BBK 10: ಹೊರಗಿದ್ದ ಜೋಷ್ ಒಳಗಿರಲಿಲ್ಲ.. ಬಿಗ್ ಬಾಸ್ ಮನೆಯಿಂದ ಹೊರಬಿದ್ದ ರಕ್ಷಕ್ ಬುಲೆಟ್
1 min readಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭ ಆಗಿ ನಾಲ್ಕು ವಾರಗಳು ಕಳೆದಿವೆ. ಈಗಾಗಲೇ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರ ಬಂದಿದ್ದಾರೆ. ಈ ವಾರ ಒಬ್ಬ ಸ್ಪರ್ಧಿ ಮನೆಯಿಂದ ಆಚೆ ಬರೋದು ಪಕ್ಕಾ ಆಗಿತ್ತು. ಆದರೆ, ಈ ಬಾರಿ ಯಾರು ಹೊರಗೆ ಬರುತ್ತಾರೆಂದು ಊಹಿಸಲಾಗಿತ್ತೋ ಅವರು ಮನೆಯೊಳಗೆ ಉಳಿದಿದ್ದಾರೆ.
ಹೀಗಾಗಿ ವೀಕ್ಷಕರಲ್ಲಿ ಗೊಂದಲ ಉಂಟಾಗಿತ್ತು.
ಈ ವಾರ ಬಿಗ್ ಬಾಸ್ ಮನೆಯಿಂದ ಸುಮಾರು 9 ಮಂದಿ ನಾಮಿನೇಟ್ ಆಗಿದ್ದರು. ಸಿರಿ, ತುಕಾಲಿ ಸಂತು, ತನಿಷಾ, ರಕ್ಷಕ್, ಮೈಕೆಲ್, ಸ್ನೇಹಿತ್, ವರ್ತೂರು ಸಂತೋಷ್, ಕಾರ್ತಿಕ್, ವಿನಯ್ ಈ ವಾರ ನಾಮಿನೇಟ್ ಆಗಿದ್ದರು. ಇವರಲ್ಲಿ ಯಾರಾದರೂ ಒಬ್ಬರು ಮನೆಯಿಂದ ಹೊರಬರುತ್ತಾರೆ ಅನ್ನೋದು ಪಕ್ಕಾ ಆಗಿತ್ತು.
ಈ 9 ಮಂದಿಯಲ್ಲಿ ಸಿರಿ ಹೊರಬರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಆದರೆ, ನಿನ್ನೆ (ನವೆಂಬರ್ 4) ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ಸಿರಿ ಸೇಫ್ ಆಗಿದ್ದರು. ಹೀಗಾಗಿ ಯಾರು ಹೊರಬರಬಹುದು ಅಂತ ಚರ್ಚೆ ಆಗುತ್ತಿತ್ತೋ ಅವರು ಸೇವ್ ಆಗಿದ್ದಾರೆ. ಹೀಗಾಗಿ ಉಳಿದ 8 ಮಂದಿಯಲ್ಲಿ ಹೊರಬರೋದು ಯಾರು ಅನ್ನೋ ಗೊಂದಲವಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆಗಬಹುದು ಎಂದು ನಿರೀಕ್ಷೆಯ ಪಟ್ಟಿಯಲ್ಲಿ ಸಿರಿ ಮೊದಲಿಗರಾಗಿದ್ದರು. ಬಳಿಕ ತುಕಾಲಿ ಸಂತು ಹೊರಬರಬೇಕು ಅಂತಲೂ ಚರ್ಚೆಯಾಗಿತ್ತು. ಇವರ ಜೊತೆಗೆ ವಿನಯ್ ಬಿಗ್ ಬಾಸ್ ಮನೆಯಲ್ಲಿ ದರ್ಪ ತೋರುತ್ತಿದ್ದಾರೆಂಬ ಕಾರಣಕ್ಕೆ ಎಲಿಮಿನೇಟ್ ಆಗಬೇಕು ಅಂತ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದರು.
ಆದರೆ, ನೆಟ್ಟಿಗರ ಊಹೆಗೂ ಮೀರಿದ ಎಲಿಮಿನೇಟ್ ಮಾಡಲಾಗಿದೆ. ಹೌದು.. ಈ ಬಾರಿ ಬಿಗ್ ಬಾಸ್ ಮನೆಯಿಂದ ದಿವಂಗತ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ ಔಟ್ ಆಗಿದ್ದಾರೆ. 9 ಮಂದಿ ನಾಮಿನೇಟ್ ಆದವರ ಪಟ್ಟಿಯಲ್ಲಿ ರಕ್ಷಕ್ ಕೂಡ ಇದ್ದರು. ಆದರೆ, ಇವರೇ ಎಲಿಮಿನೇಟ್ ಆಗಬಹುದೆಂದು ಯಾರೂ ಊಹೆಯನ್ನೂ ಮಾಡಿರಲಿಲ್ಲ.
ಫಿಲ್ಮಿಬೀಟ್‌ಗೆ ಸಿಕ್ಕಿರೋ ಮಾಹಿತಿ ಪ್ರಕಾರ ರಕ್ಷಕ್ ಬುಲೆಟ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಇಂದು ನಡೆಯುವ ಸೂಪರ್ ಸಂಡೇ ವಿತ್ ಸುದೀಪ ಶೋನಲ್ಲಿ ರಕ್ಷಕ್ ಎಲಿಮಿನೇಟ್ ಆಗಿರುವ ಸುದ್ದಿ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಹೊರಬಿದ್ದಿದ್ದು, ಇಂದು (ನವೆಂಬರ್ 5) ರಾತ್ರಿ ಕಿಚ್ಚ ಸುದೀಪ್ ಎಲಿಮಿನೇಷನ್‌ಗೆ ಕಾರಣಗಳನ್ನು ಹೇಳಬಹುದು.
ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೂ ಮುನ್ನ ರಕ್ಷಕ್ ಬುಲೆಟ್ ಹವಾ ಜೋರಿತ್ತು. ಯೂಟ್ಯೂಬ್‌ನಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ರಕ್ಷಕ್ ಆಡಿದ ಒಂದೊಂದು ಮಾತು ಕೂಡ ವೈರಲ್ ಆಗಿತ್ತು. ಹೀಗಾಗಿ ಬಿಗ್ ಮನೆಯೊಳಗೆ ರಕ್ಷಕ್ ಹವಾ ಜೋರಾಗಿರುತ್ತೆ ಅಂತ ನಿರೀಕ್ಷೆ ಮಾಡಲಾಗಿತ್ತು.
ಆದರೆ, ಬಿಗ್ ಬಾಸ್ ಮನೆ ಸೇರುತ್ತಿದ್ದಂತೆ ಸೈಲೆಂಟ್ ಆಗಿದ್ದರು. ಮೊದಲ ವಾರದಿಂದ ಮನೆಯೊಳಗೆ ಹೆಚ್ಚು ಸದ್ದು ಮಾಡಲೇ ಇಲ್ಲ. ಒಂದೆರಡು ವಾರಗಳಲ್ಲಿ ಗದ್ದಲ ಶುರು ಮಾಡುತ್ತಾರೆ ಅಂತ ಗೆಸ್ ಮಾಡಲಾಗಿತ್ತು. ನಾಲ್ಕು ವಾರಗಳನ್ನು ಕಳೆದರೂ ರಕ್ಷಕ್ ಬುಲೆಟ್ ಹೆಚ್ಚೇನು ಸದ್ದು ಮಾಡಲಿಲ್ಲ. ಈ ಕಾರಣಗಳಿಗೆ ರಕ್ಷಕ್ ಬುಲೆಟ್ ಅನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.