ರಾಜಸ್ಥಾನ: ಇಬ್ಬರು ಇಡಿ ಅಧಿಕಾರಿಗಳನ್ನು ಬಂಧಿಸಿದ ಎಸಿಬಿ
1 min readರಾಜಸ್ಥಾನದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ತನ್ನ ತನಿಖೆಯನ್ನು ವಿಸ್ತರಿಸುತ್ತಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಅವರ ತನಿಖೆಯ ನಂತರ, ಇದೀಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ಧೊಟಾಸರಾ ಅವರ ಪುತ್ರರಾದ ಅಭಿಲಾಷ್ ಮತ್ತು ಅವಿನಾಶ್ ಧೊಟಾಸರಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಇಡಿ ದಾಳಿ ವಿವಾದಕ್ಕೀಡಾಗಿರುವ ಬೆನ್ನಲ್ಲೇ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಗುರುವಾರ ಅಲ್ವಾರ್‌ನಲ್ಲಿ ಇಡಿ ಅಧಿಕಾರಿ ನೌಲ್ ಕಿಶೋರ್ ಮೀನಾ ಮತ್ತು ಅವರ ಸಹಾಯಕರನ್ನು ಬಂಧಿಸಿದೆ.
ಮಣಿಪುರದ ಚಿಟ್ ಫಂಡ್ ಕಂಪನಿಯೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಗೆ 17 ಲಕ್ಷ ರೂ. ನೀಡುವಂತೆ ಒತ್ತಾಯಿಸುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಇಡಿ ಇನ್ಸ್‌ಪೆಕ್ಟರ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿಕೊಂಡಿದೆ.
ನವೆಂಬರ್ 7 ರಂದು ಅಭಿಲಾಷ್ ಮತ್ತು ನವೆಂಬರ್ 8 ರಂದು ಅವಿನಾಶ್ ಅವರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ಇಡಿ, ನವೆಂಬರ್ 9 ರಂದು ಇಬ್ಬರನ್ನೂ ಜಂಟಿ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.
ಈ ಪ್ರಕರಣ ಗೋವಿಂದ್ ಸಿಂಗ್ ಧೊಟಾಸರಾ ಅವರು ಶಿಕ್ಷಣ ಸಚಿವರಾಗಿದ್ದಾಗ ನಡೆದ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದೆ.