ಮಕ್ಕಳ ಜನ್ಮದಿನಕ್ಕೆ ಹೊಂದುವ ನಂಬರ್ ಲಾಟರಿ ಟಿಕೆಟ್ ಖರೀದಿಸಿ 33 ಕೋಟಿ ರೂ. ಗೆದ್ದ ಭಾರತೀಯ
1 min readಲಾಟರಿ ಡ್ರಾನಲ್ಲಿ ಭಾರತೀಯ ವ್ಯಕ್ತಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಜಾಕ್‌ಪಾಟ್ ಹೊಡೆದಿದ್ದು, ಕೋಟಿ ಕೋಟಿ ಹಣವನ್ನು ಸಂಪಾದಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಕೇರಳ ಮೂಲದ ರಾಜೀವ್ ಅರಿಕಾಟ್‌ಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಜಾಕ್‌ಪಾಟ್ ಹೊಡೆದಿದ್ದು, ಬಿಗ್ ಟಿಕೆಟ್ ನಡೆಸುವ ವಾರದ ಲಾಟರಿ ಡ್ರಾನಲ್ಲಿ ಮೊದಲ ಬಹುಮಾನ ಗೆಲ್ಲುವ ಮೂಲಕ 33 ಕೋಟಿ ರು.
ತಮ್ಮದಾಗಿಸಿಕೊಂಡಿದ್ದಾರೆ.
ವರದಿಯ ಪ್ರಕಾರ , ಶ್ರೀ ಅರಿಕ್ಕಾಟ್ ಅವರು ಈ ಬಾರಿ ಗೆಲ್ಲುವ ಭರವಸೆಯನ್ನು ಹೊಂದಿದ್ದರು, ಅವರು ಡ್ರಾಗಾಗಿ ಒಟ್ಟು ಆರು ಟಿಕೆಟ್‌ಗಳನ್ನು ಖರೀದಿಸಿದ್ದಾರೆ.ಆಲ್‌ಐನ್ ನಗರದಲ್ಲಿ ಕಟ್ಟಡ ವಿನ್ಯಾಸ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಜೀವ್ ಈ ಹಣವನ್ನು 19 ಜನರೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ ರಾಜೀವ್‌ಗೆ ಅದೃಷ್ಟ ಖುಲಾಯಿಸಿದ ಟಿಕೆಟ್ ಅವರಿಗೆ ಬಿಗ್ ಟಿಕೆಟ್ ವತಿಯಿಂದ ಆಫರ್ ಲೆಕ್ಕದಲ್ಲಿ ಬಂದಿದ್ದು ತಮ್ಮ ಇಬ್ಬರು ಮಕ್ಕಳ ಹುಟ್ಟುಹಬ್ಬದ ದಿನಾಂಕ ಆಧರಿಸಿ ರಾಜೀವ್ 2 ಟಿಕೆಟ್ ಖರೀದಿಸಿದ್ದರು. ಇದಕ್ಕೆ ಪ್ರತಿಯಾಗಿ 4 ಟಿಕೆಟ್ ಉಚಿತವಾಗಿ ನೀಡಲಾಗಿತ್ತು. ಹೀಗೆ ಉಚಿತವಾಗಿ ನೀಡಿದ ಟಿಕೆಟ್‌ಗೆ ಇದೀಗ ಬಹುಮಾನ ಬಂದಿದೆ.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura