ಕೇರಳದಲ್ಲಿ ನಿಫಾ ವೈರಸ್‌ಗೆ 14 ವರ್ಷದ ಬಾಲಕ ಬಲಿ
1 min readಕೇರಳದಲ್ಲಿ ನಿನ್ನೆಯಷ್ಟೇ ನಿಫಾ ವೈರಸ್ ಪತ್ತೆಯಾಗಿತ್ತು. ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕ ನಿಫಾ ವೈರಸ್ ಪಾಸಿಟಿವ್ ಆಗಿದ್ದರು. ಇದಾದ ಒಂದು ದಿನದ ಬಳಿಕ, ಭಾನುವಾರ ಕೋಝಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಾಲಕ ಸಾವನ್ನಪ್ಪಿದ್ದಾರೆ.
ನಿಫಾ ವೈರಸ್ ಇರುವುದು ಪತ್ತೆಯಾದ ಮರುದಿನ 14 ವರ್ಷದ ಬಾಲಕ ಭಾನುವಾರ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಪ್ರಕಾರ, ಬಾಲಕನಿಗೆ ಭಾನುವಾರ ಬೆಳಗ್ಗೆ 10.50 ಕ್ಕೆ ತೀವ್ರ ಹೃದಯಾಘಾತ ಉಂಟಾಗಿತ್ತು. ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
“ಬಾಲಕ ವೆಂಟಿಲೇಟರ್ ಬೆಂಬಲದಲ್ಲಿದ್ದರು. ಇಂದು ಬೆಳಗ್ಗೆ ಮೂತ್ರದ ಉತ್ಪಾದನೆಯು ಕಡಿಮೆಯಾಗಿತ್ತು. ತೀವ್ರ ಹೃದಯಾಘಾತ ನಂತರ, ಅವರನ್ನು ಉಳಿಸುವ ಎಲ್ಲಾ ಪ್ರಯತ್ನಗಳು ವಿಫಲವಾದವು. ಹೀಗಾಗಿ ಅವರು 11.30 ಕ್ಕೆ ನಿಧನರಾದರು” ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ನಿಫಾ ವೈರಸ್ ಸೋಂಕಿತ ಬಾಲಕನ ಅಂತಿಮ ಸಂಸ್ಕಾರವನ್ನು ವೈದ್ಯಕೀಯ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವೆ ವೀಣಾ ತಿಳಿಸಿದ್ದಾರೆ. ಕೇರಳ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ನಿಫಾ ವೈರಸ್ ಪಾಸಿಟಿವ್ ಆದ ನಾಲ್ವರನ್ನು “ಹೈ ರಿಸ್ಕ್ ಕೆಟಗರಿ” ಯಲ್ಲಿ ಸೇರಿಸಲಾಗಿದೆ. ಎಲ್ಲರಿಗೂ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಸ್ತುತ, ಮಲಪ್ಪುರಂ ಜಿಲ್ಲೆಯ ಪಂಡಿಕ್ಕಾಡ್, ಕೇರಳದ ನಿಫಾ ವೈರಸ್‌ನ ಕೇಂದ್ರಬಿಂದುವಾಗಿದೆ. ಇನ್ನು, ಆರೋಗ್ಯ ಸಚಿವರು ನೀಡಿರುವ ಸಲಹೆಯೊಂದರಲ್ಲಿ, ನಿಫಾ ಕೇಂದ್ರಬಿಂದು ಮತ್ತು ಹತ್ತಿರದ ಆಸ್ಪತ್ರೆಗಳ ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸಲು ಮತ್ತು ಆಸ್ಪತ್ರೆಗಳಲ್ಲಿ ರೋಗಿಗಳನ್ನು ಭೇಟಿ ಮಾಡುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಇದರ ಜೊತೆಗೆ ಅರ್ಧ ತಿಂದ ಅಥವಾ ಪಕ್ಷಿಗಳು ಅಥವಾ ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ತಿನ್ನದಂತೆ ಜನರಿಗೆ ಸೂಚಿಸಲಾಗಿದೆ. “ಹಣ್ಣನ್ನು ಸರಿಯಾಗಿ ತೊಳೆದ ನಂತರವೇ ತಿನ್ನಿರಿ. ತೆರೆದ ಪಾತ್ರೆಗಳಲ್ಲಿ ಸಂಗ್ರಹಿಸಲಾದ ಪಾನೀಯಗಳನ್ನು ಸೇವಿಸಬೇಡಿ” ಎಂದು ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.
ಈ ಹಿಂದೆ ನಾಲ್ಕು ಬಾರಿ ರಾಜ್ಯವನ್ನು ಕಾಡಿದ್ದ ನಿಫಾ ಹಾವಳಿ ತಡೆಗೆ ವಿಶೇಷ ಕ್ರಿಯಾ ಕ್ಯಾಲೆಂಡರ್ ಸಿದ್ಧಪಡಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿತ್ತು. 2018, 2021 ಮತ್ತು 2023 ರಲ್ಲಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಮತ್ತು 2019 ರಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ನಿಫಾ ವೈರಸ್ ಪ್ರಕರಣಗಳು ಏಕಾಏಕಿ ವರದಿಯಾಗಿವೆ. ಕೋಝಿಕ್ಕೋಡ್, ವಯನಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಬಾವಲಿಗಳಲ್ಲಿ ನಿಪಾ ವೈರಸ್ ಪತ್ತೆಯಾಗಿದೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday