ರೈಲ್ವೆ ನಿಲ್ದಾಣದಲ್ಲಿ ಕುಡಿದು ಮಲಗಿದ್ದ ಪ್ರಯಾಣಿಕರಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ!
1 min readಮದ್ಯ ಸೇವಿಸಿ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಯಾದಗಿರಿ ಜಿಲ್ಲೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ತಡರಾತ್ರಿ ನಡೆದಿರುವ ಘಟನೆ. ಮದ್ಯ ಸೇವಿಸಿ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರು. ರೈಲ್ವೆ ನಿಲ್ದಾಣದಲ್ಲಿ ಕುಡಿದು ಮಲಗಿದ್ರೆ ಬೇರೆ ಪ್ರಯಾಣಿಕರಿಗೆ ತೊಂದರೆಯಾಗ್ತದೆ ಎಂದು ಮೊದಲಿಗೆ ಬುದ್ದಿ ಮಾತು ಹೇಳಿದ ರೈಲ್ವೆ ಪೋಲಿಸರು ಆದರೆ ಪೊಲೀಸರ ಮಾತು ಕೇಳದೇ ಅಲ್ಲೇ ಮಲಗಿದ್ದ ಪ್ರಯಾಣಿಕರು. ಇದರಿಂದ ಸಿಟ್ಟಿಗೆದ್ದ ಆರ್‌ಪಿಎಫ್ ಪೊಲೀಸರು ಕುಡಿದು ಮಲಗಿದ್ದ ಪ್ರಯಾಣಿಕರನ್ನು ಕಚೇರಿಯೊಳಗೆ ಕರೆದುಕೊಂಡು ಕೂಡಿಹಾಕಿದ್ದಾರೆ. ಈ ವೇಳೆ ಕೊಠಡಿಯಲ್ಲಿ ಪ್ರಯಾಣಿಕರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಪೊಲೀಸರು. ಇದರಿಂದ ಆರ್‌ಪಿಎಫ್ ಪೊಲೀಸರ ವಿರುದ್ಧ ಕೆರಳಿದ ಪ್ರಯಾಣಿಕರು. ಪರಿಸ್ಥಿತಿ ತಿಳಿಗೊಳಿಸಲು ಹೋದ ಇನ್ನೊಬ್ಬ ಆರ್‌ಪಿಎಫ್ ಪೊಲೀಸ್ ಪೇದೆಯನ್ನ ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು. ಪೊಲೀಸರು ನಮಗೆ ಹೊಡೆಯುತ್ತಾರೆ? ರೂಮ್‌ನಲ್ಲಿ ಕರೆದುಕೊಂಡು ಹೊಡೆದಿದ್ದಾರೆ. ನಾವು ಏನು ತಪ್ಪು ಮಾಡಿದ್ದೇವೆಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರಯಾಣಿಕರು.
ಒಟ್ಟಿನಲ್ಲಿ ರೈಲ್ವೆ ನಿಲ್ದಾಣದಲ್ಲಿ ಮದ್ಯ ಸೇವಿಸಿ ಮಲಗಬೇಡಿ ಎಂದು ಬುದ್ಧಿಮಾತು ಕೇಳದ್ದಕ್ಕೆ ರೈಲ್ವೆ ಪೊಲೀಸರು ಕೊಠಡಿಯೊಳಗೆ ಕೂಡಿಹಾಕಿ ಥಳಿಸಿರುವುದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.