ಗೃಹಲಕ್ಷ್ಮೀ ಯೋಜನೆ ಅಡಿ 2 ಅಲ್ಲ, 4 ಸಾವಿರ ಕೊಡಬಹುದು, ಆದರೆ ; ಸಂಸದ ಡಿಕೆ ಸುರೇಶ್ ಹಿಂಗ್ಯಾಕೆ ಅಂದ್ರು?
1 min readಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ಹಣ ನೀಡ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಂಸದ ಡಿ.ಕೆ ಸುರೇಶ್, 4 ಸಾವಿರ ಹಣ ಕೊಡಬಹುದು ಎಂದು ಹೇಳಿದ್ದಾರೆ. ಇದೇ ವೇಳೆ ಕೇಂದ್ರಕ್ಕೆ ಸವಾಲು ಹಾಕಿರುವ ಡಿ.ಕೆ.ಸುರೇಶ್, ಕೇಂದ್ರ ಸರ್ಕಾರದಿಂದ ನಮ್ಮ ಪಾಲಿಗೆ ಬರಬೇಕಿರುವ ತೆರಿಗೆ ಹಣ ನ್ಯಾಯಯುತವಾಗಿ ಬಂದರೇ ಗೃಹಲಕ್ಷ್ಮೀ ಯೋಜನೆ ಅಡಿ ಕೇವಲ 2 ಸಾವಿರ ರೂಪಾಯಿ ಏಕೆ, 4 ಸಾವಿರ ರೂಪಾಯಿಗಳನ್ನು ಕೊಡಬಹುದು ಎಂದಿದ್ದಾರೆ.
ಮಾಗಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಸುರೇಶ್, ರಾಜ್ಯದಿಂದ 4.30 ಲಕ್ಷ ಕೋಟಿ ರೂಪಾಯಿ ಹಣ ತೆರಿಗೆ ಹೋಗ್ತಿದೆ, ಅದರಲ್ಲಿ ನಮಗೆ ಅರ್ಧ ಕೊಟ್ಟರೆ ನಾವು 2 ಸಾವಿರದ ಜೊತೆಗೆ ಇನ್ನು 2 ಸಾವಿರ ಕೊಡ್ತೇವೆ. ನಮ್ಮ ತೆರಿಗೆ ಹಣ ನೀಡಲಿ, ನಾವು ಅಭಿವೃದ್ಧಿ ಮಾಡಿ ತೋರಿಸುತ್ತೇವೆ. ರಾಜ್ಯದ ಅಭಿವೃದ್ಧಿ ಯೋಜನೆಗಳು, ನೀರಾವರಿ ಯೋಜನೆಗಳು, ಮೂಲಭೂತ ಸೌಲಭ್ಯಗಳನ್ನು ಮಾಡಿ ತೋರಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ ಜಾತಿ ಗಣತಿ ವರದಿ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದಷ್ಟೇ ಸುರೇಶ್ ಹೇಳಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಮೊದಲು ಜಾತಿಗಣತಿ ವರದಿ ಹೊರಬರಲಿ. ನಂತರ ಅದರ ಬಗ್ಗೆ ಚರ್ಚೆ ಮಾಡೋದು ಸೂಕ್ತ, ಈಗಲೇ ಅದರ ಬಗ್ಗೆ ಮಾತನಾಡೋದು ಹೇಗೆ ಅಂತ ಪ್ರಶ್ನಿಸಿದ್ದಾರೆ.
ಜಾತಿಗಣತಿ ವರದಿಗೆ ಬಿಜೆಪಿಯವರು ವಿರೋಧ ಮಾಡ್ತಿರುವ ವಿಚಾರವಾಗಿ ತಿರುಗೇಟು ನೀಡಿದ ಮಾಗಡಿ ಶಾಸಕ, ಅವರು ರಾಜಕೀಯಕ್ಕಾಗಿ ವಿರೋಧ ಮಾಡ್ತಾರೆ. ನಾವು ರಾಜಕಾರಣಿಗಳು ಏನೇ ಮಾಡಿದರೂ ಸಹ ರಾಜಕೀಯಕ್ಕಾಗಿ ಅಷ್ಟೇ ಎಂದರು.
ಕುಮಾರಸ್ವಾಮಿಯಿಂದ ಬಿಜೆಪಿಗೆ ನಷ್ಟ
ಇದೇ ವೇಳೆ ಡಾ ಮಂಜುನಾಥ್ ಅವರನ್ನು ಚುನಾವಣೆ ಕರೆತರುತ್ತಿರುವ ಬಗ್ಗೆ ಮಾತನಾಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದೇವೇಗೌಡರು, ಕುಮಾರಸ್ವಾಮಿ ಗೆದ್ದಿದ್ದಾರೆ. ಆದರೆ ಈಗ ಬಿಜೆಪಿ ಚಿಹ್ನೆಯಲ್ಲಿ ಕಣಕ್ಕಿಳಿಸುತ್ತಿದ್ದಾರೆ. ಅಂದ್ರೆ ಅವರ ಪಕ್ಷದಿಂದ ನಿಲ್ಲಿಸಲು ಧೈರ್ಯ ಇಲ್ವ? ನಮಗೆ ಸೂಕ್ತ ಅಭ್ಯರ್ಥಿ ಇದ್ದಾರೆ, ಅವರಿಗೆ ಇದ್ದಾರ ಕೇಳಿ. ಬಿಜೆಪಿ – ಜೆಡಿಎಸ್ ಮೈತ್ರಿ ಬಳಿಕ ಬಿಜೆಪಿಯನ್ನ ಈಗಾಗಲೇ ಕುಮಾರಸ್ವಾಮಿ ಬೀದಿಗೆ ನಿಲ್ಲಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇತ್ತ ಇವರಿಗೆ, ಇವರಿಂದ ಬಿಜೆಪಿ ಗೆ ನಷ್ಟವಾಗಿದೆ. ಕುಮಾರಸ್ವಾಮಿಯಿಂದ ಬಿಜೆಪಿಗೆ ಮುಖಭಂಗವಾಯ್ತು, ಬಿಜೆಪಿಯವರಿಗೆ ಇನ್ನು ಏನೇನು ಕಾದಿದೆಯೋ? ಅವರು ಒಂದು ಕಡೆ ಇರಲ್ಲ, ನಾವು ಅವರ ಗರಡಿಯಲ್ಲಿ ಬೆಳೆದಿರುವವರು ಎಂದು ಎಚ್ಡಿಕೆಗೆ ಟಾಂಗ್ ಕೊಟ್ಟಿದ್ದಾರೆ.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura