ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಜನ ಜಾತ್ರೆ, ಮುಂಜಾನೆ ವೇಳೆಯೂ ಉದ್ದುದ್ದ ಸರದಿ ಸಾಲು
1 min readನಮ್ಮ ಮೆಟ್ರೋ ನೇರಳೆ ಮಾರ್ಗ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರ ಇದೀಗ ಇಂಟರ್ ಚೇಂಜ್ ವ್ಯವಸ್ಥೆ ಇರುವ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ನಿಲ್ದಾಣದ ಮೂಲಕ ಪ್ರತಿದಿನ ಸುಮಾರು 42 ಸಾವಿರಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದು, ಸಾವಿರಾರು ಜನರು ಮೆಟ್ರೋ ಬದಲಿಸುತ್ತಾರೆ. ಈ ಕಾರಣದಿಂದ ಜನನಿಬಿಡ ನಿಲ್ದಾಣಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಮುಂಜಾನೆ ವೇಳೆಯೂ ನಿಲ್ದಾಣದಲ್ಲಿ ಸರದಿ ಸಾಲು ಕಂಡುಬರುತ್ತಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗ ಪೂರ್ಣ ಪ್ರಮಾಣದಲ್ಲಿ ಆರಂಭವಾದ ನಂತರ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಸದ್ಯ ಮೆಜೆಸ್ಟಿಕ್ ನಿಲ್ದಾಣದಲ್ಲಿ ಮಾತ್ರ ಇಂಟರ್ ಚೇಂಜ್ ವ್ಯವಸ್ಥೆ (ನೇರಳೆ ಮತ್ತು ಹಸಿರು ಮಾರ್ಗದ ಬದಲಾವಣೆ) ಇದೆ. ಈ ನಿಲ್ದಾಣದ ಮೂಲಕ ಪ್ರತಿದಿನ ಸುಮಾರು 42 ಸಾವಿರಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದು, ಜನನಿಬಿಡ ನಿಲ್ದಾಣಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಆ ನಂತರ ಇಂದಿರಾನಗರ (29 ಸಾವಿರ) ಹಾಗೂ ಬೈಯಪ್ಪನಹಳ್ಳಿ (23 ಸಾವಿರ) ನಿಲ್ದಾಣಗಳಿವೆ.
ಹಬ್ಬದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಅಧಿಕವಾಗಿದೆ. ಹೊರ ಊರುಗಳಿಂದ ಬಂದ ಪ್ರಯಾಣಿಕರು ನಗರದ ಬೇರೆ ಬೇರೆ ಪ್ರದೇಶಕ್ಕೆ ತೆರಳಲು ಬೆಳಗ್ಗೆ 5.30 ರಿಂದಲೇ ಟಿಕೆಟ್ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕೆಲವು ಬಾರಿ ಸರತಿ ಸಾಲುಗಳು ಕೆಎಸ್‌ಆರ್‌ಸಿಟಿಸಿ ಡಿಪೋವರೆಗೆ ವಿಸ್ತರಿಸಿರುತ್ತದೆ.