ ಏರಿಕೆ ಕಂಡಿದೆ.
ಸೋನಾ ಮಸೂರಿ ರಾ ರೈಸ್ 56 ರೂ. ನಿಂದ 58 ರೂ., ಸೋನಾಮಸೂರಿ ಸ್ಟೀಮ್ ರೈಸ್ 51 ರೂ.ನಿಂದ 53 ರೂ., ತೊಗರಿ ಬೇಳೆ 160ರಿಂದ 170 ರೂ., ಉದ್ದಿನಬೇಳೆ ದರ 130 ರೂ.ನಿಂದ 136 ರೂ., ಹೆಸರು ಬೇಳೆ 115 ರೂ.ನಿಂದ 118 ರೂ,. ಹೆಸರುಕಾಳು ದರ ಕೆಜಿಗೆ 113 ರೂ., ಕಡಲೆಕಾಳು 78 ರೂ., ಬೆಲ್ಲ 52 ರೂ.ಗೆ ಏರಿಕೆಯಾಗಿದೆ.
ಇದು ಸಗಟು ದರ ಆಗಿದ್ದು ಚಿಲ್ಲರೆ ದರ ಇದಕ್ಕಿಂತಲೂ ಹೆಚ್ಚಾಗಿದೆ. ಹಬ್ಬದ ಹೊತ್ತಲ್ಲೇ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.