ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಡಿವೈನ್ ಸಿಟಿ ಬಡಾವಣೆಯ ಖಾತೆಗಳ ಸಮಸ್ಯೆ

1 min read

ಚಿಕ್ಕಬಳ್ಳಾಪುರ ನಗರದ ಗೌರಿಬಿದನೂರು ರಸ್ತೆಯಲ್ಲಿರುವ ಗಂಗನಮಿದ್ದೆ ಗ್ರಾಮದ ಡಿವೈನ್ ಸಿಟಿ ಬಡಾವಣೆಯ ಖಾತೆಗಳ ಸಮಸ್ಯೆ ಬಗೆಹರಿಸಿ ಇ-ಆಸ್ತಿ ನಮೂನೆಯನ್ನು ನೀಡಲು ಇದೇ ಚಿಕ್ಕಬಳ್ಳಾಪುರದ ನಗರಸಭಾ ಸದಸ್ಯೆ ವಿ.ನೇತ್ರಾವತಿ ಅರ್ಜಿಯನ್ನು ಸಲ್ಲಿಸಿದ್ದು ಅದರಂತೆ ಮುಂದಿನ ಕಾರ್ಯಚಟುವಟಿಕೆ ಬದಲಾವಣೆಯ ಬಟಾಬಯಲು ಈಗ ಕಾಣುತ್ತಿದೆ, ಡಿವೈನ್ ಸಿಟಿ ಆಸ್ತಿಪಾಸ್ತಿ ಮಾಲೀಕರ ಎದೆಯಲ್ಲಿ ಡವ ಡವ ಆರಂಭವಾಗಿದೆ. ಚಿಕ್ಕಬಳ್ಳಾಪುರ ಸುತ್ತ ಮುತ್ತ ಲೆಕ್ಕವಿಲ್ಲದಷ್ಟು ಲೇ ಔಟ್‌ಗಳು ತಲೆಎತ್ತಿವೆ ಕೆಲವು ಕನ್ವರ್ಷನ್ ಆಗಿವೆ ಭೂ ಪರಿವರ್ತನೆ ಆಗದಿರುವ ಲೇ ಔಟ್‌ಗಳು ಇವೆ ೨೦೧೦-೧೧ ರಲ್ಲಿ ನಿರ್ಮಾಣವಾದ ಡಿವೈನ್ ಸಿಟಿ ಬಡಾವಣೆ ನಗರಕ್ಕೆ ಹೊಂದಿಕೊAಡಿರುವ ಬಹುದೊಡ್ಡ ಲೇಔಟ್ ಆಗಿದ್ದು ಲೇ ಔಟ್‌ಲ್ಲಿ ಇರೋ ಎಲ್ಲ ಸೈಟ್‌ಗಳು ಮಾರಾಟವಾಗಿವೆ ಮನೆಗಳು ನಿರ್ಮಾಣ ಆಗಿಬಿಟ್ಟಿವೆ ಎಲ್ಲವೂ ಸರಿವೋಯ್ತು ಎಂದು ನೆಮ್ಮದಿಯ ನಿಟ್ಟುಸಿರು ಬಿಡೋ ವೇಳೆಗೆ ತಲೆನೋವೊಂದು ಬಂದಿದೆ, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿ ಪರಿವರ್ತನೆಯಾದ ಮೇಲೆ ಸುತ್ತಮುತ್ತ ಲೆಕ್ಕವಿಲ್ಲದಷ್ಟು ಲೇ ಔಟ್‌ಗಳ ತಲೆ ಎತ್ತಿವೆ ಇನ್ನೂ ಸಾಕಷ್ಟು ಬಡಾವಣೆಗಳು ನಿರ್ಮಾಣವಾಗುತ್ತಲೂ ಇದಾವೆ. ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊAಡಿರುವ ಡಿವೈನ್ ಸಿಟಿ ೨೦೧೦-೧೧ ರಲ್ಲಿ ಶಿವಪ್ರಸಾದ್ ಅನ್ನೋರು ನಿರ್ಮಾಣ ಮಾಡಿದ್ದಾರೆ. ೭ನೇ ವಾರ್ಡ ಗಂಗನಮಿದ್ದೆ ೯೭ ಸೆರ್ವೆ ನಂಬರಲ್ಲಿ ೧೬ ಎಕರೆ ೨೩ ಗುಂಟೆಯಲ್ಲಿ ನಿರ್ಮಾಣ ಆಗಿರೋ ಈ ಸೈಟಲ್ಲಿ ಸುಮಾರು ೨೬೯ ಕ್ಕೂ ಹೆಚ್ಚು ನಿವೇಶನಗಳುಳ್ಳ ದೊಡ್ಡ ಬಡಾವಾಣೆ ಎನಿಸಿಕೊಂಡಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಿರ್ಮಾಣವಾದ ಈ ಲೇಔಟ್‌ಗೆ ಭೂ ಪರಿವರ್ತನೆಯೂ ಆಗಿದೆ ಕಾನೂನು ಬದ್ದವಾಗಿ ಒಂದು ಬಡಾವಣೆಗೆ ಏನೇನು ಬೇಕೋ ಎಲ್ಲವೂ ಇದೆ ಎಂದು ಮುಗಿಬಿದ್ದ ಜನ ನಿವೇಶನಗಳನ್ನೂ ಕೊಂಡುಕೊAಡು ಬೃಹತ್ ಕಟ್ಟಡಗಳನ್ನೂ ನಿರ್ಮಿಸಿಕೊಂಡಿದ್ದಾರೆ ಬಡಾವಣೆ ನಿರ್ಮಾಣಗೊಂಡು ಹತ್ತು ಹನ್ನೊಂದು ವರ್ಷಗಳಾದ ಮೇಲೆ ಆ ಬಡಾವಣೆ ನಿರ್ಮಾಣದಲ್ಲಿ ಅಕ್ರಮ ನಡೆದಿದೆ. ಇಲ್ಲಿ ಮಾಡಿಕೊಟ್ಟಿರುವ ಖಾತೆಗಳು ಈಗ ಬೋಗಸ್ ಎಂದು ತಿಳಿದು ಬಡಾವಣೆ ವಾಸಿಗಳು ಕಂಗಾಲಾಗಿದ್ದಾರೆ.
ಹೌದು ೨೦೧೦-೧೧ ರಲ್ಲಿ ನೀಡಿದ್ದ ನಕ್ಷೆಯಲ್ಲಿ ವ್ಯವಸಾಯಕ್ಕೆ ಸೇರಿದ ಒಂದಷ್ಟು ಜಮೀನಿದೆ ಎಂದು ೫ ಸೈಟುಗಳನ್ನ ಬಿಟ್ಟು ೨೬೫ ಸೈಟುಗಳನ್ನ ವಿಂಗಡಿಸಿ ಮತ್ತೊಂದು ಕಚ್ಚಾ ನಕ್ಷೆ ತಯಾರಿಸುತ್ತಾರೆ ಈ ಕಚ್ಚಾ ನಕ್ಷಕ್ಕೆ ನಗರಾಬಿವೃದ್ದಿ ಪ್ರಾದಿಕಾರ ಅನುಮೋದನೆಯೂ ನೀಡಿ ಡಿಸಿ ಅಪ್ರೂವಲ್ ಕೂಡ ಆಗಿದೆ ಎಲ್ಲರಿಗೂ ರಿಜಿಸ್ಟೇಷನ್ ಆಗಿದೆ ನಗರಕ್ಕೆ ಹತ್ತಿರ ಇದೆ ಅಂತ ದೊಡ್ಡದೊಡ್ಡವರೆ ಇಲ್ಲಿ ನಿವೇಶನ ಖರೀದಿಸಿದ್ದಾರೆ ಇಲ್ಲಿ ವೈದ್ಯರು,

ಪೊಲೀಸ್, ನ್ಯಾಯಾಂಗ ಇಲಾಖೆ ಶಿಕ್ಣಕರು ಬ್ಯಾಂಕ್ ಉದ್ಯೋಗಿಗಳು ಲಾಯರ್‌ಗಳು ಇಂತಹ ಬುದ್ದಿವಂತರೆ ನಿವೇಶನ ಖರೀದಿಸಿದ್ದಾರೆ ಹೀಗೆ ಮುಗಿಬಿದ್ದು ಖರೀದಿಸಿದ ಬಡಾವಣೆಗೆ ೨೦೧೩ ಚಿಕ್ಕಬಳ್ಳಾಪುರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಡಾವಣೆ ಅನುಮೋದನೆಗೆ ಕಳಿಸುವಾಗಲೆ ೨೭೦ ಸೈಟುಗಳ ಪೈಕಿ ೧೯೧ ರಿಂದ ೧೯೪ ರವರೆಗೂ ವ್ಯವಸಾಯ ಜಮೀನುಗಳಿವೆ ಅಲ್ಲದೆ ನಿವೇಶನ ಅಳತೆ ಪ್ರಕಾರ ೬೩ ಸೈಟುಗಳಿಗೆ ಅಳತೆ ವ್ಯತ್ಯಾಸ ಕಂಡು ಬರುತ್ತಿದೆ ಹಾಗಾಗಿ ಈ ಬಡಾವಣೆ ನೊಂದಾವಣೆಯನ್ನು ರದ್ದುಪಡಿಸಲಾಗುತ್ತಿದೆ ಎಂಬ ಆದೇಶವನ್ನು ಹೊರಡಿಸಿದ್ದಾರೆ.