14 ನಿವೇಶನವನ್ನು ಸಿದ್ದರಾಮಯ್ಯ ಸರ್ಕಾರಕ್ಕೆ ಮರಳಿ ನೀಡಿ, ತನಿಖೆವರೆಗೂ ಸಿಎಂ ಸ್ಥಾನದಲ್ಲಿರಬಾರದು: ಆರ್.ಅಶೋಕ್
1 min readಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೂಟಿ ಮಾಡಿದ 14 ನಿವೇಶನ ಹಾಗೂ ಅವರ ಬೆಂಬಲಿಗರು ಲೂಟಿ ಮಾಡಿದ 400-500 ನಿವೇಶನಗಳನ್ನು ಸರ್ಕಾರಕ್ಕೆ ಮರಳಿ ನೀಡಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ತನಿಖೆ ಮುಗಿಯುವವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿರಬಾರದು, ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಬಿಜೆಪಿ ಪಾದಯಾತ್ರೆಯ ನಡುವೆ ಮಂಡ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ʼನಾನು ಕಳ್ಳ ಅಲ್ಲ, ನನ್ನ ಬಿಟ್ಟುಬಿಡಿʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗಿಂತ ಮುಂದೆ ಹೋಗಿ ಹೇಳುತ್ತಿದ್ದಾರೆ. ಈ ಹಿಂದೆ ರೀಡು ಮಾಡಿದವರು ಕೂಡ ಇವರೇ. ಅದರ ಸಂಬಂಧ ರಚನೆಯಾದ ಕೆಂಪಣ್ಣ ಆಯೋಗವನ್ನು ಮುಚ್ಚಿ ಹಾಕಿದ್ದಾರೆ. ಈಗ ದೇಸಾಯಿ ಆಯೋಗ ರಚಿಸಿದ್ದಾರೆ ಎಂದು ದೂರಿದರು.
ಟಿ.ಜೆ.ಅಬ್ರಹಾಂ ಕಳ್ಳ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅಬ್ರಹಾಂ ಅವರನ್ನು ಬೆಂಬಲಿಸಿದ್ದರು. ಅಬ್ರಹಾಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಅಬ್ರಹಾಂ ಫ್ರಾಡ್ ಆಗಿದ್ದರೆ ಆ ಪ್ರಕರಣವನ್ನು ಸರ್ಕಾರ ವಾಪಸ್ ಪಡೆಯಲಿ. ಬಿಜೆಪಿ ವಿರುದ್ಧ ಪ್ರಕರಣ ದಾಖಲಿಸಿದರೆ ಅವರು ಒಳ್ಳೆಯವರು, ಕಾಂಗ್ರೆಸ್ ವಿರುದ್ಧ ಪ್ರಕರಣ ಹಾಕಿದರೆ ಅವರು ಫ್ರಾಡ್ ಆಗುತ್ತಾರೆ ಎಂದು ನಗೆಯಾಡಿದರು.
ಈ ಹಿಂದೆ ಹ್ಯೂಬ್ಲೋಟ್ ವಾಚ್ ಪ್ರಕರಣ ನಡೆದಾಗ ಅದು ನನ್ನದಲ್ಲ ಎಂದು ವಾಪಸ್ ಮಾಡಿದ್ದರು. ಈಗ ಮುಡಾ ಹಗರಣ ಹೊರಬಂದಾಗ, ಬಿಜೆಪಿಯವರೇ ನಿವೇಶನ ನೀಡಿದ್ದಾರೆ ಎನ್ನುತ್ತಿದ್ದಾರೆ. ದಲಿತರ ಕುಟುಂಬದ 27 ಹಕ್ಕುದಾರರಿದ್ದರೂ, ಅವರ ಜಮೀನನ್ನು ನುಂಗಿ ಹಾಕಿದ್ದಾರೆ. ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಹಾಗೂ ವಿವಿಧ ಹುದ್ದೆಗಳಲ್ಲಿದ್ದಾಗಲೇ ಈ ಹಗರಣ ನಡೆದಿದೆ. ವಕೀಲರಾಗಿದ್ದ ಸಿಎಂ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಕಾನೂನು ಪಾಠ ಮಾಡುತ್ತಿದ್ದರು. ಆದರೆ ಶ್ರೀಮತಿಯ ಹೆಸರಲ್ಲಿ ನಿವೇಶನ ನೋಂದಣಿಯಾದರೂ ಅದನ್ನು 10 ವರ್ಷಗಳ ಕಾಲ ನೋಡೇ ಇಲ್ಲ ಎಂದು ಸುಳ್ಳು ಹೇಳಿದ್ದಾರೆ. ಜೆಡಿಎಸ್ ಜೊತೆಗೆ ಅವರೇ ಮೈತ್ರಿ ಮಾಡಿಕೊಂಡು ಈಗ ಆಪಾದನೆ ಮಾಡುತ್ತಿದ್ದಾರೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಹಗರಣದ 187 ಕೋಟಿ ರೂ. ಹಣ ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ಸೇರಿದೆ. ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಣದ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು. ಆದರೆ ಚುನಾವಣೆಗೆ ದುಡ್ಡು ಲೂಟಿ ಹೊಡೆಯಲು ಅವರು ಸುಮ್ಮನಿದ್ದರು. ಆದರೂ ಇದರಲ್ಲಿ ತನ್ನ ಪಾತ್ರವಿಲ್ಲ ಎಂದೇ ಸಿಎಂ ಹೇಳುತ್ತಿದ್ದಾರೆ. ನಾನು 59 ದಾಖಲೆಗಳನ್ನು ಸದನದಲ್ಲಿ ನೀಡಿದ್ದೇನೆ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬ್ಯಾಂಕ್ ಅಧಿಕಾರಿಗಳು ಕೂಡ ಮನವಿ ಮಾಡಿದ್ದಾರೆ. ಈ ಹೋರಾಟವನ್ನು ಬಿಜೆಪಿ ತಾರ್ಕಿಕ ಅಂತ್ಯಕ್ಕೆ ಒಯ್ಯಲಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ 10 ವರ್ಷದಲ್ಲಿ ಕರ್ನಾಟಕಕ್ಕೆ ಅನುದಾನ ಕಡಿಮೆ ಮಾಡಿಲ್ಲ. ಯುಪಿಎ ಸರ್ಕಾರ ಕೊಟ್ಟ ಮೊತ್ತಕ್ಕಿಂತ 5 ಪಟ್ಟು ಹೆಚ್ಚು ಅನುದಾನವನ್ನು ಮೋದಿ ಸರ್ಕಾರ ನೀಡಿದೆ ಎಂದರು.
ಬಿಜೆಪಿ ಪಾದಯಾತ್ರೆ ಅಂತಿಮ ಹಂತಕ್ಕೆ ತಲುಪಿದೆ. ಶನಿವಾರ ಮೈಸೂರಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಜನರು ನಮ್ಮನ್ನು ವಿರೋಧ ಪಕ್ಷವಾಗಿ ಆಯ್ಕೆ ಮಾಡಿದ್ದು, ಸರ್ಕಾರ ಮಾಡುವ ತಪ್ಪುಗಳನ್ನು ಜನರ ಮುಂದಿಡುವುದು ಬಿಜೆಪಿಯ ಕರ್ತವ್ಯ. ಕಾಂಗ್ರೆಸ್‌ನ ಭ್ರಷ್ಟಾಚಾರ, ಅವ್ಯವಹಾರ, ಸ್ವಜನ ಪಕ್ಷಪಾತವನ್ನು ಜನರಿಗೆ ತಿಳಿಸಿ ಹೋರಾಟ ಮಾಡುವುದು ನಮ್ಮ ಹಕ್ಕು ಎಂದು ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ನಮ್ಮ ಹೋರಾಟಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ. ಅವರ ಮನಸ್ಸಿನಲ್ಲೂ ಸಿಎಂ ಆಗಬೇಕೇಂಬ ಆಸೆ ಇದೆ. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯಲಿ ಎಂದೇ ಅವರ ಮನಸ್ಸಿನಲ್ಲಿದೆ. ಅವರ ಅಜ್ಜಯ್ಯ ಕೂಡ ಡಿಸೆಂಬರ್ ಒಳಗೆ ಸಿಎಂ ಆಗಬೇಕು ಎಂದು ಭವಿಷ್ಯ ಹೇಳಿದ್ದಾರೆ ಎಂದು ಆರ್.ಅಶೋಕ ಹೇಳಿದರು.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday