ಶಿಡ್ಲಘಟ್ಟದಲ್ಲಿ ಅಂಬೇಡ್ಕರ್ ಭವನಕ್ಕೆ ಭೂಮಿ ಪೂಜೆ

ನಂಜನಗೂಡಿನಲ್ಲಿ ಅಂಬೇಡ್ಕರ್ ೧೩೪ನೇ ಜಯಂತಿ

ಮಂಚೇನಹಳ್ಳಿಯಲ್ಲಿ ಅಂಬೇಡ್ಕರ್ ಜಯಂತಿ

ಸಾಮೂಹಿಕ ಶೌಚಾಲಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ

April 15, 2025

Ctv News Kannada

Chikkaballapura

ಪಶು ಆಹಾರ ಉತ್ಪಾದನಾ ಘಟಕ ಕಾರ್ಯಾರಂಭ.

1 min read

ಶಿಡ್ಲಘಟ್ಟ ತಾಲೂಕಿನ ಸಾದಲಿ ಬಳಿ ನೂತನವಾಗಿ ಕಾರ್ಯಾರಂಭ ಮಾಡಿರುವ ಪಶು ಆಹಾರ ಉತ್ಪಾಧನಾ ಘಟಕದ ಬಗ್ಗೆ ಸಾದಲಮ್ಮ ದೇವಾಲಯ ಆವರಣದಲ್ಲಿ ಸಭೆ ನಡೆಯಿತು, ಈ ಸಭೆಯಲ್ಲಿ
ಕೆಪಿಸಿಸಿ ಕೋಆರ್ಡಿನೇಟರ್ ರಾಜೀವ್‌ಗೌಡ ಮಾತನಾಡಿ ಪಶು ಆಹಾರ ಘಟಕದಲ್ಲಿ 60 ಮಂದಿ ಕಾರ್ಯನಿರ್ವಹಿಸುತ್ತಿದ್ದು ಸಧ್ಯ 30 ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಶೇ 90ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಲು ಮಾತುಕತೆ ನಡೆಸಲಾಗಿದೆ. ಸ್ಥಳೀಯ ರೈತರು ತಾವು ಬೆಳೆದ ಜೋಳವನ್ನು ಈ ಘಟಕಕ್ಕೆ ಮಾರಾಟ ಮಾಡಿ ಅದಿಕ ಬೆಲೆಯನ್ನು ನಿಮ್ಮದಾಗಿಸಿಕೊಳ್ಳಿ, ಅದಕ್ಕೆ ಬೇಕಾದ ಎಲ್ಲ ರೀತಿಯ ನೆರವನ್ನು ನಾನು ನಿಮಗೆ ನೀಡಲಿದ್ದೇನೆ ಎಂದು ಭರವಸೆ ನೀಡಿದರು. ಪಶು ಆಹಾರ ಉತ್ಪಾಧನಾ ಘಟಕದ ಎಂಡಿ ಶಶಿಧರ್ ಮಾತನಾಡಿ, ಸಾದಲಿ ಬಳಿ ಆರಂಭವಾಗಿರುವ ಪಶು ಆಹಾರ ಉತ್ಪಾಧನಾ ಘಟಕವು ದೇಶದಲ್ಲೆ ಅತಿ ಹೆಚ್ಚು ಪಶು ಆಹಾರ ಉತ್ಪಾಸುವ ಘಟಕ ಇದಾಗಿದ್ದು ಪ್ರತಿ ನಿತ್ಯ 800 ಟನ್ ಪಶು ಆಹಾರ ಉತ್ಪಾಸುವ ಸಾಮಥ್ರ‍್ಯ ಇದೆ. ಆದರೆ ಮುಸುಕಿನ ಜೋಳ ಲಭ್ಯತೆಯ ಆಧಾರದಲ್ಲಿ ಸಧ್ಯ 300 ಟನ್‌ನಷ್ಟು ಮಾತ್ರವೇ ಉತ್ಪಾಧನೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಉತ್ಪಾಧನಾ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ ಎಂದರು. ರೈತರು ಮದ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ನಮ್ಮನ್ನು ಸಂಪರ್ಕಿಸಿ ಮಾರುಕಟ್ಟೆಗಿಂತ 50 ರೂ. ಹೆಚ್ಚು ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ನೀಡಿ ಖರೀದಿಸುತ್ತೇವೆ. ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ನಂಬರ್ ಕೊಡಿ ಮಾರನೇ ದಿನವೇ ನಿಮ್ಮ ಖಾತೆಗೆ ಹಣವನ್ನು ಜಮೆ ಮಾಡುತ್ತೇವೆ ಎಂದು ಹೇಳಿದರು. ಈ ಸಮಯದಲ್ಲಿ ಸ್ಥಳೀಯ ಮುಖಂಡರು, ರೈತರು ಹಾಜರಿದ್ದರು.

About The Author

Leave a Reply

Your email address will not be published. Required fields are marked *