ಆರ್ಥಿಕವಾಗಿ ಹಿಂದುಳಿದವರ ಶೇ.10 ಮೀಸಲಾತಿ ಅನುಷ್ಠಾನವಾಗಬೇಕು
1 min readಆರ್ಥಿಕವಾಗಿ ಹಿಂದುಳಿದವರ ಶೇ.10 ಮೀಸಲಾತಿ ಅನುಷ್ಠಾನವಾಗಬೇಕು
ಶೇ.10 ಮೀಸಲಾತಿ ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ
ಜಿಲ್ಲಾ ಬ್ರಾಹ್ಮಣ ಸಮ್ಮೇಳನದಲ್ಲಿ ಸಂಸದ ಡಾ.ಕೆ. ಸುಧಾಕರ್ ಭರವಸೆ
ದೇಶಕ್ಕೆ ಸಂಸಕೃತಿ, ಸಂಸ್ಕಾರ ನೀಡಿದ ಬ್ರಾಹ್ಮಣ ಸಮುದಾಯ
ಬ್ರಾಹ್ಮಣ ಸಮುದಾಯ ಶಿಕ್ಷಣ, ಸಂಸ್ಕಾರ, ನಾಗರಿಕತೆಯಲ್ಲಿ ಎಷ್ಟೇ ಮುಂದುವರಿದಿದ್ದರೂ ಆರ್ಥಿಕವಾಗಿ ಹಿಂದುಳಿದ ಅನೇಕ ಮಂದಿ ಈ ಸಮುದಾಯದಲ್ಲಿದ್ದಾರೆ. ಅದೇ ಕಾರಣಕ್ಕೆ ಪ್ರಧಾನಿ ನರೇದಂ್ರ ಮೋದಿ ಅವರು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕಾಗಿ ಶೇ.10 ಮೀಸಲಾತಿ ಜಾರಿಗೆ ತಂದಿದ್ದಾರೆ. ಅದು ಶೀಘ್ರ ಅನುಷ್ಠಾನವಾಗಲು ಶ್ರಮಿಸುವುದಾಗಿ ಸಂಸದ ಡಾ.ಕೆ. ಸುಧಾಕರ್ ಭರವಸೆ ನೀಡಿದರು.
ಚಿಕ್ಕಬಳ್ಳಾಪುರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಇಂದು ಬ್ರಾಹ್ಮಣ ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಸಮ್ಮೇಳನ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂಸದ ಡಾ.ಕೆ. ಸುಧಾಕರ್ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ ಬ್ರಾಹ್ಮಣ ಸಮುದಾಯದಲ್ಲಿಯೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ ಎಂದು ಗುರ್ತಿಸಿ ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಪ್ರಧಾನಿ ನರೇದಂ್ರ ಮೋದಿಯವರು ಶೇ.10 ಮೀಸಲಾತಿ ನೀಡಿದರು, ಅದು ಇನ್ನೂ ಅನುಷ್ಠಾನವಾಗಿಲ್ಲ. ಶೇ.10 ಮೀಸಲಾತಿ ಶೀಘ್ರ ಅನುಷ್ಠಾನವಾಗಬೇಕು, ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡುವುದಾಗಿ ಸಂಸದರು ಭರವಸೆ ನೀಡಿದರು.
ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಷಿ ಅವರು ಇದೇ ಸಮುದಾಯಕ್ಕೆ ಸೇರಿದವರು. ಅಲ್ಲದೆ ಅವರು ರಾಘವೇಂದ್ರ ಸ್ವಾಮಿಗಳ ಉಪಾಸಕರೂ ಆಗಿದ್ದಾರೆ. ಸಮುದಾಯದ ಬಗ್ಗೆ ಅವರಿಗೆ ಹೆಚ್ಚಿನ ಕಾಳಜಿ ಇದೆ. ಹಾಗಾಗಿ ಅವರೊಂದಿಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರಿಗೆ ಪ್ರದಾನಿ ನೀಡಿರುವ ಶೇ.10 ಮೀಸಲಾತಿಯನ್ನು ಆದಷ್ಟು ಶೀಘ್ರದಲ್ಲಿ ಅನುಷ್ಠಾನ ಮಾಡಲು ಶ್ರಮಿಸುವುದಾಗಿ ಅವರು ಹೇಳಿದರು.
ಬ್ರಾಹ್ಮಣರು ವಿದ್ವತ್ತು, ಶಿಕ್ಷಣ, ವೇದ, ಆಗಮಗಳ ಪಾರಂಗತರಾಗಿ ವಿದ್ವತ್ತಿನಲ್ಲಿ ಶ್ರೀಮಂತರಾಗಿದ್ದರೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚು ಮಂದಿ ಈ ಸಮುದಾಯದಲ್ಲಿದ್ದಾರೆ. ಆಚರಣೆ, ನಾಗರಿಕತೆಯಲ್ಲಿ ಈ ಸಮುದಾಯ ಮುಂದುವರಿದಿದಿದೆ. ಅರ್ಚರಾಗಿ ಪೂಜೆ ಮಾಡುವ ಅನೇಕ ಕುಟುಂಬಗಳು ಇಂದಿಗೂ ಸಂಕಷ್ಟದಲ್ಲಿಯೇ ಬದುಕು ಸಾಗಿಸುತ್ತಿವೆ. ಹಿಂದೆ ವೇದ, ಉಪನಿಷತ್ತು ವಿದ್ವತ್ತು ಇರೋರಿಗೆ, ರಾಜ ಮಹಾರಾಜರು ವಿಶೇಷ ಸ್ಥಾನಮಾನ ನೀಡುತ್ತಿದ್ದರು. ಆದರೆ ಈಗ ಹೆಣ್ಣು ಕೊಡುವವರೇ ಬರವಾಗಿದ್ದಾರೆ ಎಂದರು.
ತಾಯಿ ಸರಸ್ವತಿಯನ್ನು ಆರಾಧಿಸುವವರಿಗೆ ಶಿಕ್ಷಣ ಮಾತ್ರವಲ್ಲದೆ, ಸಂಗೀತ, ಕಲೆ ಸೇರಿದಂತೆ ಎಲ್ಲ ಪ್ರಕಾರಗಳಲ್ಲಿಯೂ ವಿದ್ವತ್ತು ಪಡೆದಿರುತ್ತಾರೆ. ಸಜ್ಜನರೊಂದಿಗೆ ಸಂಪರ್ಕವೇ ವಿಪ್ರ ಬಂಧುಗಳೊoದಿಗೆ ಬೆರೆಯುವುದು. ಬ್ರಾಹ್ಮಣ ಸಮ್ಮೇಳನದಲ್ಲಿ ಭಾಗಿಯಾಗುವುದು ಸಂತಸ ತಂದಿದೆ. ದೇಶದ ಗೌರವ, ಸಂಸ್ಕೃತಿ ಉಳಿಸಲು ಕಾರಣ ಬ್ರಾಹ್ಮಣ ಸಮುದಾಯದ ಹೆಚ್ಚಿನ ಕೊಡುಗೆ ಇದೆ. ಸಮಾಜಕ್ಕೆ, ಸರ್ವರಿಗೆ ಒಳ್ಳೆಯದನ್ನು ಮಾತ್ರ ಬಯಸುವ ಸಮುದಾಯ ಬ್ರಾಹ್ಮಣ ಸಮುದಾಯ. ನಿತ್ಯ ಪೂಜೆ ಮಾಡುವ ಸಮುದಾಯಕ್ಕೆ ಕೆಟ್ಟ ಆಲೋಚನೆಗಳೇ ಬರೋದಿಲ್ಲ ಎಂದು ಹೇಳಿದರು.
ದೇಶದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ವಿಶೇಷವಾದ ಗೌರವ ಇದೆ, ಗುರು ಪರಂಪರೆ ಮರೆಯುವಂತಿಲ್ಲ, ಅಂತಹ ಗುರುಪರಂಪರೆಗೆ ಮುನ್ನುಡಿ ಬರೆದಿದ್ದು ಬ್ರಾಹ್ಮಣ ಸಮುದಾಯ. ಶಂಕರಾಚಾರ್ಯರು , ಮದ್ವಾಚಾರ್ಯರು ಮತ್ತು ರಾಮಾನುಜಾಚಾರ್ಯರು ಇದೇ ಸಮುದಾಯದವರಾಗಿದ್ದು, ದೇಶಕ್ಕೆ ಮತ್ತು ಸಮಾಜಕ್ಕೆ ತ್ರಿಮತಸ್ಥಾಚಾರ್ಯರ ಕೊಡುಗೆ ಅಪಾರವಾಗಿದೆ. ಅವರ ತಪಸ್ಸಿನಿಂದ ಈ ಮಣ್ಣಿಗೆ ವಿಶೇಷ ಆಶೀರ್ವಾದ ಲಭಿಸಿದೆ ಎಂದರು.
ವಿಶ್ವ ವಿಖ್ಯಾತ ಎಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯನವರು ಮತ್ತು ಭಾರತರ್ತನ ಪುರಸ್ಕೃತ ಸಿಎನ್‌ಆರ್ ರಾವ್ ಅವರು ಇದೇ ಸಮುದಾಯಕ್ಕೆ ಸೇರಿದವರು ಮತ್ತು ಇದೇ ಜಿಲ್ಲೆಯವರು, ವಿ. ಕೃಷ್ಣರಾವ್ ಅವರ ಸೇವೆ ಜಿಲ್ಲೆಗೆ ಅಪಾರವಾಗಿದೆ. ಅಂತಹ ನಾಯಕರನ್ನು ಸ್ಮರಿಸಲೇಬೇಕು, ಅವರ ಪುತ್ರರೇ ಇಂದು ಬ್ರಾಹ್ಮಣ ಸಮುದಾಯದ ಅಧ್ಯಕ್ಷರಾಗಿರೋದು ಸಂತಸ ತಂದಿದೆ. ಈ ಸಮುದಾಯ ನನ್ನ ಬೆನ್ನಿಗೆ ನಿಂತು ಆಶೀರ್ವಾದ ಮಾಡಿದೆ. ನಿಮ್ಮ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಈ ಸಮುದಾಯದ ಪರವಾಗಿ ದೆಹಲಿ ಮಟ್ಟದಲ್ಲಿ ದ್ವನಿ ಎತ್ತಲು ನಿಮ್ಮ ಸಹೋದರ ಸುಧಾಕರ್ ಸದಾಸಿದ್ಧ, ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸಂಸದರು ಭರವಸೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿಪ್ರ ಸಮುದಾಯದಿಂದ ಚಿಕ್ಕಬಳ್ಳಾಪುರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಶೋಭಾಯಾತ್ರೆ ನಡೆಸಲಾಯಿತು. ಈ ಶೋಭಾ ಯಾತ್ರೆಯಲ್ಲಿ ಪುರುಷರು, ಮಹಿಳೆಯರು ಎಂಬ ಯಾವುದೇ ಬೇಧವಿಲ್ಲದೆ ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಒಕ್ಕಲಿಗರ ಕಲ್ಯಾಣ ಮಂಟಪದಿoದ ಆರಂಭವಾದ ಮೆರವಣಿಗೆ ಸುಬ್ಬರಾಯನಪೇಟೆ ಮೂಲಕ ಸಾಗಿ ಗರ್ಲ್್ಸ ಸ್ಕೂಲ್ ರಸ್ತೆ, ಬಜಾರ್ ರಸ್ತೆ ಮೂಲಕ ಮತ್ತೆ ಬಿಬಿ ರಸ್ತೆಗೆ ಬಂದು, ನಂತಪ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ಸಾಗಿತು.
ಅಲ್ಲದೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರ ಸಮಾಜದ ಗಣ್ಯರನ್ನು ಗೌರವಿಸುವ ಕೆಲಸವೂ ನಡೆಯಿತು.