
ವಿಜಯಪುರದಲ್ಲಿ ಮಡಿವಾಳ ಮಾಚಿದೇವರ ಜಯಂತಿ
ಮಡಿವಾಳ ಮಾಚಿದೇವರ ಲಾಂಡ್ರಿ ಸಂಘದಿAದ ಆಯೋಜನೆ
ವಿಜಯಪುರದ ೮ನೇ ವಾರ್ಡಿನಲ್ಲಿ ಇಲ್ಲಿನ ಮಡಿವಾಳ ಮಾಚೀದೇವರ ಲಾಂಡ್ರಿ ಮಾಲೀಕರ ಸಂಘದಿAದ ಮಡಿವಾಳ ಮಾಚೀದೇವರ ಜಯಂತಿ ಆಯೋಜಿಸಲಾಗಿತ್ತು.
ಮಡಿವಾಳ ಮಾಚಿದೇವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ, ನಂತರ ನೆರದಿದ್ದವರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ವಿಜಯಪುರ ಪುರಸಭೆ ಸದಸ್ಯ ಸಿ.ಎಂ. ರಾಮು ಮಾತನಾಡಿ, ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ. ಮಡಿವಾಳ ಮಾಚೀದೇವರು ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ ಎಂದು ಇತಿಹಾಸವನ್ನು ಹೇಳಿದರು.
ಅಲ್ಲದೆ ಅದನ್ನು ಲೆಕ್ಕಿಸದೆ ಮಾಸಿದ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ. ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ಕಂಡ ಮಡಿವಾಳ ಮಾಚೀದೇವರು ಕೋಪಗೊಂಡು ಸಿಟ್ಟಿನಿಂದ ನೋಡಲು ಆ ಕ್ಷಣದಲ್ಲಿ ಗಂಟು ಉರಿದು ಹೋಯ್ತು. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ , ಮಡಿ ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು ಎಂದರು.
ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲ ಎಂಬುದು ಮಾಚಯ್ಯನ ಮಹಾ ಘನತೆಗೆ ಸಾಕ್ಷಿಯಾಗಿದೆ. ಈ ಸಮಯದಾಯಕ್ಕೆ ಸಿಗಬೇಕಾಗಿರುವ ಎ¯್ಲÁ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗಿದೆ ಎಂದರು. ಸಂಘದ ಅಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ಎನ್. ಶ್ರೀನಿವಾಸ್, ಮಂಜುನಾಥ್, ಪ್ರಭಾನ ಕಾರ್ಯದರ್ಶಿ ಮಧು, ಖಜಾಂಚಿ ಮಂಜುನಾಥ್ ಇದ್ದರು.