ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಂಮೇಟ್ ಲಾರಿಗಳ ಹಾವಳಿ.
1 min readಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇತ್ತಿಚೆಗೆ ಚಿಕ್ಕಬಳ್ಳಾಪುರದ ಚಿತ್ರಾವತಿಯ ಬಳಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸಿಮೆಂಟ್ ಟ್ಯಾಂಕರ್ ಗೆ ಡಿಕ್ಕಿಯಾಗಿದ್ದ ಟಾಟಾ ಸುಮೋದಲ್ಲಿ ೧೩ ಮಂದಿ ಮೃತಪಟ್ಟ ನಂತರ ನಮ್ಮ ರಸ್ತೆಯಲ್ಲಿ ಸಂಚರಿಸುವುದಕ್ಕೆ ತುಂಬಾ ಭಯವಾಗುತ್ತದೆ. ಇದು ಬೆಂಗಳೂರು-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇರಿಗೇನಹಳ್ಳಿ ಗೇಟ್ ನಿಂದ ವೆಂಕಟಗಿರಿಕೋಟೆ ಗೇಟ್ ನವರೆಗೆ ಸುಮಾರು ಒಂದೂವರೆ ಕೀ.ಮೀ.ಗಟ್ಟಲೇ ರಸ್ತೆಯ ಎರಡೂ ಬದಿಗಳಲ್ಲಿ ನೂರಕ್ಕೂ ಹೆಚ್ಚು ಸಿಮೆಂಟ್ ಟ್ಯಾಂಕರುಗಳು ನಿಲ್ಲಿಸಿರುತ್ತಾರೆ. ರಾತ್ರಿಯ ವೇಳೆ ಹೈದ್ರಾಬಾದ್ ಕಡೆಯಿಂದ ಬರುವ ವಾಹನ ಸವಾರರು ನಿದ್ದೆಯ ಮಂಪರಿನಲ್ಲಿರುತ್ತಾರೆ. ಅವರು, ಟ್ಯಾಂಕರುಗಳನ್ನು ಗುರ್ತಿಸಲು ಸಾಧ್ಯವಾಗದೇ ಅಪಘಾತಗಳಿಗೆ ಒಳಗಾಗುತ್ತಿದ್ದಾರೆ. ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತಗಳು ಸಂಭವಿಸಿದಾಗ ಮಾತ್ರ ಪೊಲೀಸರು, ಟ್ಯಾಂಕರುಗಳನ್ನು ನಿಲ್ಲಿಸದಂತೆ ಕಟ್ಟುನಿಟ್ಟಾಗಿ ಎಚ್ಚರಿಕೆ ಕೊಡುತ್ತಾರೆ. ಪುನಃ ಯಥಾಸ್ಥಿತಿಯಲ್ಲಿರುತ್ತದೆ ಸಂಬAಧಪಟ್ಟ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು .
ಇದೇ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವನಗೌಡ ಮಾತನಾಡಿ ಹಲವಾರು ಬಾರಿ ನಾವು ಸಿಮೆಂಟ್ ಲಾರಿಗಳು ನಿಲ್ಲಿಸಿದಂತೆ ನೋಟಿಸ್ ಜಾರಿ ನೀಡಿ ಮಾಡಿದ್ದು ಆದರೂ ಸಹ ರಸ್ತೆ ಪಕ್ಕದಲ್ಲಿ ಸಿಮೆಂಟ್ ಲಾರಿಗಳನ್ನು ನಿಲ್ಲಿಸುತ್ತಾರೆ ಈ ಬಗ್ಗೆ ಪೊಲೀಸರಿಗೆ ದೂರ ನೀಡಲಾಗಿದೆ ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.