ರಾಜ್ಯದ ಜನತೆಗೆ ಬಿಗ್ ಶಾಕ್ : ವಿದ್ಯುತ್ ರೀತಿ ವರ್ಷಕ್ಕೊಮ್ಮೆ `ಬಸ್ ಪ್ರಯಾಣ ದರ’ ಏರಿಕೆಗೆ ಚಿಂತನೆ
1 min readರಾಜ್ಯ ಸರ್ಕಾರವು ಬಸ್ ಪ್ರಯಾಣಿಕರಿಗೆ ಶಾಕ್ ನೀಡಿದ್ದು, ವಿದ್ಯುತ್ ದರ ಹೆಚ್ಚಳದಂತೆ ಪ್ರತಿ ವರ್ಷವೂ ಬಸ್ ಪ್ರಯಾಣ ದರವನ್ನೂ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರ ನಿಗದಿಗೆ ಪ್ರತ್ಯೇಕ ನಿಯಂತ್ರಣ ಆಯೋಗ ರಚನೆ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಡೀಸೆಲ್, ಬಸ್ ಗಳ ಬಿಡಿಭಾಗಗಳ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕೂ ನಿಗಮಗಳ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ಹೀಗಾಗಿ ಇದನ್ನು ಸುಧಾರಿಸಲು ಇಲಾಖೆಯು ಸಾರಿಗೆ ಬಸ್ ಗಳ ಪ್ರಯಾಣ ದರವನ್ನು ವಿದ್ಯುತ್ ದರದಂತೆ ಪ್ರತಿ ವರ್ಷ ಏರಿಕೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ವಿದ್ಯುತ್ ದರ ಏರಿಕೆ ಮಾಡುವ ರೀತಿ ಪ್ರತಿ ವರ್ಷ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ನಿಯಂತ್ರಣ ಆಯೋಗದ ಮುಂದೆ ಸಲ್ಲಿಸಿ, ಅದಕ್ಕೆ ತಕ್ಕಂತೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.