ಮಂಗಳವಾರ, ಅಮಾವಾಸ್ಯೆದಿನ ಕನ್ನಡಭವನ ಉದ್ಘಾಟನೆ
1 min read
ಮಂಗಳವಾರ, ಅಮಾವಾಸ್ಯೆದಿನ ಕನ್ನಡಭವನ ಉದ್ಘಾಟನೆ
ಎರಡು ಬಾರಿ ಮುಂದೂಡಿದ್ದ ಉದ್ಘಾಟನೆ ಅಮಾವಾಸ್ಯೆಗೆ ಫಿಕ್ಸ್
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಯೂ ಅಮಾವಾಸ್ಯೆಗೆ
ಅಮಾವಾಸ್ಯೆ ದಿನ ಕನ್ನಡ ಭವನ ಉದ್ಘಾಟನೆಗೆ ಆಸ್ತಿಕರ ಆಸಮಾಧಾನ
ಎರಡು ಬಾರಿ ದಿನಾಂಕ ನಿಗಧಿಯಾಗಿ, ಕಾರಣಾಂತರಗಳಿAದ ಮುಂದೂಡಲ್ಪಟ್ಟಿದ್ದ ಕನ್ನಡ ಭವನ ಉದ್ಘಾಟನೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೂರನೇ ಬಾರಿಗೆ ದಿನಾಂಕ ನಿಗಧಿಯಾಗಿದೆ. ಆದರೆ ನಿಗಧಿಯಾಗಿರುವ ದಿನ ಮಂಗಳವಾರ ಅಮಾವಾಸ್ಯೆ, ಅಮಾವಾಸ್ಯೆ ಮಂಗಳವಾರದAದು ಉದ್ಘಾಟನೆಯಾಗಲಿದೆಯಾ ಇಲ್ಲವೇ ಅಂದೂ ಮುಂದೂಡಲ್ಪಡುತ್ತಿದೆಯಾ ಎಂಬುದನ್ನು ಕಾದು ನೋಡಬೇಕಿದೆ. ಈ ಕುರಿತು ಒಂದು ಸ್ಟೋರಿ ನೋಡಿ.
ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರವಾಗಿ ೧೭ ವರ್ಷಗಳು ಪೂರೈಸಿದೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಸಮರ್ಪಕವಾದ ಒಂದು ರಂಗಮAದಿರವಿಲ್ಲ. ಇದರಿಂದ ಯಾವುದೇ ಕನ್ನಡ ಕಾರ್ಯಕ್ರಮ ಮಾಡಬೇಕಿದ್ದರೂ ಪರದಾಡಬೇಕಾದ ಸ್ಥಿತಿ ಕನ್ನಡಾಭಿಮಾನಿಗಳಿಗೆ ಎದುರಾಗಿತ್ತು. ಇದೇ ಕಾರಣಕ್ಕೆ ಚಿಕ್ಕಬಳ್ಳಾಪುರದ ಬಿಬಿ ರಸ್ತೆಯ ಬಸಪ್ಪನ ಛತ್ರದ ಜಾಗದಲ್ಲಿ ಬೃಹತ್ ರಂಗಮAದಿರ ನಿರ್ಮಾಣ ಮಾಡಲಾಯಿತು. ಆದರೆ ಅದು ಅನುದಾನದ ಕೊರತೆಯಿಂದ ಸಾಕಷ್ಟು ಕಾಲ ನಿರ್ಮಾಣ ಹಂತದಲ್ಲಿಯೇ ಉಳಿಯುವಂತಾಯಿತು. ಆದರೆ ಇದೀಗ ಈ ಎಲ್ಲ ಸಮಸ್ಯೆಗಳನ್ನು ದಾಟಿಕೊಂಡು ರಂಗಮAದಿರ ಸಿದ್ಧವಾಗುತ್ತಿದ್ದಂತೆ ಉದ್ಘಾಟನೆಗೆ ದಿನವೂ ನಿಗಧಿಯಾಗಿತ್ತು.
೨೦೨೫ರ ಮಾರ್ಚ್ ೮ಕ್ಕೆ ಕನ್ನಡ ಭವನ ಉದ್ಘಾಟನೆ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ದಿನಾಂಕ ನಿಗಧಿ ಪಡಿಸಲಾಯಿತು. ಆದರೆ ಆ ಸಮಯಕ್ಕೆ ಕನ್ನಡ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದ ಕಾರಣ ಆ ದಿನಾಂಕವನ್ನು ಮುಂದೂಡಲಾಯಿತು. ನಂತರ ಏಪ್ರಿಲ್ ೨೩, ೨೪ಕ್ಕೆ ಕನ್ನಡ ಭವನ ಉದ್ಘಾಟನೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. ಈ ವೇಳೆ ಆಹ್ವಾನ ಪತ್ರಿಕೆಗಳು ಮುದ್ರಣಗೊಂಡು, ಹಂಚಿಕೆ ಮಾಡಿ, ಕನ್ನಡ ಭವನವನ್ನು ಹೂವಿನಿಂದ ಸಿಂಗಾರ ಮಾಡಿ, ಇನ್ನೇನು ಉದ್ಘಾಟನೆ ಮಾಡಬೇಕು, ಅದೇ ಸಮಯಕ್ಕೆ ಧರ್ಮಗುರು ಪೋಪ್ ಅವರ ನಿಧನವಾಯಿತು.
ಪರಿಣಾಮ ದೇಶದಾದ್ಯಂತ ಎರಡು ದಿನಗಳ ಶೋಕಾಚರಣೆಯನ್ನು ಕೇಂದ್ರ ಸರ್ಕಾರ ಘೋಷಿಸಿತು. ಈ ವೇಳೆ ರಾಷ್ಟçಧ್ವಜವನ್ನು ಅರ್ಧಕ್ಕೆ ಇಳಿಸುವ ಜೊತೆಗೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಸಂಭ್ರಮಾಚರಣೆಗಳನ್ನು ನಡೆಸದಂತೆ ಸೂಚನೆ ನಡೀಲಾಯಿತು. ಇದರಿಂದ ಎರಡನೇ ಬಾರಿಗೆ ನಿಗಧಿಯಾಗಿದ್ದ ಕನ್ನಡ ಭವನ ಉದ್ಘಾಟನೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದವು.
ಜಿಲ್ಲಾ ಪರಿಷತ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲವೆಂದು. ಪದಾಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ನಾನಾ ರೀತಿಯ ಆರೋಪಗಳು ಕೇಳಿಬಂದವು. ಜೊತೆಗೆ ಆಹ್ವಾನ ಪತ್ರಿಕೆಯ ವಿಚಾರದಲ್ಲಿಯೂ ಕಾರ್ಯಕಾರಿ ಸಮಿತಿ ಸೇರಿದಂತೆ ಸಂಬAಧಿಸಿದವರ ಜೊತೆ ಚರ್ಚೆ ಮಾಡದೆ ನಿರ್ಧಾರ ಮಾಡಲಾಗಿದೆ ಎಂಬ ಟೀಕೆಗಳು ವ್ಯಕ್ತವಾದವು. ಸಮ್ಮೇಳನ ಮುಂದೂಡಿದ ಪರಿಣಾಮ ಈ ಎಲ್ಲ ಟೀಕೆ ಮತ್ತು ಆರೋಪಗಳಿಗೆ ತೆರೆ ಬಿದ್ದಿತ್ತು. ಇದೀಗ ಮೂರನೇ ಬಾರಿಗೆ ಮತ್ತೆ ಕನ್ನಡ ಭವನ ಉದ್ಘಾಟನೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ದಿನಾಂಕ ನಿಗಧಿಯಾಗಿದೆ.
ಆದರೆ ಈ ಬಾರಿ ನಿಗಧಿಯಾಗಿರುವ ದಿನಾಂಕ ಮಾತ್ರ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೇಳಿ ಮಾಡಿಸಿದಂತಿದೆ. ಈ ಹಿಂದೆ ಇದೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮೌಢ್ಯವಿರೋಧಿ ಕಾನೂನು ತರಲು ಮುಂದಾಗಿದ್ದರು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದೇ ರೀತಿಯಾಗಿ ಜಿಲ್ಲೆಯ ಹೃದಯ ಎನಿಸಿದ ಕನ್ನಡ ಭವನ ಉದ್ಘಾಟನೆ ಅಮಾವಾಸ್ಯೆ ಮಂಗಳವಾರದAದು ಹಮಮಿಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಸನಾತನ ಸಾಂಪ್ರದಾಯದAತೆ ಸಹಜವಾಗಿ ಮಂಗಳವಾರದ ದಿನವೇ ಯಾವುದೇ ಶುಭ ಸಮಾರಂಭಗಳನ್ನು ನಡೆಸುವುದಿಲ್ಲ. ಅಂತಹ ಮಂಗಳವಾರದ ದಿನವೇ ಅಮಾವಾಸ್ಯೆ ಇದ್ದು, ಅದೇ ದಿನ ಕನ್ನಡ ಭವನದ ಉದ್ಘಾಟನೆ ಹಮ್ಮಿಕೊಂಡಿರುವುದು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷಕ್ಕೆ ನಿದರ್ಶನವಾಗಿದೆ ಎಂದು ಪ್ರe್ಞÁವಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಮತ್ತು ಸಚಿವರಿಗೆ ಅಮಾವಾಸ್ಯೆ ಶುಭದಿನವಾಗಿದ್ದರೆ ಅವರ ಮನೆಗಳ ಕಾರ್ಯಕ್ರಮಗಳನ್ನು ಅಮಾವಾಸ್ಯೆ ದಿನ ಮಾಡಲಿ, ಜಿಲ್ಲೆಯ ಕೇಂದ್ರ ಬಿಂಧುವಾಗಿರುವ ಕನ್ಡನ ಭವನದ ಉದ್ಘಾಟನೆ ಅಮಾವಾಸ್ಯೆ ದಿನ ಯಾಕೆ ಮಾಡಬೇಕು, ಮತ್ತೊಂದು ದಿನ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಮೇ ೨೭ರ ಮಂಗಳವಾರ ಅಮಾವಾಸ್ಯೆ ಇದ್ದು, ಅದೇ ದಿನ ಕನ್ನಡ ಭವನ ಉದ್ಘಾಟನೆ ನಿಗಧಿ ಮಾಡಲಾಗಿದೆ. ಅದೇ ದಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯೂ ನಡೆಯಲಿದೆ. ಅಂದರೆ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಭವನ ಉದ್ಘಾಟನೆ ಅಮಾವಾಸ್ಯೆ ದಿನ ಹೊರತುಪಡಿಸಿ, ಇತರೆ ಶುಭ ದಿನಗಳೇ ದೊರೆಯಲಿಲ್ಲವೇ ಎಂಬ ಪ್ರಶ್ನೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೇ ಉತ್ತರಿಸಬೇಕಿದೆ. ಇನ್ನು ಈ ಕುರಿತು ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರಿಗೆ ಸಿಟಿವಿ ನ್ಯೂಸ್ ಕರೆ ಮಾಡಿದರೆ ಕರೆ ಸ್ವೀಕರಿಸಿಲ್ಲ.
ಮೇ ೨೭ ಮತ್ತು ೨೮ ರಂದು ೧೦ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ೨೭ ರಂದು ಕನ್ನಡ ಭವನ ಉದ್ಘಾಟನೆ ಮಾಡಲಾಗುತ್ತಿದೆ. ಉಧ್ಘಾಟನೆ ನಂತರ ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿಷ್ಟಾಚಾರದಂತೆ ಜಿ¯್ಲೆಯ ಜನಪ್ರತಿನಿಧಿಗಳಿಗೆ, ಗಣ್ಯ ವ್ಯಕ್ತಿಗಳಿಗೆ, ಹಿರಿಯ ಅಧಿಕಾರಿಗಳಿಗೆ, ಕನ್ನಡ ಪರ ಸಂಘಗಳು ಹಾಗೂ ಇತರೆ ಸರ್ಕಾರೇತರ ಸಂಘ ಸಂಸ್ಥೆ ಗಳ ಸದಸ್ಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಏಪ್ರಿಲ್ ೨೩ ಮತ್ತು ೨೪ ರಂದು ಸಮ್ಮೇಳನ ನಡೆಯ ಬೇಕಾಗಿತ್ತು. ಕಾರಣಾಂತರಗಳಿAದ ಮುಂದೂಡಲಾಯಿತು. ಮೇ ೨೭ರಂದು ಬೆಳಿಗ್ಗೆ ೮.೩೦ಕ್ಕೆ ಕನ್ನಡ ಭವನ ಮುಂಭಾಗದಲ್ಲಿ ರಾಷ್ಟçಧ್ವಜ, ನಾಡ ಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಗಳ ಧ್ವಜಾರೋಹಣ ಮಾಡಲು ತೀರ್ಮಾನಿಸಲಾಗಿದೆ. ರಾಷ್ಟçದ್ವಜವನ್ನು ಜಿ¯್ಲÁ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಧ್ವಜಾರೋಹಣ ಮಾಡಲಿz್ದÁರೆ, ನಾಡ ಧ್ವಜವನ್ನು ಶಾಸಕ ಪ್ರದೀಪ್ ಈಶ್ವರ್ ಹಾಗೂ ಪರಿಷತ್ತಿನ ದ್ವಜವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ನೆರವೇರಿಸಲಿದ್ದಾರೆ ಎಂದರು.
೯-೧೫ ಕ್ಕೆ ನಗರದ ಅಂಬೇಡ್ಕರ್ ಭವನದಿಂದ ಸಮ್ಮೇಳನಾಧ್ಯಕ್ಷ ಗೋಪಾಲ ಗೌಡ ಕಲ್ವ ಮಂಜಲಿ ಅವರನ್ನು ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಕಲಾತಂಡಗಳೊAದಿಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ಕನ್ನಡ ಭವನದ ವರೆಗೆ ಮೆರವಣಿಗೆ ನಡೆಸಲಾಗುವುದು. ಎರಡು ದಿನಗಳ ಕಾರ್ಯಕ್ರಮದದಲ್ಲಿ ಆದಿ ಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ, ಸಚಿವ ಡಾ. ಎಂ.ಸಿ. ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ, ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ, ಶಾಸಕ ಪ್ರದೀಪ್ ಈಶ್ವರ್, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ನಾಡೋಜ ಎಸ್. ಷಡP್ಷÀರಿ, ಸರ್ವಾಧ್ಯಕ್ಷ ಗೋಪಾಲ ಗೌಡ ಕಲ್ವ ಮಂಜಲಿ, ಸಂಸದ ಡಾ. ಕೆ.ಸುಧಾಕರ್ ಭಾಗವಹಿಸಲಿದ್ದಾರೆ ಎಂದರು.