10 ರೈಲು ಸೇವೆಯಿಂದ ವಂಚಿತರಾದ ರಾಮನಗರ ಜಿಲ್ಲೆಯ ಜನತೆ! ಮಂಡ್ಯ, ಬೆಂಗಳೂರು ಹಾಗೂ ಮೈಸೂರಿಗೆ ಓಡಾಟ ಅನಿವಾರ್ಯ
1 min read
1 year ago
ರಾಮನಗರ ಜಿಲ್ಲೆಯಾಗಿ 17 ವರ್ಷ ಕಳೆದಿದ್ದರೂ, ರೈಲು ನಿಲುಗಡೆಗೆ ಮಾತ್ರ ಈ ಜಿಲ್ಲೆಯನ್ನು ಇನ್ನೂ ಕೂಡಾ ಪರಿಗಣಿಸುತ್ತಿಲ್ಲ. ಜಿಲ್ಲೆಯ ಮೂಲಕವೇ ಹಾದು ಹೋದರೂ 10 ರೈಲುಗಳ ಸೌಲಭ್ಯಕ್ಕಾಗಿ ಮಾತ್ರ ಜನ ಮೈಸೂರು, ಮಂಡ್ಯ ಬೆಂಗಳೂರಿಗೆ ಓಡಾಟ ನಡೆಸಬೇಕಿದೆ. ಚೆನ್ನೈ ಮೈಸೂರಿನ ವಂದೇ ಭಾರತ್ ರೈಲನ್ನು ಇಲ್ಲಿ ನಿಲ್ಲಿಸಲಾಗುತ್ತಿದೆ. ಇನ್ನು ಬೆಂಗಳೂರು ರಾಮನಗರ ನಡುವಿನ ಡೆಮೋ ರೈಲು ಸಂಚಾರವನ್ನೂ ಮೈಸೂರು ವರೆಗೆ ವಿಸ್ತರಿಸಲಾಗಿದೆ. .
ರಾಮನಗರ ಜಿಲ್ಲೆಯಾಗಿ 16 ವರ್ಷ ಪೂರೈಸಿ 17 ನೇ ವರ್ಷಕ್ಕೆ ಕಾಲಿಟ್ಟಿದೆ. ಆದರೂ, ಜಿಲ್ಲಾಕೇಂದ್ರಕ್ಕೆ ಬೇಕಾಗಿರುವ ಅಗತ್ಯ ರೈಲ್ವೆ ಸೌಲಭ್ಯವೇ ಇಲ್ಲವಾಗಿದ್ದು, ಈ 10 ರೈಲುಗಳ ಸೇವೆ ಪಡೆಯಬೇಕೆಂದರೆ, ಪಕ್ಕದ ಮಂಡ್ಯ, ಬೆಂಗಳೂರು ಹಾಗೂ ಮೈಸೂರಿಗೆ ತೆರಳುವುದು ಅನಿವಾರ‍್ಯವಾಗಿದೆ.
ರಾಮನಗರ ಮತ್ತು ಚನ್ನಪಟ್ಟಣ ಭಾಗದಿಂದ ನಿತ್ಯ ಏನಿಲ್ಲವೆಂದರೂ ಕನಿಷ್ಠ 25 ಸಾವಿರ ಮಂದಿ ರೈಲಿನಲ್ಲಿ ಉದ್ಯೋಗಕ್ಕೆಂದು ಬೆಂಗಳೂರಿಗೆ ತೆರಳುತ್ತಾರೆ. ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ರೈಲಿನಲ್ಲಿ ನಿಲ್ಲಲು ಸಹ ಸ್ಥಳವಕಾಶವಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೇ ಜನತೆ ಮೈಸೂರು ಹಾಗೂ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಾದ ಸ್ಥಿತಿ ಇದೆ. ಅದರಲ್ಲೂ ಮೈಸೂರು ದಸರಾ ಕಣ್ತುಂಬಿಕೊಳ್ಳಲು ಹೆಚ್ಚಿನ ಜನ ಈ ರೈಲು ಮಾರ್ಗವನ್ನೇ ಅವಲಂಭಿಸಿದ್ದಾರೆ. ರೈಲು ಸೇವೆ ಒದಗಿಸಿದರೆ ಅನುಕೂಲವಾಗಲಿದೆ.