ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಆಪರೇಷನ್ ಕಮಲವೆಂಬ ಗುಮ್ಮದ ಹಿಂದಿನ ಅಸಲಿಯತ್ತು ಡಿಕೆಶಿ v/s ಸಿದ್ದರಾಮಯ್ಯ ನಡುವಿನ ಸಿಎಂ ಪಟ್ಟದ ಸಂಘರ್ಷ!

1 min read

ಆಪರೇಷನ್ ಕಮಲದ ಪ್ರಯತ್ನಗಳು ನಿಜವಾಗಿಯೂ ನಡೆಯುತ್ತಿವೆಯೇ, ಅಥವಾ ಕಾಂಗ್ರೆಸ್‌ ಶಾಸಕರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಾಡುತ್ತಿರುವ ಈ ಆರೋಪ ಸತ್ಯಕ್ಕೆ ದೂರವಾದುದೇ?, ಆಪರೇಷನ್ ಕಮಲ ಆಗುತ್ತಿದೆ ಎಂದು ಹೇಳಿದರೆ, ಸಿಗುವ ಲಾಭಗಳೇನು? ಡಿಕೆಶಿ ಹಾಗೂ ಡಿಕೆಶಿ ಆಪ್ತ ಬಳಗದವರೇ ಯಾಕೆ ಈ ಆರೋಪಗಳನ್ನು ಮಾಡುತ್ತಿದ್ದಾರೆ ಈ ಎಲ್ಲಾ ಕುತೂಹಲದ ಅಂಶಗಳು ತೆರೆದುಕೊಳ್ಳೋದಂತೂ ನಿಜ…

 ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸುದ್ದಿ ಕೇಂದ್ರಕ್ಕೆ ಬಂದಿದೆ. ಅದರಲ್ಲೂ ಕಾಂಗ್ರೆಸ್ ಶಾಸಕ ಗಣಿಗ ರವಿ ಮಾಡಿರುವ ಗಂಭೀರ ಆರೋಪ. 50 ಮಂದಿ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡಿರುವ ವ್ಯಕ್ತಿಯೊಬ್ಬರು ನನಗೂ ಆಪರೇಷನ್ ಆಫರ್ ನೀಡಿದ್ದಾರೆ ಎಂಬ ಬಾಂಬ್ ಸಿಡಿಸಿದ್ದರು.

ಸಮ್ಮಿಶ್ರ ಸರ್ಕಾರ ಪತನದ ಕೆಲವು ರುವಾರಿಗಳೇ ಈ ಆಪರೇಷನ್‌ನಲ್ಲಿ ಇದ್ದಾರೆ ಎಂದೂ ಉಲ್ಲೇಖಿಸಿದ್ದರು. ಈ ಮೂಲಕ ರಾಜ್ಯದಲ್ಲಿ ಸರ್ಕಾರ ಪತನದ ಗಂಭೀರ ಪ್ರಯತ್ನಗಳು ನಡೆಯುತ್ತಿವೆ ಎಂದೂ ಹೇಳಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಶಾಸಕ ಗಣಿಗ ರವಿ ಈ ಆರೋಪದ ಬೆನ್ನಲ್ಲೇ ಆಪರೇಷನ್ ಕಮಲದ ಅಸಲಿಯತ್ತಿನ ಬಗ್ಗೆ ಬೇರೆ ಬೇರೆ ಆಯಾಮದಲ್ಲೂ ಚರ್ಚೆಗಳು ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿದೆ.

ಹೌದು, ಆಪರೇಷನ್‌ ಸದ್ದು ಇದೇ ಮೊದಲಲ್ಲ, ಕೆಲ ದಿನಗಳ ಹಿಂದೆ ಡಿಕೆ ಶಿವಕುಮಾರ್ ಕೂಡಾ ಪರೋಕ್ಷವಾಗಿ ಇಂತಹದ್ದೇ ಆರೋಪ ಮಾಡಿದ್ದರು. ಸರ್ಕಾರ ಪತನಗೊಳಿಸಲು ಬಿಜೆಪಿ ಕಸರತ್ತು ನಡೆಸುತ್ತಿದೆ ಎಂದು ಆರೋಪಿಸಿದ್ದರು. ಯಾರನ್ನೆಲ್ಲಾ ಸಂಪರ್ಕ ಮಾಡಿದ್ದಾರೆ ಎಂಬುವುದು ನನಗೆ ಅರಿವಿದೆ ಎಂದೂ ಹೇಳಿಕೊಂಡಿದ್ದರು. ಇದೀಗ ಅವರ ಆಪ್ತ ಬಳಗದ ಶಾಸಕರಿಂದಲೂ ಇದೇ ಆರೋಪ ಕೇಳಿಬಂದಿದೆ. ಆದರೆ ಅದರ ಜೊತೆಗೆ ಈ ಆಪರೇಷನ್‌ ಅಸಲಿಯತ್ತಿನ ಬಗ್ಗೆಯೂ ಅನುಮಾನಗಳು ಶುರುವಾಗಿದೆ. ಕಾರಣ, ಆಪರೇಷನ್ ಕಮಲ ನಡೆಯುತ್ತಿದೆ, 50 ಕ್ಕೂ ಅಧಿಕ ಶಾಸಕರ ಸಂಪರ್ಕ ಮಾಡಲಾಗಿದೆ ಎಂದು ಆರೋಪ ಮಾಡುತ್ತಿರುವ ಡಿಕೆಶಿ ಆಪ್ತರು ಇದೇ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆಯೂ ಮಾತನಾಡುತ್ತಿರುವುದು ಈ ಅನುಮಾನಕ್ಕೆ ಪುಷ್ಠಿಕೊಟ್ಟಿದೆ.

About The Author

Leave a Reply

Your email address will not be published. Required fields are marked *