ಧಾರವಾಡದಲ್ಲಿ ವಿದ್ಯುತ್ ಅಭಾವದಿಂದಾಗಿ ಆಯಿಲ್ ಎಂಜಿನ್ ಪಂಪ್‌ಸೆಟ್‌ಗೆ ಡಿಮ್ಯಾಂಡ್ !
1 min read
1 year ago
ಹುಬ್ಬಳ್ಳಿಯಲ್ಲಿ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಹೊಲಗಳಲ್ಲಿ ಅದಾಗಲೇ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಪಂಪ್ ಸೆಟ್ ಗಳಿಂದ ನೀರು ಸರಬರಾಜು ಮಾಡಲು ಅವರು ಮುಂದಾಗಿದ್ದಾರೆ. ಆದರೆ, ಅದಕ್ಕೂ ತೊಂದರೆ ಎದುರಾಗಿದೆ. ವಿದ್ಯುತ್ ಇಲಾಖೆಯಿಂದ ದಿನಕ್ಕೆ ಮೂರು ಫೇಸ್ ವಿದ್ಯುತ್ ಕೇವಲ ಐದು ಗಂಟೆ ಮಾತ್ರ ಸಿಗುತ್ತಿದೆ. ಇದರಿಂದ ಬೆಳೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ನೀರುಣಿಸಲು ಆಗುವುದಿಲ್ಲವಾದ್ದರಿಂದ, ತೈಲಾಧಾರಿತ ಪಂಪ್ ಸೆಟ್ ಗಳ ಮೊರೆ ಹೋಗುತ್ತಿದ್ದಾರೆ ರೈತರು.
ಉತ್ತರ ಕರ್ನಾಟಕದಲ್ಲಿ ಹಿಂಗಾರು ಮಳೆ ಹಾಗೂ ವಿದ್ಯುತ್ ಏಕ ಕಾಲಕ್ಕೆ ಕೈ ಕೊಟ್ಟಿದ್ದರಿಂದ ರೈತರು ಬೆಳೆ ಉಳಿಸಿಕೊಳ್ಳಲು ಕೆರೆ, ತಗ್ಗು, ಹಳ್ಳಗಳಲ್ಲಿನ ನೀರಿಗೆ ಮೊರೆ ಹೋಗಿದ್ದು, ಆ ನೀರು ಎತ್ತಲು ಬೇಕಾದ ಆಯಿಲ್ ಎಂಜಿನ್ ಪಂಪ್‌ಸೆಟ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಕಳೆದ ತಿಂಗಳಿನಿಂದ ಮಳೆ ಬಾರದೇ ಕಂಗಾಲಾಗಿರುವ ರೈತರಿಗೆ ವಿದ್ಯುತ್ ನಿಗಮ ಕೇವಲ ಐದು ತಾಸು ಮಾತ್ರ ತ್ರಿಪೇಸ್ ವಿದ್ಯುತ್ ನೀಡಲಿದೆ. ಹಿಂಗಾರು ಬಿತ್ತನೆ ಮಾಡಿ ಮೋಡದತ್ತ ಮುಖ ಮಾಡಿರುವ ರೈತರಿನಿಗೆ ಇತ್ತ ಮಳೆಯೂ ಇಲ್ಲ, ಬೋರವೆಲ್‌ಗಳ ಮೂಲಕ ನೀರು ತೆಗೆದುಕೊಳ್ಳಲು ಸಮರ್ಪಕ ವಿದ್ಯುತ್ ಸಹ ಇಲ್ಲದಾಗಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಮಳೆ ಚನ್ನಾಗಿ ಆಗಿದ್ದರಿಂದ ಹೆಚ್ಚುವರಿ ನೀರಿನ ಅಗತ್ಯ ಇರಲಿಲ್ಲ. ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಾನಸೂನ್ ಕೈಕೊಟ್ಟಿದ್ದರಿಂದ ಮುಂಗಾರು ಹಂಗಾಮಿನ ಬೆಳೆ ಕೈಗೆ ಬರಲಿಲ್ಲ. ಹಿಂಗಾರು ಬೆಳೆಯಾದರೂ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಅದು ಕೂಡಾ ನಿರಾಸೆಯನ್ನುಂಟು ಮಾಡಿದೆ.