ಕಚ್ಚಾ ನಕ್ಷೆ ಮೇಲೆ ರಿಜಿಸ್ಟರ್ ಮಾಡಿರುವ ಈ ಬಡಾವಣೆ ಪಕ್ಕಾ ನಕ್ಷೆ ಮೇಲೆ ನೊಂದಾವಣೆಯಾಗಿಲ್ಲದ ಕಾರಣ ಸರ್ಕಾರಿ ಅನುಮೋದಿತ ಬಡಾವಣೆಯಲ್ಲಿ ಹಾಗಾಗಿಯೇ ಈ ಬಡಾವಣೆಗೂ ನಗರಸಭೆಯಿಂದ ಕಳೆದ ಹತ್ತು ವರ್ಷಗಳಿಂದಲೂ ಕಂದಾಯವೂ ಕಟ್ಟಿಸಿಕೊಂಡಿಲ್ಲ ಬೀದಿ ದೀಪಗಳ ವ್ಯವಸ್ಥೆ,ಚರಂಡಿ ಸ್ವಚ್ಚಗೊಳಿಸುವ ದುರಸ್ತಿ ಮಾಡಿಸುವ ಕೆಲಸಕ್ಕೂ ಮುಂದಾಗಿಲ್ಲ ಎಂದು ಕಂಡು ಬಂದಿದೆ ಇಷ್ಟೊಂದು ದೊಡ್ಡಬಡಾವಣೆ ಇದೆ ಇದರಿಂದ ನಗರಭೆಗೆ ಬರಬೇಕಾದ ಕಾಂದಾಯ ಯಾಕೆ ಸಂಗ್ರಹವಾಗುತ್ತಿಲ್ಲ ಸಮಸ್ಯೆ ಏನು ಎಂದು ೨೭ ನೇ ವಾರ್ಡ್ ಸದಸ್ತೆ ನೇತ್ರಾವತಿ ಇಲಾಖೆಗೆ ವಿವರ ಕೇಳಿ ಪತ್ರ ಬರೆದಾಗಲೆ ಇದರ ಹಣೆ ಬರಹ ಆಚೆ ಬಿದ್ದಿದೆ ಇದನ್ನ ಸರಿಪಡಿಸಿ ಕಂದಾಯ ಸಂಗ್ರಹಿಸಿ ಎಂದು ಪೌರಾಯುಕ್ತರಿಗೆ ಇದೆ ೨೭ ನೇ ವಾರ್ಡಿನ ಸದಸ್ಯೆ ನೇತ್ರಾವತಿ ಅರ್ಜಿ ಕೊಡುತ್ತಾರೆ ಅದರ ಈ ಪತ್ರ ಬಹಿರಂಗಗೊAಡ ಕೂಡಲೆ ಮಾದ್ಯಮಗಳಲ್ಲೂ ಪ್ರಚಾರವಾಗುತ್ತದೆ ಇದಕ್ಕೆ ಸ್ಪಸ್ಟನೆ ಕೇಳಿರುವ ಈಗಿನ ಪೌರಾಯುಕ್ತ ಮಂಜುನಾಥ್ ಯೋಜನಾ ನಿರ್ದೇಶಕರು ನಗರಾಭಿವಿದ್ದಿ ಪ್ರಾಧಿಕಾರ ಹಾಗು ಪೌರಾಡಳಿ ನಿರ್ದೇಶನಾಯಲಕ್ಕೆ ಪತ್ರ ಬರೆದಿದ್ದಾರೆ ಅದು ಕೂಡ ಬಹಿರಂಗಗೊAಡಿದೆ ಈ ಮಾಹಿತಿ ಗೊತ್ತಾದ ಮೇಲೆ ಡಿವೈನ್ ಸಿಟಿ ವಾಸಿಗಳು ಕಂಗಾಲಾಗಿದ್ದಾರೆ ಇಲ್ಲಿರುವ ಮಾಲೀಕರು ಆಸ್ತಿ ಮಾರಾಟ ಮಾಡೊಕ್ಕಾಗಲಿ ಬ್ಯಾಂಕುಗಳಿAದ ಸಾಲವಾಲ ಪಡೆಯೊಕ್ಕಾಗಲಿ ಅರ್ಹರಿಲ್ಲ ಅನ್ನೋದು ಈಗೀಗ ಬಹಿರಂಗ ಆಗಿದೆ
ಇದಕ್ಕೆ ಪ್ರತಿಕ್ರಿಯೆಸಿರುವ ಇಲ್ಲಿನ ವಾಸಿ ಕೃಷ್ಣಪ್ಪ ನಾವೇನು ತಪ್ಪುಮಾಡಿದ್ದೇಬೆ ಅವತ್ತು ಬಡಾವಣೆ ನೊಂದಣೆ ಮಾಡಿಕೊಟ್ಟ ಅಧಿಕಾರಿಗಳಿಗೆ ಎಲ್ಲವೂ ಗೊತ್ತಿತಲ್ವಾ ಅವಗೇನು ಮಾಡಿತಿದ್ರು ಯಾಕೆ ಬಡವಾಣೆಗೆ ಅನುಮತಿ ಕೊಟ್ಟಿದ್ಸಾರೆ ಎಲ್ಲಾ ಸರಿಯಾಗಿದೆ ಅಂದ ಮೇಲೆ ಸೈಟು ಕೊಂಡುಕೊAಡಿದ್ದೀವಿ ಇವಾಗ ಅದಿಲ್ಲ ಇದಿಲ್ಲ ಅಂದ್ರೆ ನಾವೆಲ್ಲಿ ಹೋಗೋದು ಇದೆಕ್ಕೆಲ್ಲಾ ಅವತ್ತಿನ ಅಧಿಕಾರಿಗಳೆ ಕಾರಣ ಅವರ ಮೇಲೆ ಕ್ರಮಕೈಗೊಳ್ಳಿ ಎಂದು ಕಿಡಿಕಾರಿದ್ದಾರೆ                                                                                                                         
ಡಿವೈನ್ ಸಿಟಿ ಬಡಾವಣೆ ನಗರಸಭೆಗೆ ಯಾಕೆ ಸೇರಿಸಿಕೊಂಡಿಲ್ಲ ಅಲ್ಲಿರೋ ಸಮಸ್ಯೆಗಳೇನು ಯಾಕೆ ಅಲ್ಲಿಗೆ ನಮ್ಮ ಸೌಲಬ್ಯ ಸಿಗುತ್ತಿಲ್ಲ ಅನ್ನೋದಕ್ಕೆ ಸ್ಪಸ್ಟನೆ ಕೇಳಿ ಪತ್ರ ಬರೆದಿದ್ದೇವೆ ಈ ಮದ್ಯೆ ಕೆಲವರು ನಿವಾಸಿಗಳಿಂದ ಹಣಪಡೆದು ಸರಿಮಾಡಿಕೊಡುವ ಆಮಿಷ ಒಡ್ಡುತ್ತಿರುವ ಬಗ್ಗೆ ನಮಗೆ ಮಾಗಿತಿ ಬಂದಿದೆ ಅಂತಹ ಊಹಾಪೋಹಗಳನ್ನ ನಂಬಬೇಡಿ ನಿಮಗೇನಾದ್ರು ಅನುಮಾನ ಇದ್ರೆ ನೇರವಾಗಿ ನಗರಸಭೆಯನ್ನೆ ಸಂಪರ್ಕಿಸಿ ಎಂದು ಪೌರಾಯುಕ್ತ ಮಂಜುನಾಥ್ ಸ್ಪಸ್ಟೀಕರಿಸಿದ್ದಾರೆ.
ಏನೆ ಆದ್ರೂ ಲಕ್ಷ ಲಕ್ಷ ಬಂಡವಾಳ ಸುರಿದು ನಿವೇಶನ ಖರಿದಿಸಿರೋವರು ಮನೆಕಟ್ಟಿಕೊಂಡಿರೋರು ಪರಿಸ್ತಿತಿ ಡೊಲಾಯಮಾನವಾಗದಂತೆ ಸಂಬAದಿಸಿ ಇಲಾಕೆಗಳು ಈ ತ್ರಿಶಂಕು ಪರಿಸ್ತಿತಿಯನ್ನ ತಿಳಿಗೊಳಿಸಲು ಮುಂದಾಗಬೇಕು ಎನ್ನುವದೆ ನಮ್ಮ ಕಳಕಳಿ.

About The Author

Leave a Reply

Your email address will not be published. Required fields are marked *