ಚಿಕ್ಕಬಳ್ಳಾಪುರ ನಗರದ 12ನೇ ವಾರ್ಡ್ಗೆ ೩.೫ ಕೋಟಿ ಅನುದಾನ
1 min readಚಿಕ್ಕಬಳ್ಳಾಪುರ ನಗರದ 12ನೇ ವಾರ್ಡ್ಗೆ ೩.೫ ಕೋಟಿ ಅನುದಾನ
ಚಿಕ್ಕಬಳ್ಳಾಪುರಕ್ಕೆ 2 ಸಾವಿರ ಮನೆ ಮಂಜೂರು ಮಾಡಿಸುವ ಭರವಸೆ
ಹೋಗಲು ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ರಸ್ತೆ ಕಾಮಗಾರಿಗೆ ಮೂರುವರೆ ಕೋಟಿಯನ್ನು ಶಾಸಕ ಪ್ರದೀಪ್ ಈಶ್ವರ್ ಮಂಜೂರು ಮಾಡಿಸಿದ್ದಾರೆ. 12ನೇ ವಾರ್ಡಿಗೆ ಮಂಜೂರಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ಶಾಸಕ ಪ್ರದೀಪ್ ಈಶ್ವರ್ ನೆರವೇರಿಸಿದರು.
ಚಿಕ್ಕಬಳ್ಳಾಪುರ ನಗರದ 30ನೇ ವಾರ್ಡಿಗೆ ಮನೆಗಳ ಮಂಜೂರಾತಿ ಬಗ್ಗೆ ಶಾಸಕರು ಸ್ಪಂದಿಸಿದ್ದಾರೆ. ವಸತಿ ಸಚಿವ ಜಮೀರ್ ಅಹ್ಮದ್ ಅವರಿಂದ ಕ್ಷೇತ್ರಕ್ಕೆ 2 ಸಾವಿರ ಮನೆಗಳನ್ನು ಕೇಳಿದ್ದು, 2025ನೇ ಸಾಲಿನಲ್ಲಿ ಮನೆಗಳು ಹಂಚಿಕೆಯಾಗಲಿವೆ ಎಂದು ಈ ಸಂದರ್ಭದಲ್ಲಿ ಶಾಸಕರು ಹೇಳಿದರು.
ನಗರದಲ್ಲಿ ಈಗಾಗಲೇ ಸಂಸದರು ನೀಡಿರುವ ನಿವೇಶನ ಹಕ್ಕು ಪತ್ರ ನಕಲಿ ಎಂದು ಹೇಳಿದ ಶಾಸಕ ಪ್ರದೀಪ್ ಈಶ್ವರ್, ಸರ್ಕಾರದ ನಿಯಮಗಳನ್ನು ಬದಿಗೊತ್ತಿ ತರಾತುರಿಯಲ್ಲಿ ಮಾಡಿರುವುದು ಸರಿ ಇಲ್ಲ ಎಂದು ಹೇಳಿದರು. ನಗರಕ್ಕೆ ಸಂಪರ್ಕ ಕೊಂಡಿಯ0ತೆ ಇರುವ ರಸ್ತೆಗಳಿಗೆ ಹೆಚ್ಚಿನ ಅನುದಾನವನ್ನ ವಿಶೇಷವಾಗಿ ತರುವುದಾಗಿ ಶಾಸಕರು ಭರವಸೆ ನೀಡಿದರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ವಿನಂತಿ ಮಾಡಿ ಎಲ್ಲಾ ವಾರ್ಡುಗಳ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸುವಂತೆ ಶಾಸಕರು ಕೋರಿದರು.