
ಅದ್ಧೂರಿ ಶ್ರೀ ಬೋನೀಳಾ ಲಕ್ಷೀ ವೆಂಕಟರಮಣ ಸ್ವಾಮಿ ಬ್ರಹ ರಥೋತ್ಸವ
ಗಡಿದಿಂ ಲಕ್ಷೀ ವೆಂಕಟರಮಣ ಸ್ವಾಮಿ ಬ್ರಹ್ಮರತೋತ್ಸವ
ಶತಮಾನಗಳಿಂದಲೂ ನಡೆಯುತ್ತಿರುವ ರಥೋತ್ಸವಕ್ಕೆ ಭಕ್ತ ಸಾಗರ
ಬಾಗೇಪಲ್ಲಿ ತಾಲೂಕಿನ ಪುರಾಣ ಪ್ರಸಿದ್ಧ ಗಡಿದಂ ಶ್ರೀ ಲಕ್ಷೀ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿAದ ನಡೆಯಿತು. ಶತಮಾನಗಳಿಂದಲೂ ಇಲ್ಲಿ ರತೋತ್ಸವ ನಡೆಯುತ್ತಿದ್ದು, ರಥೋತ್ಸವ ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ವೈಶಾಖ ಬುದ್ದ ಪೂರ್ಣಿಮೆಯಂದು ಗಡಿದಿಂ ಶ್ರೀ ಲಕ್ಷೀ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯುತ್ತದೆ. ಇಂದು ಬ್ರಹ್ಮ ರಥೋತ್ಸವ ಹಿನ್ನಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿ ಕೊಳ್ಳಲಾಗಿತ್ತು. ಮುಂಜಾನೆಯಿAದ ಬ್ರಹ್ಮರಥೋತ್ಸವದ ನಾನಾ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಪಾಲಿಸಿ, ಪೂಜೆಗಳನ್ನು ನಡೆಸಲಾಯಿತು. ಈ ಬ್ರಹ್ಮರಥೋತ್ಸವಕ್ಕೆ ನೆರೆಯ ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ಹಲವಾರು ಜಿಲ್ಲಾಗಳಿಂದ ಸಾವಿರಾರು ಭಕ್ತರು ಆಗಮಿಸಿ ಕಣ್ತುಂಬಿಕೊAಡರು.
ವಿಶೇಷವಾಗಿ ಅಲಂಕರಿಸಲಾದ ರಥಕ್ಕೆ ಉತ್ಸವಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹಾಗೂ ತಹಶಿಲ್ದಾರ್ ಮನಿಷಾ ಮಹೇಶ್ ಎಸ್. ಪತ್ರಿಯವರು ಪೂಜೆ ಸಲ್ಲಿಸಿ, ನಂತರ ದೇವರ ್ಮರಥ ಎಳೆಯಲಾಯಿತು. ಈ ವೇಳೆ ಭಕ್ತರು ಗೋವಿಂದಾ ಗೋವಿಂದಾ ಎಂಬ ಉದ್ಗೋಷಗಳೊಂದಿಗೆ ರಥವನ್ನು ಎಳೆಯಲಾಯಿತು. ಈ ವೇಳೆ ಭಕ್ತರು ಬಾಳೆ ಹಣ್ಣು ಮತ್ತು ಭವನವನ್ನು ರಥದ ಮೇಲೆ ಎಸೆದು ಭಕ್ತಿ ಮೆರೆದರು.
ಮುಂಜಾನೆಯಿAದಲೇ ಪ್ರಧಾನ ಅರ್ಚಕ ಅಶ್ವತ್ಥಪ್ಪ ಸ್ವಾಮಿ ನೇತೃತ್ವದಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜನೆ ಮಾಡಲಾಗಿತ್ತು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ನಿಂದ ಅನ್ನದಾನ ಏರ್ಪಡಿಸಲಾಗಿತ್ತು. ಲಕ್ಷೀ ಸ್ಟುಡಿಯೋ ಹಾಗೂ ಸತ್ಯ ಸಾಯಿ ಸಂಸ್ಥೆಯಿAದ ಭಕ್ತಾದಿಗಳಿಂದ ಮಜ್ಜಿಗೆ ಪಾನಕ ಕೋಸುಂಬರಿ ಏರ್ಪಡಿಸಲಾಗಿತ್ತು.
ಹಿಂದೆ ಭಾರೀ ದನಗಳ ಜಾತ್ರೆ ಇಲ್ಲಿ ನಡೆಯುತ್ತಿತ್ತು. ರಾಜ್ಯ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಂದಲೂ ಇಲ್ಲಿಗೆ ಎತ್ತುಗಳನ್ನು ಮಾರಾಟ ಮಾಡಲು ಮತ್ತು ಖರೀದಿ ಮಾಡಲು ವ್ಯಾಪಾರಿಗಳು, ರೈತರು ಬರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದೇಶೀ ತಳಿಯ ರಾಸುಗಳ ಸಂಖ್ಯೆ ಕ್ಷೀಣಿಸಿದ ಪರಿಣಾಮ ದನಗಳ ಜಾತ್ರೆ ಈಗ ಇತಿಹಾಸದ ಪುಟ ಸೇರಿದೆ. ಕೇವಲ ರತೋತ್ಸವಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಆರಕ್ಷಕ ನಿರೀಕ್ಷಕ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.