ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

150 ಅಡಿ ಉದ್ದದ ಕನ್ನಡ ಧ್ವಜದ ಮೆರವಣಿಗೆ.

1 min read

ಶಿಡ್ಲಘಟ್ಟ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ವಿಸ್ಡಂ ನಾಗರಾಜ್ ಮಾತನಾಡಿ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
ಶಿಡ್ಲಘಟ್ಟ ನಗರದ ಬಸ್ ನಿಲ್ದಾಣದ ಬಳಿ ಧ್ವಜಾರೋಹಣ ಮಾಡಿ, ೧೫೦ ಅಡಿ ಉದ್ದದ ಕನ್ನಡ ಧ್ವಜವನ್ನು ಮೆರವಣಿಗೆ ಮಾಡಲಾಗುವುದು. ಜಾನಪದ ನೃತ್ಯ ಕಲಾ ತಂಡಗಳು, ೫೦ ಕಳಶಗಳನ್ನು ಹೊತ್ತ ಹೆಣ್ಣುಮಕ್ಕಳು, ಕನ್ನಡ ಬಾವುಟ ಹಿಡಿದ ೨೦೦ ಮಕ್ಕಳು ಮತ್ತು ತಾಯಿ ಭುವನೇಶ್ವರಿ ಹೊತ್ತ ಪಲ್ಲಕ್ಕಿಗಳ ಅದ್ದೂರಿ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ ಎಂದರು.
ಇನ್ನು ಈ ವೇಳೆ ಸಮಾನ ಮನಸ್ಕರ ಹೋರಾಟ ಸಮಿತಿಯ ಸದಸ್ಯ ರಾಮಾಂಜಿ ಮಾತನಾಡಿ, ಮಧ್ಯಾಹ್ನ ಒಂದು ಗಂಟೆಗೆ ಕೋಟೆ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮವಿದ್ದು, ಹತ್ತು ಮಂದಿ ಸಾಧಕರಿಗೆ ಮತ್ತು ಹತ್ತು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಸಂಜೆ ಐದು ಗಂಟೆಗೆ ಡಾ.ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ರೂಪಕ, ಹಾಡುಗಾರಿಕೆ ಇರುತ್ತದೆ. ನಟ ವಿನೋದ್ ಪ್ರಭಾಕರ್, ಹಾಸ್ಯ ಕಲಾವಿದ ಟೆನ್ನಿಸ್‌ಕೃಷ್ಣ, ಮಿಮಿಕ್ರಿ ದೀಕ್ಷಿತ್ ಗೌಡ, ಚಿಟ್ನಳ್ಳಿ ರಾಮಚಂದ್ರ, ಉದಯಾ ಕಾಮಿಡಿ ನಟಿ ರಾಜೇಶ್ವರಿ ಮುಂತಾದ ಕಲಾವಿದರು ಆಗಮಿಸಲಿದ್ದಾರೆ ಎಂದು ಹೇಳಿದರು. ಈ ಸಮಯದಲ್ಲಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

About The Author

Leave a Reply

Your email address will not be published. Required fields are marked *