ಅಧಿಕಾರಿಗಳ ವಿರುದ್ಧ 20ಕ್ಕೆ ಅನಿರ್ಧಿಷ್ಠ ಧರಣಿ
1 min read
ಅಧಿಕಾರಿಗಳ ವಿರುದ್ಧ 20ಕ್ಕೆ ಅನಿರ್ಧಿಷ್ಠ ಧರಣಿ
ಡಿಎಸ್‌ಎಸ್‌ನಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಧರಣಿ
ಅಹೋರಾತ್ರಿ ಅನಿರ್ಧಿಷ್ಠ ಧರಣಿಗೆ ಡಿಎಸ್‌ಎಸ್ ಸಿದ್ಧತೆ
ಸುದ್ದಿಗೋಷ್ಠಿಯಲ್ಲಿ ಮುಖಂಡ ರಾಜಾಕಾಂತ್ ಘೋಷಣೆ
ಬ್ರಿಟೀಷ್ ಆಡಳಿತವನ್ನು ಮತ್ತೆ ಜಾರಿಗೊಳಿಸುವ ರೀತಿಯಲ್ಲಿ ವರ್ತಿಸುತ್ತಿರುವ ಜಿಲ್ಲೆಯ ಸರ್ಕಾರಿ ಅಧಿಕಾರಿಗಳ ವರ್ತನೆ ಖಂಡಿಸಿ ಜನವರಿ 20 ರಿಂದ ಎಲ್ಲ ತಾಲೂಕು ಕೇಚರಿಗಳ ಮುಂದೆ ಅನಿರ್ಧಿಷ್ಠ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಸಿ. ರಾಜಾಕಾಂತ್ ಹೇಳಿದರು.
ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದಲಿತ ಮುಖಂಡ ಕೆ.ಸಿ. ರಾಜಾಕಾಂತ್, ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾಮಾನ್ಯ ಜನರ ಪರ ಕೆಲಸ ಮಾಡುವುದನ್ನು ಬಿಟ್ಟು, ಬಂಡವಾಳ ಶಾಹಿಗಳ ವಿರುದ್ಧ ಕೆಲಸ ಮಾಡುತ್ತಿದ್ದು, ಅಧಿಕಾರಿಗಳ ವರ್ತನೆ ವಿರೋಧಿಸಿ ದಲಿತ ಸಂಘರ್ಷ ಸಮಿತಿಯಿಂದ ಜನವರಿ 20ರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳ ತಾಲೂಕು ಕಚೇರಿಗಳ ಮುಂದೆ ಅನಿರ್ಧಿಷ್ಠ ಭರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ದುಡಿಯುವ ಪ್ರತಿ ರೈತನಿಗೂ ಭೂಮಿ ಇರಬೇಕು ಎಂಬ ನಿಯಮವಿದೆ. ಆದರೆ ಆ ನಿಯಮವನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ದಶಕಗಳಿಂದ ಉಳುಮೆ ಮಾಡುತ್ತಿರುವ ಭೂಮಿಗೆ ಸಾಗುವಳಿ ಚೀಟಿ ನೀಡಲು ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದು, ರಿಯಲ್ ಎಸ್ಟೇಟ್ ದಂಧೆಕೋರರಿ ಮತ್ತು ಬಂಡವಾಳ ಶಾಹಿಗಳ ಕೆಲಸಗಳನ್ನು ಕ್ಷಣಗಳಲ್ಲಿಯೇ ಮಾಡುವ ಮೂಲಕ ಬಡವರಿಗೆ ಒಂದು ನ್ಯಾಯ, ಬಂಡವಾಳ ಶಾಹಿಗಳಿಗೆ ಮತ್ತೊಂದು ನ್ಯಾಯ ಎಂಬ0ತೆ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಾಗಾಗಿ ಬಗರ್ ಹುಕ್ಕುಂನಡಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಾಗುವಳಿ ಚೀಟಿ ವಿತರಣೆ ಮಾಡಬೇಕು, ಇನ್ನು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಎಲ್ಲ ಸಮುದಾಯಗಳ ಬಡವರಿಗೂ ಪಕ್ಷಾತೀತ ಮತ್ತು ಜಾತ್ಯತೀತವಾಗಿ ನಿವೇಶನ ರಹಿತರಿಗೆ ನಿವೇಶನ ವಿತರಣೆ ಮಾಡಬೇಕು. ಎಂಬ ಬೇಡಿಕೆ ಜೊತೆಗೆ ಸಾಗುವಳಿ ಚೀಟಿ ವಿತರಣೆ, ಜಮೀನು ಮಂಜೂರು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಠ ಧರಣಿ ಹಮ್ಮಿಕೊಳ್ಳಾಗಿದೆ. ಬೇಡಿಕೆ ಈಡೇರುವರೆಗೂ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂಧಿಸುತ್ತಿಲ್ಲ. ಬ್ರಿಟೀಷ್ ವ್ಯವಸ್ಥೆ ಮತ್ತೆ ಅಧಿಕಾರಿಗಳ ಮೂಲಕ ನೋಡುವ ಸ್ಥಿತಿ ನಿರ್ಮಾಣವಾಗಿದೆ, ಎಲ್ಲ ತಾಲೂಕಿನ ಅಧಿಕಾರಿಗಳು ಜನಸಾಮಾನ್ಯರಿಗೆ ಸ್ಪಂಧಿಸುತ್ತಿಲ್ಲ, ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸ ಅಧಿಕಾರಿಗಳು ಮಾಡಬೇಕಿತ್ತು, ಆದರೆ ಆ ಕೆಲಸ ಅವರು ಮರೆತು ಹಲವು ವರ್ಷಗಳೇ ಆಗಿದೆ. ಸಾಕಷ್ಟು ಬಾರಿ ಮನವಿ ನೀಡಿದರೂ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ, ಅಧಿಕಾರಿಗಳು ಜನಸಾಮಾನ್ಯರ ಪರ ಕೆಲಸ ಮಾಡದೆ ಬಂಡವಾಳ ಶಾಹಿಗಳ ಪರ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದರೂ ಬಡವರನ್ನು ಗುರ್ತಿಸಿ ಸಾಗುವಳಿ ಚೀಟಿ ನೀಡಿಲ್ಲ, 40 ವರ್ಷಗಳ ಹಿಂದೆ ಸರ್ಕಾರಿ ಭೂಮಿಗಳಲ್ಲಿ ಉಳುಮೆ ಮಡುತ್ತಿದ್ದ ಬಡವರಿಗೆ ಗೋಮಾಳ, ಬಗರ್ ಹುಕ್ಕುಂನಡಿ ಸಾಗುವಳಿ ಚೀಟಿ ನೀಡಿಲ್ಲ, ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಿದೆ, ಅಧಿಕಾರಿಗಳು ರಿಯಲ್ ಎಸ್ಟೇಟ್ ಕುಲಗಳ ಪರ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ರೇಣುಕಾ ರಾಜೇಂದ್ರನ್ ಅವರು ಶಾಸಕರಾಗಿದ್ದ ವೇಳೆ ಭೂಮಿ ಖರೀದಿ ಮಾಡಿ, ಬಡವರಿಗೆ ನೀಡಲು ಮುಂದಾಗಿದ್ದರು. ಆದರೆ ಆ ಕೆಲಸವೂ ಆಗಿಲ್ಲ. ಹಕ್ಕು ಪತ್ರ ನೀಡಿ, ನಿವೇಶನ ವಿತರಣೆಯಾಗಿಲ್ಲ ಹೀಗೆ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಅಧಿಕಾರಿಗಳು ಅವುಗಳಿಗೂ ತಮಗೂ ಸಂಬ0ಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗುಡಿಬಂಡೆ ತಾಲೂಕಿನ ಕಡೇಹಳ್ಳಿಯಲ್ಲಿ ರಸ್ತೆ ಅಗಲೀಕರಣದ ವೇಳೆ ಮನೆಗಳನ್ನು ಕಳೆದುಕೊಂಡವರಿಗೆ ನಿವೇಶನ ನೀಡಲು ಈವರೆಗೂ ಆಡಳಿತಕ್ಕೆ ಸಾಧ್ಯವಾಗಿಲ್ಲ. ಅಧಿಕಾರಿಗಳ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ ವೇಳೆ ಜಿಲ್ಲಾಧಿಕಾರಿಗಳೂ ಸೇರಿದಂತೆ ಇಡೀ ಅಧಿಕಾರಿಗಳು ಸ್ಥಳಕ್ಕೆ ಬಂದು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ತಿಂಗಳು ಕಳೆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇಂತಹ ಜಡ್ಡುಗಟ್ಟಿದ ಆಡಳಿತದ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.
ಕಡೇಹಳ್ಳಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಜಾಗಕ್ಕೆ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಬಂದು ನೀಡಿದ ಭರವಸೆ ಇಟ್ಟು ಧರಣಿ ವಾಪಸ್ ಪಡೆದೆವು, ತಿಂಗಳಾದರೂ ಅದರ ಬಗ್ಗೆ ಕ್ರಮ ವಹಿಸಿಲ್ಲ. ಜಿಲ್ಲಾಧಿಕಾರಿ ಮಾತೇ ತಹಸೀಲ್ದಾರ್ ಪಾಲಿಸಿಲ್ಲವೆಂದರೆ ಸಾಮಾನ್ಯರ ಪಾಡೇನು, ಜಿಲ್ಲಾಧಿಕಾರಿಗಳ ಮಾತಿಗೆ ಗೌರವ ನೀಡದ ಕಾರಣ ತಹಸೀಲ್ದಾರ್ ಅಮಾನತು ಆಗಬೇಕಿತ್ತು. ಉಳ್ಳವರ ಪರ ಎಲ್ಲರೂ ನಿಂತಿದ್ದಾರೆ, ಹಾಗಾಗಿ ಬಡವರ ಪರ ಡಿಎಸ್‌ಎಸ್ ಅನಿರ್ಧಿಷ್ಠ ಧರಣಿಗೆ ಮುಂದಾಗಿದೆ. ಜನಪರ ಸಂಘಸ0ಸ್ಥೆಗಳು ಬೆಂಬಲಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಎನ ಸಾಮಾನ್ಯರ ಸಮಸ್ಯೆಗಳು ಬಗೆಹರಿಯದಿದ್ದರೆ ಮುಖ್ಯಮಂತ್ರಿಗಳ ಮನೆಗೂ ಮುತ್ತಿಗೆ ಹಾಕಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ರಾಜಾಕಾಂತ್, ಜನರಿಗೆ ಸಾಮಾಜಿಕ ನ್ಯಾಯ ಕೊಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹಾಗಾಗಿ ಜನಪ್ರತಿನಿಧಿಗಳಾದರೂ ಸಾಮಾನ್ಯರಿಗೆ ನ್ಯಾಯ ಕೊಡಿಸಬೇಕು. ಶಾಂತಿ ರೀತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.