ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

Month: February 2024

1 min read

ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೋಮವಾರ ಬೆಳಗ್ಗೆ ನಂಜನಗೂಡು ವ್ಯಾಪ್ತಿಯ ಚಿಕ್ಕಯ್ಯನಛತ್ರ ಹೋಬಳಿಯ ಹತ್ಯಾಳು ಗ್ರಾಮದಲ್ಲಿ ಇಡಲಾಗಿದ್ದ ಬೋನಿಗೆ ಬಿದ್ದಿದೆ. ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಚಿರತೆಗಳ...

1 min read

ಬೆಂಗಳೂರು ನಗರ ಮತ್ತು ಕೋಲಾರ ಮತ್ತು ಸುತ್ತಮುತ್ತಲಿನ ಪ್ರಯಾಣಿಕರು ವಿದ್ಯುತ್ ಚಾಲಿತ ಮೆಮು ರೈಲು ಸೇವೆಗಾಗಿ ಇನ್ನಷ್ಟು ದಿನ ಕಾಯಬೇಕಿದೆ. ಮೆಮೆ ರೈಲೊಂದು ಅಯೋಧ್ಯೆಗೆ ತೆರಳಿದ್ದು, ಇನ್ನೂ ವಾಪಸ್ ಬಂದಿಲ್ಲ.ಪ್ರತಿನಿತ್ಯ ಸಾವಿರಾರು ಜನರು ಕೋಲಾರ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ನಗರಕ್ಕೆ ಆಗಮಿಸುತ್ತಾರೆ. ಆದರೆ ಡೆಮು ರೈಲಿನಲ್ಲಿ ಸೀಟು ಸಿಗುವುದು ಕಷ್ಟವಾಗಿದೆ. ಈ ಮಾರ್ಗದಲ್ಲಿ ಮೆಮು ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ.ಕರ್ನಾಟಕದ ರೈಲು ಯೋಜನೆಗಳು; ಹೊಸ ಮಾರ್ಗ, ದ್ವಿಪಥ ವಿವರಗಳು ಆರ್‌ಟಿಐ ಮೂಲಕ ಈ ಕುರಿತು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವನ್ನು ಪ್ರಶ್ನೆ ಮಾಡಲಾಗಿತ್ತು. ಆಗ ಬೇಡಿಕೆಯಂತೆ ಮೆಮು ರೈಲನ್ನು ಅಯೋಧ್ಯೆಗೆ ಕಳಿಸಲಾಗಿದೆ. ಅದು ಇನ್ನೂ ವಾಪಸ್ ಬಂದಿಲ್ಲ. ಬಂದ ಬಳಿಕ ಕೋಲಾರ-ಬೆಂಗಳೂರು ಮಾರ್ಗದಲ್ಲಿ ಮೆಮು ರೈಲು ಓಡಿಸುವ ಕುರಿತು ತೀರ್ಮಾನಿಸಲಾಗುತ್ತದೆ ಎಂಬ ಉತ್ತರ ಬಂದಿದೆ.ವೇಗ ಪಡೆದ ಬೈಯಪ್ಪನಹಳ್ಳಿ-ಹೊಸೂರು ದ್ವಿಪಥ ರೈಲ್ವೆ ಕಾಮಗಾರಿವಿದ್ಯುದೀಕರಣ ಪೂರ್ಣ: ಯಲಹಂಕ-ಬಂಗಾರಪೇಟೆ ವಯಾ ಕೋಲಾರ ನಡುವಿನ 149 ಕಿ. ಮೀ. ಉದ್ದದ ಮಾರ್ಗದ ವಿದ್ಯುದೀಕರಣ ಏಳು ತಿಂಗಳ ಹಿಂದೆ ಪೂರ್ಣಗೊಂಡಿದೆ. ಆದ್ದರಿಂದ ಡೆಮು ಬದಲು ಮೆಮು ರೈಲು ಓಡಿಸಿದರೆ ಹೆಚ್ಚಿನ ಜನರು ಸಂಚಾರ ನಡೆಸಲು ಅನುಕೂಲವಾಗುತ್ತದೆ ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು. ಮೈಸೂರು-ಬೆಂಗಳೂರು ಮೆಮು ರೈಲು ಪ್ರಯಾಣಿಕರ ಗಮನಕ್ಕೆ ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಎಲೆಕ್ಟ್ರಿಕ್ ರೈಲುಗಳು ಸಂಚಾರ ನಡೆಸುತ್ತಿವೆ. ಆದರೆ ವಿದ್ಯುದೀಕರಣ ಪೂರ್ಣಗೊಂಡರೂ ಸಹ ಅದಕ್ಕೂ ಮುಂದೆ ರೈಲು ಓಡಿಸುತ್ತಿಲ್ಲ. ಹೊಸ ಮಾರ್ಗದಲ್ಲಿ ಮೆಮು ರೈಲು ಓಡಿಸಲು ರೈಲುಗಳ ಕೊರತೆ ಇದೆ. ಅಯೋಧ್ಯೆಗೆ ಹೋಗಿರುವ ರೈಲು ವಾಪಸ್ ಬಂದ ಬಳಿಕ ದಿನಕ್ಕೆ 2-3 ರೈಲುಗಳನ್ನು ಓಡಿಸಬಹುದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.ಕೇವಲ ರೈಲುಗಳ ಕೊರತೆ ಮಾತ್ರವಲ್ಲ, ಸಿಬ್ಬಂದಿ ಕೊರತೆಯೂ ಇದೆ. ಮೆಮು ರೈಲು ಸಂಚಾರ ಆರಂಭಿಸಿದರೆ ಕೋಲಾರ ನಿಲ್ದಾಣದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಬೇಕಿದೆ. ರೈಲು ನಿರ್ವಹಣೆಗೆ ಹೆಚ್ಚಿನ ತಾಂತ್ರಿಕ ಸಹಾಯವೂ ಬೇಕು. ನೇಮಕಾತಿ ಆಗದ ಕಾರಣ ಸಿಬ್ಬಂದಿಗಳ ಕೊರತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೆಮು ರೈಲಿನ ಕೊರತೆ ಇದೆ. ಕೋಲಾರ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದೆ. ಚಿಕ್ಕಬಳ್ಳಾಪುರ-ಕೋಲಾರ ಮಾರ್ಗ ಏಕಪಥವಾಗಿದೆ. ಚಿಕ್ಕಬಳ್ಳಾಪುರ ತನಕ ಸಾಗುವ ರೈಲನ್ನು ಕೋಲಾರ ತನಕ ವಿಸ್ತರಣೆ ಮಾಡುವುದು ಸದ್ಯಕ್ಕೆ ಕಷ್ಟ ಎಂದು ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ವಿವರಣೆ ನೀಡಿದೆ.ಈ ಮಾರ್ಗದಲ್ಲಿ 4 ಡೆಮು ರೈಲುಗಳು ಸಂಚಾರ ನಡೆಸುತ್ತಿವೆ. ಕೆಲವು ರೈಲುಗಳು ಕೆಎಸ್‌ಆರ್ ಬೆಂಗಳೂರು, ಕೆಲವು ಯಲಹಂಕ ಮತ್ತೆ ಕೆಲವು ಕೋಲಾರದಿಂದ ಹೊರಡುತ್ತವೆ. ಒಂದು ಡೆಮು ರೈಲು ಹಾಸನ ತನಕ ಸಹ ಸಂಚಾರ ನಡೆಸುತ್ತದೆ. ಕೋಲಾರ-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಸುಮಾರು 3 ಗಂಟೆ. ಆದರೆ ಸೀಟು ಸಿಗುವುದಿಲ್ಲ ಎಂಬುದು ಜನರ ಆರೋಪ.ಡೆಮು ರೈಲಿನಲ್ಲಿ 8 ಬೋಗಿಗಳಿದ್ದು, ಗರಿಷ್ಠ 800 ಪ್ರಯಾಣಿಕರು ಸಂಚಾರ ನಡೆಸಬಹುದು. ಅದೇ ಮೆಮೆ ರೈಲು 16 ಬೋಗಿ ಒಳಗೊಂಡಿದ್ದು, 1000 ಜನರು ಪ್ರಯಾಣ ಮಾಡಬಹುದು. ಅಲ್ಲದೇ ಇದು ವೇಗವಾಗಿ ಸಂಚಾರ ನಡೆಸುವುದರಿಂದ ಸಮಯವೂ ಉಳಿತಾಯವಾಗುತ್ತದೆ.

ಬೆಂಗಳೂರು ನಗರ ಮತ್ತು ಕೋಲಾರ ಮತ್ತು ಸುತ್ತಮುತ್ತಲಿನ ಪ್ರಯಾಣಿಕರು ವಿದ್ಯುತ್ ಚಾಲಿತ ಮೆಮು ರೈಲು ಸೇವೆಗಾಗಿ ಇನ್ನಷ್ಟು ದಿನ ಕಾಯಬೇಕಿದೆ. ಮೆಮೆ ರೈಲೊಂದು ಅಯೋಧ್ಯೆಗೆ ತೆರಳಿದ್ದು, ಇನ್ನೂ...

1 min read

ಪೇಟಿಎಂನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್ ಷೇರುಗಳು ಶೇಕಡಾ 9 ರಷ್ಟು ಕುಸಿದ ನಂತರ ದಾಖಲೆಯ ಕನಿಷ್ಠ 342.15 ಕ್ಕೆ ತಲುಪಿದ್ದರಿಂದ ನಷ್ಟದ ಹಾದಿಯನ್ನು ಮುಂದುವರಿಸಿದೆ. ಬೆಳಿಗ್ಗೆ...

1 min read

ಹೆಗಲಿಗೆ ಗೋಣಿ ಚೀಲ ಹಾಕಿ ಕೊಂಡು ನಗರದ ಬೀದಿ ಬೀದಿ ಅಲೆದು, ರಸ್ತೆ, ಮೋರಿಯಿಂದ ಚಿಂದಿ ಆಯ್ದರೆ ಮಾತ್ರ ಕುಟುಂಬದ ಜೀವನ ನಡೆಸುತ್ತಿರುವವರು ಎಷ್ಟೋ ಮಂದಿ ಬೆಂಗಳೂರು,...

1 min read

ಪ್ರಸಕ್ತ ಸಾಲಿನಲ್ಲಿ ವನ್ಯಜೀವಿ-ಮಾನವ ಸಂಘರ್ಷದಿಂದ 55 ಜನ ಸಾವಿಗೀಡಾಗಿದ್ದು, ಆನೆ ದಾಳಿಗೆ ಅತಿ ಹೆಚ್ಚು 39 ಜನ ಬಲಿಯಾಗಿದ್ದಾರೆ. ಆನೆ ದಾಳಿ ನಿಯಂತ್ರಿಸಲು 186 ಕಿ. ಮೀ...

1 min read

ಮೂವರು ಯುವಕರ ಕಿರುಕುಳದಿಂದ ನೊಂದ ಬಿಜೆಪಿ ಮುಖಂಡೆಯೊಬ್ಬರ ಪುತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ಇಂಟರ್ ಕಾಲೇಜಿನಲ್ಲಿ ಎಂಟನೇ ತರಗತಿ ಓದುತ್ತಿದ್ದಳು. ಶಾಲೆಗೆ ಬರುವಾಗ ಯುವಕರು ದಿನ...

1 min read

ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (HSRP) ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ 17 ಕೊನೆಯ ದಿನಾಂಕ ಎಂದು ಈ ಹಿಂದೆ ಹೇಳಲಾಗಿತ್ತು ಆದರೆ ಇದೀಗ 3 ತಿಂಗಳ...

1 min read

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರತಿ ವರ್ಷ ನಡೆಸುವ ರಾಜ್ಯಮಟ್ಟದ ಶಾಲಾ ಕ್ರೀಡಾಕೂಟಗಳು ಮತ್ತು ರಾಜ್ಯಮಟ್ಟದ ವಿಶೇಷ ಚೇತನರ ಆಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಕರ್ನಾಟಕ...

1 min read

ಆಮ್ ಆದ್ಮಿ ಪಕ್ಷವು ಉಚ್ಚ ನ್ಯಾಯಾಲಯಕ್ಕೆ ಮೀಸಲಾಗಿರುವ ಭೂಮಿಯಲ್ಲಿ ತನ್ನ ರಾಜಕೀಯ ಕಚೇರಿಯನ್ನು ನಿರ್ಮಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಬುಧವಾರ ಆರೋಪಿಸಿದ್ದಾರೆ. ಎಎಪಿ...

1 min read

ನಿನ್ನೆ ರಾತ್ರಿ ಬಸವೇಶ್ವರನಗರದ ಪದ್ಮರಾಜ್ ಎಂಬುವರು ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ ಗೂಂಡಾ ವರ್ತನೆ ತೋರಿದ್ದಾರೆ ಎಂದು ಮಾಜಿ ಸಚಿವ ಕೆ.ಗೋಪಾಲಯ್ಯ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...