
೧೬ ನೇ ರಾಷ್ಟಿçÃಯ ಪಂಚಾಯತ್ ರಾಜ್ ದಿನಾಚರಣೆ
ಶಿಡ್ಲಘಟ್ಟ ತಾಲೂಕಿನ ಗುಟ್ಟಾಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜನೆ
ಶಿಡ್ಲಘಟ್ಟತಾಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಸಹಯೋಗದೊಂದಿಗೆ ೧೬ ನೇ ರಾಷ್ಟಿçÃಯ ಪಂಚಾಯತ್ ರಾಜ್ ದಿನಾಚರಣೆಯನ್ನು ಬೆಳ್ಳೂಟಿ ಗೇಟ್ ಬಳಿಯ ಶ್ರೀ ಗುಟ್ಟಾಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಚರಿಸಿದರು.
ಶಿಡ್ಲಘಟ್ಟ ತಾಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಕಲಾ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಪ್ರಧಾನಮಂತ್ರಿ ಮತ್ತು ರಾಜ್ಯಕ್ಕೆ ಮುಖ್ಯಮಂತ್ರಿ ಇರುವಂತೆ ಗ್ರಾಮ ಪಂಚಾಯಿತಿಗೆ ನಾವೇ ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ. ಅಷ್ಟು ಅಧಿಕಾರ ನಮಗೆ ಇದೆ. ಅದನ್ನು ಸದೃಢವಾಗಿ, ಸಮರ್ಪಕವಾಗಿ, ಜನೋಪಯೋಗಿಯಾಗಿ ನಿರ್ವಹಿಸಲು ನಾವು ಸನ್ನದ್ದರಾಗಬೇಕು ಎಂದರು. ನಾಗಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಯನಾ ನಿಖತ್ ಮಾತನಾಡಿ, ರಾಷ್ಟಿçÃಯ ಪಂಚಾಯತ್ ರಾಜ್ ದಿನಾಚರಣೆಯನ್ನು ರಾಷ್ಟಿçÃಯ ಹಬ್ಬವನ್ನಾಗಿ ಆಚರಣೆ ಮಾಡಬೇಕು. ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸಬೇಕಾದರೆ ವಾರ್ಡ್ ಸಭೆ ಮತ್ತು ಗ್ರಾಮಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದರು.
ಎಫ್‌ಇಎಸ್ ಸಂಸ್ಥೆಯ ಎನ್. ರಮೇಶ್ ಮಾತನಾಡಿ, ಏಪ್ರಿಲ್ ೨೪ ರಂದು ಪಂಚಾಯತ್ ರಾಜ್ ವ್ಯವಸ್ಥೆಯ ಅಡಿಪಾಯವನ್ನು ಗುರುತಿಸಲು ರಾಷ್ಟಿçÃಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತಿದೆ. ಸ್ಥಳೀಯ ಸರ್ಕಾರಗಳು ಅಥವಾ ಗ್ರಾಮ ಪಂಚಾಯಿತಿಗಳು ತಮ್ಮನ್ನು ತಾವು ಆಳಿಕೊಳ್ಳಲು ಮತ್ತು ತಮ್ಮ ಗ್ರಾಮಗಳ ಅಭಿವೃದ್ಧಿ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿರುವುದು ಇಂದಿನ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾದ ಶೈಲಜಾ ಪಂಚಾಯಿತಿ ವ್ಯವಸ್ಥೆ ಬೆಳೆದುಬಂದ ಇತಿಹಾಸ ವಿವರಿಸಿದರು.