ಖಾಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯಾಗಿ 1 ವರ್ಷ: ಮೌನಾಚರಣೆ ಮಾಡಿದ ಕೆನಡಾ ಸಂಸತ್
1 min read
ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾದ ಸಂಸತ್ತಿನಲ್ಲಿ ಸಂಸದರು ಒಂದು ನಿಮಿಷ ಗೌರವ ಸಲ್ಲಿಸಿದ್ದಾರೆ.
ಮಂಗಳವಾರ ಹೌಸ್ ಆಫ್ ಕಾಮನ್‌ನಲ್ಲಿ ಸಂಸದರು ಒಂದು ನಿಮಿಷ ಮೌನ ಆಚರಿಸಿದ್ದಾರೆ.
ಸ್ಪೀಕರ್ ಗ್ರೆಗ್ ಫರ್ಗುಸ್ ಅವರು ನಿಜ್ಜರ್ ಅವರಿಗೆ ಗೌರವ ಸಲ್ಲಿಸುವ ನಿಲುವಳಿ ಮಂಡಿಸಿದರು. ಇದಕ್ಕೆ ಎಲ್ಲ ಪಕ್ಷಗಳು ಒಪ್ಪಿಗೆ ಸೂಚಿಸಿದ ನಂತರ ಸಂಸದರು ಎದ್ದು ನಿಂತು ಮೌನಾಚರಣೆ ಮಾಡಿದರು ಎಂದು ಕೆನಡಾ ಮಾಧ್ಯಮಗಳು ವರದಿ ಮಾಡಿವೆ.
ಖಾಲಿಸ್ತಾನಿ ಭಯೋತ್ಪಾದಕನಿಗೆ ಕೆನಡಾ ಸಂಸತ್ತು ಗೌರವ ಸಲ್ಲಿಸಿದ್ದಕ್ಕೆ ಭಾರತೀಯ ರಾಯಭಾರ ಕಚೇರಿ ಆಕ್ರೊಶ ವ್ಯಕ್ತಪಡಿಸಿದೆ.
ಕಳೆದ ವರ್ಷ ಜೂನ್ 18 ರಂದು ಕೊಲಂಬಿಯಾದ ಸರ್ರೆಯಲ್ಲಿ ನಿಜ್ಜರ್ ಹತ್ಯೆ ಮಾಡಲಾಗಿತ್ತು. ನಂತರ ದಿನಗಳಲ್ಲಿ ಭಾರತ ಸರ್ಕಾರದ ಏಜೆಂಟರು ನಿಜ್ಜರ್ ಹತ್ಯೆ ಮಾಡಿದ್ದಾರೆ, ನಮ್ಮ ಬಳಿ ಸಾಕ್ಷಿ ಇದೆ ಎಂದು ಕೆನಾಡ ಆರೋಪ ಮಾಡಿತ್ತು. ನಂತರ ಬೆಳವಣಿಗೆಗಳಲ್ಲಿ ಭಾರತ ಮತ್ತು ಕೆನಡಾದ ರಾಜತಾಂತ್ರಿ ಸಂಬಂಧ ಹಳಸಿತ್ತು.