‘200 ಯೂನಿಟ್ ಫ್ರೀ ಕರೆಂಟು ಕೊಟ್ಟ ಶಾಕ್‌ನ ಕತೆಯಿದು…’
1 min readಕಾಂಗ್ರೆಸ್ ಗ್ಯಾರಂಟಿ ವಿಚಾರಗಳ ವಿರುದ್ಧ ಬಿಜೆಪಿ ತನ್ನ ಆರೋಪಗಳನ್ನ ಮುಂದುವರಿಸಿದೆ. ಅದರಲ್ಲೂ ಗೃಹಜ್ಯೋತಿ ವಿಚಾರದಲ್ಲಿ ಈಗಾಗಲೇ ಒಂದು ಸುತ್ತು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ರಣರಂಗ ನಡೆದಿದೆ. ಈಗ ಮತ್ತೊಮ್ಮೆ ಅದೇ ಗೃಹಜ್ಯೋತಿ ವಿಚಾರ ಮುಂದಿಟ್ಟಿರುವ ಬಿಜೆಪಿ, ಕರ್ನಾಟಕ ಕಾಂಗ್ರೆಸ್ ನಾಯಕರನ್ನ ಕೆಣಕಿದೆ.
ಹಾಗಾದರೆ ಕರ್ನಾಟಕದ ಜನಗಳಿಗೆ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆ ಬಗ್ಗೆ ಬಿಜೆಪಿ ಹೇಳಿದ್ದೇನು?
ಉಚಿತ ಉಡುಗೊರೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಣರಂಗವೇ ನಡೆದು, ಎರಡೂ ಪಕ್ಷಗಳ ನಾಯಕರು ಭರ್ಜರಿ ಫೈಟ್ ಮಾಡಿದ್ದರು. ಆದರೆ ಈಗ ಪಂಚ ರಾಜ್ಯಗಳ ಚುನಾವಣೆ ವೇಳೆ, ಸ್ವತಃ ಬಿಜೆಪಿ ಮತದಾರರ ಮನಸ್ಸು ಗೆಲ್ಲಲು ಉಚಿತ ಉಡುಗೊರೆಗಳನ್ನ ತನ್ನ ಪ್ರಣಾಳಿಕೆಯಲ್ಲಿ ಘೋಷಿಸುತ್ತಿದೆ ಎಂಬ ಆರೋಪವಿದೆ. ಈ ಆರೋಪದ ನಡುವೆಯೇ ಬಿಜೆಪಿ ಮತ್ತೊಮ್ಮೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳ ವಿರುದ್ಧ ತನ್ನ ಆರೋಪದ ಪಟ್ಟಿಯನ್ನು ಮುಂದುವರಿಸಿದೆ.
ಬಿಜೆಪಿ ಹೇಳಿದ್ದು ಏನು ಗೊತ್ತಾ?
‘ಗೃಹಜ್ಯೋತಿ’ ಯೋಜನೆ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘200 ಯೂನಿಟ್ ಫ್ರೀ ಕರೆಂಟು ಕೊಟ್ಟ ಶಾಕ್‌ನ ಕತೆಯಿದು. ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಎಂದು ಚುನಾವಣೆಗೂ ಮೊದಲು ಭರವಸೆ ನೀಡಿದ್ದ @INCKarnataka ಸರ್ಕಾರ ಈಗ ವಿದ್ಯುತ್ ದರ ಏರಿಸಿ ಶಾಶ್ವತ ಹೊಡೆತ ನೀಡಿದೆ. ಕಾಕಾ ಪಾಟೀಲ್‌ಗೂ ಫ್ರೀ ಎಂದ @siddaramaiah ಅವರಿಗೆ ಇಂದು ಅದು ನೆನಪಿಲ್ಲ. ಮೈಕ್ ಮುಂದೆ ಕಿರುಚಿದ ರಾಹುಲ್ ಗಾಂಧಿಯವರ ಪತ್ತೆಯೇ ಇಲ್ಲ.’ ಎಂದು ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದೆ ಕಮಲ ಪಾಳಯ.