100 ಕೆಜಿ ಶ್ರೀಗಂಧ, 28 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
1 min read100 ಕೆಜಿ ಶ್ರೀಗಂಧ, 28 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
೫ ಮಂದಿ ಕಳ್ಳಿಯರ ಬಂಧನ, ಇಬ್ಬರು ಮಹಾರಾಷ್ಟçದವರು
100 ಕೆಜಿ ಶ್ರೀಗಂಧ ಸೇರಿದಂತೆ ಒಟ್ಟು 55.60 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿ, 9 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ತೆಲುಗು ಸಿನಿಮಾ ಪುಷ್ಪ ಮಾದರಿಯಲ್ಲಿ ಶ್ರೀಗಂಧ ಸಾಗಿಸುತ್ತಿದ್ದಾಗ ಬಸವಕಲ್ಯಾಣ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ. ಮಹೀಂದ್ರಾ ಗೂಡ್ಸ್ ವಾಹನದಲ್ಲಿ 100 ಕೆಜಿ ಶ್ರೀಗಂಧದ ತುಂಡುಗಳನ್ನು ಸಾಗಿಸಲಾಗುತ್ತಿತ್ತು. ಇದರ ಒಟ್ಟು ಮೌಲ್ಯ 21 ಲಕ್ಷ ಎಂದು ಅಂದಾಜಿಸಲಾಗಿದೆ. ಒಬ್ಬ ಆರೋಪಿಯನ್ನು ಈ ಶ್ರೀಗಂಧ ಸಾಗಣೆ ಪ್ರಕರಣ ಸಂಬ0ಧ ವಶಕ್ಕೆ ಪಡೆಯಲಾಗಿದೆ.
ಬಸವಕಲ್ಯಾಣದ ತ್ರಿಪುರಾಂತ ಸಮೀಪದಿಂದ ಹೋಗುತ್ತಿದ್ದ ವಾಹನವನ್ನು ಅನುಮಾನಗೊಂಡು ಪರಿಶೀಲಿಸಿದಾಗ ಇತರೆ ವಸ್ತುಗಳ ಕೆಳಭಾದಲ್ಲಿ ಶ್ರೀಗಂಧದ ತುಂಡುಗಳನ್ನು ಸೇರಿಸಿ ಸಾಗಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಈ ಸಂಬ0ಧ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ. ಮಹಿಳಾ ಪ್ರಯಾಣಿಕರೊಂದಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸಿ, ಜನದಟ್ಟಣೆ ಸಂದರ್ಭ ನೋಡಿಕೊಂಡು ಚಲಿಸುತ್ತಿದ್ದ ಬಸ್‌ನಲ್ಲಿಯೇ ಚಿನ್ನಾಭರಣ ಕದಿಯುತ್ತಿದ್ದ ಪುಣೆಯ ಇಬ್ಬರು, ಕಲಬುರಗಿಯ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಹಿಳೆಯರು ಬುರ್ಖಾ ಧರಿಸಿ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇವರಿಂದ 28 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಮನ್ನಾ ಖೆಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹುಮನಾಬಾದ್ ಪಟ್ಟಣದಲ್ಲಿ ಎರಡು ತಿಂಗಳ ಅವಧಿಯಲ್ಲಿ ನಡೆದ ಮೂರು ಮನೆಗಳವು ಪ್ರಕರಣಗಳನ್ನು ವೇದಿಸಿ, ಒಬ್ಬ ಅಂತಾರಾಜ್ಯ ಕಳ್ಳನನ್ನು ಬಂಧಿಸಲಾಗಿದೆ. ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಂಡು, ವಾರಸುದಾರರಿಗೆ ಒಪ್ಪಿಸಲಾಗಿದೆ’ ಎಂದು ಎಸ್ಪಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.