40 ವರ್ಷಗಳ ದಕ್ಷ, ಪ್ರಾಮಾಣಿಕ ಸೇವೆ ಸಲ್ಲಿಸಿದ ನಂಜು0ಡಯ್ಯ
1 min readಪ್ರಾಮಾಣಿಕ ಪೊಲೀಸ್ ಅಧಿಕಾರಿ ನಂಜು0ಡಯ್ಯ ನಿವೃತ್ತಿ
ಚಿಕ್ಕಬಳ್ಳಾಪುರ ನಗರ ಠಾಣೆ ಪಿಎಸ್‌ಐ ಆಗಿದ್ದ ನಂಜು0ಡಯ್ಯ
40 ವರ್ಷಗಳ ದಕ್ಷ, ಪ್ರಾಮಾಣಿಕ ಸೇವೆ ಸಲ್ಲಿಸಿದ ನಂಜು0ಡಯ್ಯ
೪೦ ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿ, ಪೊಲೀಸ್ ಇಲಾಖೆಯಲ್ಲಿಯೂ ಪ್ರಾಮಾಣಿಕತೆ ಉಳಿಸಿಕೊಂಡು, ರೌಡಿಗಳ, ಕಳ್ಳರ ಹೆಡೆಮುರಿ ಕಟ್ಟಿದ, ರಾಷ್ಟçಪತಿ ಪದಕ, ಮುಖ್ಯಮಂತ್ರಿ ಪದಕ ಪಡೆದ ದಕ್ಷ ಪೊಲೀಸ್ ಅಧಿಕಾರಿ, ಚಿಕ್ಕಬಳ್ಳಾಪುರ ನಗರ ಪೋಲಿಸ್ ಠಾಣೆ ಪಿಎಸ್‌ಐ ಹೆಚ್. ನಂಜುAಡಯ್ಯ ವಯೋ ನಿವೃತ್ತಿ ಹೊಂದಿದ್ದಾರೆ.
ಪೊಲೀಸ್ ಇಲಾಖೆಗೆ ಭೂಷಣ ಪ್ರಾಯ ರೀತಿಯಲ್ಲಿದ್ದ ದಕ್ಷ, ಪ್ರಮಾಣಿಕ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ಜನ ಮನ್ನಣೆಗೆ ಪಾತ್ರರಾಗಿದ್ದ ಚಿಕ್ಕಬಳ್ಳಾಪುರ ನಗರಠಾಣೆ ಪಿಎಸ್‌ಐ ಹೆಚ್. ನಂಜು0ಡಯ್ಯ ಇಂದು ಸೇವಾ ನಿವೃತ್ತಿ ಪಡೆದಿದ್ದಾರೆ. ರಾಷ್ಟçಪತಿ ಪದಕ, ಮುಖ್ಯಮಂತ್ರಿ ಪದಕ ಪಡೆದು ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ್ದ ನಂಜು0ಡಯ್ಯ ಅವರನ್ನು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭÀದಲ್ಲಿ ಸಹೋದ್ಯೋಗಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಬಿಳ್ಕೊಟ್ಟಿದ್ದಾರೆ.
ಈ ವೇಳೆ ಮಾತನಾಡಿದ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ. ನಂಜು0ಡಯ್ಯ ಅವರ ಕಾರ್ಯ ಇತರರು ಮಾಡಲು ಅಸಾಧ್ಯ. ಚಿಕ್ಕಬಳ್ಳಾಪುರ ನಗರ ಸುಭದ್ರವಾಗಿ ಇರಲು ಅವರೇ ಕಾರಣ. ೪೦ ವರ್ಷಗಳ ಇವರ ಸೇವೆಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇಂತಹವರು ಸಿಗುವುದು ಕಷ್ಟ.. ಪ್ರಾಮಾಣಿಕ, ದಕ್ಷ, ಸರಳ, ಸಜ್ಜನಿಕೆಯ ವ್ಯಕ್ತಿ. ಚಿಕ್ಕಬಳ್ಳಾಪುರ ನಗರದಲ್ಲಿ ಎ¯್ಲÁ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸುವಲ್ಲಿ ಇವರ ಕಾರ್ಯ ಬಹುಮುಖ್ಯ, ಈಗ ವಯೋ ನಿವೃತ್ತಿ ಆಗುತ್ತಿರುವುದು ನಮಗೂ ಬೇಸರ ತಂದಿದೆ. ಅದರೆ ಅವರಿಗೆ ಕೆಲಸ ಮಾಡಲು ಇನ್ನೂ ಹುಮ್ಮಸ್ಸು ಇದೆ. ೬೦ ರಲ್ಲೂ ೨೦ ರಂತೆ ಕೆಲಸ ಮಾಡಿ ಪೊಲೀಸ್ ಇಲಾಖೆಯೆ ಇವರ ಕೆಲಸವನ್ನು ಮೆಚ್ಚಿದೆ ಎಂದರು.
ಗೌರಿಬಿದನೂರು ತಾಲೂಕಿನ ದ್ವಾರಗಾನಹಳ್ಳಿಯ ಹನುಮಂತಪ್ಪ ಮತ್ತು ಈರಮ್ಮ ದಂಪತಿಗಳ ಮಗ ನಂಜು0ಡಯ್ಯ 10ನೇ ತರಗತಿ ವ್ಯಾಸಂಗ ಮಾಡಿ ಪೊಲೀಸ್ ಇಲಾಖೆಗೆ 1985ರಲ್ಲಿ ಸೇರಿದವರು. ಕೋಲಾರದ ಕೆಜಿಎಫ್ ಠಾಣೆಯಲ್ಲಿ ಪೇದೆಯಾಗಿ ವೃತ್ತಿ ಆರಂಭಿಸಿದ್ದು, ಈವರೆಗೂ ೪೦ ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಪೊಲೀಸ್ ಇಲಾಖೆಯಲ್ಲಿಯೂ ಪ್ರಾಮಾಣಿಕವಾಗಿ ಇರಬಹುದು ಎಂಬುದನ್ನು ತೋರಿಸಿಕೊಟ್ಟವರು ನಂಜು0ಡಯ್ಯ ಅವರು.
ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆಯಲ್ಲೆ ನೋ ಕಮಿಟ್ಮೆಂಟ್ ಓನ್ಲಿ ಆಕ್ಷನ್ ಎನ್ನುತ್ತಿದ್ದ ಪ್ರಾಮಾಣಿಕ, ದಕ್ಷ, ಸರಳ, ಸಜ್ಜನಿಕೆಯ ಅಧಿಕಾರಿ ಪಿಎಸ್‌ಐ ನಂಜುAಡಯ್ಯ ಅವರಿಗೆ ಚಿಕ್ಕಬಳ್ಳಾಪುರ ಜನತೆಯ ಪರವಾಗಿ ಸಿಟಿವಿ ನ್ಯೂಸ್ ಕೂಡಾ ಅಭಿನಂದನೆ ಸಲ್ಲಿಸುತ್ತಿದೆ. ಅಲ್ಲದೆ ಅವರ ನಿವೃತ್ತಿ ಜೀವನ ಸುಖ ಮತ್ತು ನೆಮ್ಮದಿಯಿಂದ ಇರಲಿ ಎಂದು ಹಾರೈಸುತ್ತದೆ.