
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಲ್ ಕಾಮಗಾರಿಗೆ ವಿರೋಧ
ಗುಬ್ಬಿ ತಾಲೂಕಿನ ರೈತರಿಂದ ಕಾಮಗಾರಿ ವಿರೋಧಿ ಹೋರಾಟ
ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರ ವಿರುದ್ಧ ಆಕ್ರೋಶ
ಅವೈe್ಞÁನಿಕ ಕಾಮಗಾರಿ ಮಾಡುತ್ತಿರುವ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಗುಬ್ಬಿ ತಾಲೂಕಿನ ಡಿ ರಾಂಪುರದಲ್ಲಿ ಸ್ಥಗಿತಗೊಂಡಿದ್ದ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಲ್ ಕಾಮಗಾರಿ ಪ್ರಾರಂಭ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲು ನೆಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತ ಗೊಳಿಸಲು ಜಮೀನಿನ ಅನುಭವ ಹೊಂದಿರುವ ರೈತರು ಗುಬ್ಬಿ ನ್ಯಾಯಾಲಯದಲ್ಲಿ, ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿ, ತಡೆಯಾಜ್ಞೆ ತಂದಿದ್ದರು ಜಿಲ್ಲಾಡಳಿತ, ತಾಲೂಕು ಆಡಳಿತ ಕಾಮಗಾರಿ ಪ್ರಾರಂಭಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಈಗಾಗಲೇ ಹೋರಾಟ ಮಾಡಿ ಕಾಮಗಾರಿ ಸ್ಥಗಿತ ಗೊಳಿಸಿದ್ದೆವು, ಆದರೆ ರಾಜ್ಯ ಸರ್ಕಾರ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಜಿಲ್ಲೆ ಹಾಗೂ ತಾಲೂಕು ಆಡಳಿತಕ್ಕೆ ಒತ್ತಡ ತಂದು ಅವೈe್ಞÁನಿಕ ಕಾಮಗಾರಿ ಮಾಡಲು ಅಧಿಕಾರಿಗಳನ್ನು ಹಾಗೂ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ರೈತರ ಮೇಲೆ ದೌರ್ಜನ್ಯ ತೋರುವುದು ಉತ್ತಮ ನಡೆಯಲ್ಲ ಎಂದರು. ಅಧಿಕಾರಿಗಳು ಜಲಸಂಪನ್ಮೂಲ ಸಚಿವರ ಸೂಚನೆ ಮೇರೆಗೆ ರೈತರ ಜಮೀನು ವಶಪಡಿಸಿಕೊಂಡು, ತರಾತುರಿಯಲ್ಲಿ ಕಾಮಗಾರಿಗೆ ಮುಂದಾಗುತ್ತಿರುವುದು ಸರಿಯಲ್ಲ ಎಂದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಈ ಕಾಮಗಾರಿ ಅವೈe್ಞÁನಿಕವಾಗಿದ್ದು, ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ೨೪.೫ ಟಿ ಎಂ ಸಿ ನೀರು ಕಳ್ಳ ಮಾರ್ಗದಲ್ಲಿ ರಾಮನಗರ, ಮಾಗಡಿ ಇನ್ನಿತರೆ ನಗರಗಳಿಗೆ ತೆಗೆದುಕೊಂಡು ಹೋಗಲು ನೀರಾವರಿ ಸಚಿವ ಡಿ. ಕೆ. ಶಿವಕುಮಾರ್ ಮುಂದಾಗಿದ್ದಾರೆ. ಜಿಲ್ಲೆ ಗೆ ನೀರು ಸಿಗದಂತೆ ಮಾಡುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಸುಮಾರು ೪೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಹೇಮಾವತಿ ಲಿಂಕ್ ಕೆನಲ್ ಕಾಮಾಗಾರಿ ಮಾಡಿಸಲು ಸಚಿವರು ಮುಂದಾಗಿರುವುದು ಸರ್ಕಾರದ ದೌರ್ಜನ್ಯ ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾ ನಿರತರನ್ನು ಕಡಬ ಹೋಬಳಿ ಅತ್ತಿಕಟ್ಟೆ ಗ್ರಾಮದಲ್ಲಿ ತಡದ ಪೊಲೀಸರು ಪ್ರತಿಭಟನೆ ನೆಡೆಸುತ್ತಿದ್ದ ರೈತ ಮುಖಂಡರನ್ನು ವಶಕ್ಕೆ ಪಡೆದರು. ಪ್ರತಿಭಟನೆಯಲ್ಲಿ ದೀಲಿಪ್ ಕುಮಾರ್, ಹೆಚ್.ಟಿ. ಭೈರಪ್ಪ, ಪಂಚಾಕ್ಷರಿ ಇದ್ದರು.